ಗಡಿ ಪೊಲೀಸ್ ಠಾಣೆಯ ಸಿಬ್ಬಂದಿ ಹೆಚ್ಚಿಸಿ | ನೂತನ ಕಟ್ಟಡ | ವಸತಿ ನಿರ್ಮಾಣಕ್ಕೆ ಮನವಿ
ಗುರುಮಠಕಲ್: ಪಟ್ಟಣದಲ್ಲಿನ ಪೋಲಿಸ್ ಠಾಣೆಯನ್ನು ಪಿ.ಐ ಹುದ್ದೆಗೆ ಮೇಲ್ದರ್ಜೆಗೇರಿ ಸಲಾಗಿದ್ದು, ಅದರಂತೆಯೇ ಸಿಬ್ಬಂದಿ ಸಂಖ್ಯೆ ಬಲವನ್ನು ಹೆಚ್ಚಿಸ ಲು ಮತ್ತು ಹೊಸದಾಗಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಹಾಗೂ ಹೊಸದಾಗಿ ಪೊಲೀಸ್ ಕ್ವಾಟರ್ಸ್ ನಿರ್ಮಾಣ ಮಾಡಲು ಕರ್ನಾಟಕ ದಲಿತ ಸಂಘರ್ಷ ತಾಲೂಕು ಸಮಿತಿ ಅಧ್ಯಕ್ಷ ಅಶೋಕ ಶನಿವಾರಂ ಮನವಿ ಸಲ್ಲಿಸಿದರು.
ಅತಿಥಿ ಗೃಹದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿ, ಗುರುಮಠಕಲ್ ಪಿ.ಎಸ್.ಐ ಪೋಲಿಸ್ ಠಾಣೆ ಯನ್ನು ಪಿ.ಐ ಪೋಲಿಸ್ ಠಾಣೆಯನ್ನಾಗಿ ಉನ್ನತೀಕರಣ ಗೊಂಡಿದ್ದು, ಆದರೆ ಸದರಿ ಈ ಹಿಂದೆ ಇದ್ದ, ಪಿ.ಎಸ್.ಐ ಪೋಲಿಸ್ ಠಾಣೆಯ ಸಿಬ್ಬಂದಿಯನ್ನೇ ಮುಂದುವರೆಸುತ್ತಿದ್ದಾರೆ.
ತಾಲೂಕು ಕೇಂದ್ರವೆಂದು ಘೋಷಣೆ ಮಾಡಿ ಸುಮಾರು 6 ವರ್ಷಗಳು ಕಳೆದಿರುತ್ತದೆ. ಅದರಂತೆ ಗುರುಮಠಕಲ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಗರ ಮತ್ತು ಗ್ರಾಮಾಂತರ ಜನಸಂಖ್ಯೆ ಹೆಚ್ಚಾಗಿದ್ದು, ಸದರಿ ಜನಸಂಖ್ಯೆಯನುಗುಣವಾಗಿ ಪಿ.ಐ ಪೋಲಿಸ್ ಠಾಣೆಯನ್ನಾಗಿ ಉನ್ನತೀಕರಣಗೊಂಡಿದೆ.
ಆದರೆ ಸಿಬ್ಬಂದಿಯ ಸಂಖ್ಯೆಯನ್ನು ಇನ್ನೂ ಉನ್ನತೀಕರಣ ಗೊಳಿಸಿರುವುದಿಲ್ಲ. ಇದ್ದ ಸಿಬ್ಬಂದಿಯಲ್ಲಿಯೇ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರಲ್ಲಿ ಸಿಬ್ಬಂದಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆದ್ದರಿಂದ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಮನವಿ.
ಗುರುಮಠಕಲ್ ಪೋಲಿಸ್ ಠಾಣೆ ಮತ್ತು ಪೋಲಿಸ್ ಕ್ವಾಟರ್ಸ್ ನಿರ್ಮಾಣವಾಗಿ ಸುಮಾರು ವರ್ಷಗಳು ಕಳೆದಿರುತ್ತದೆ. ಸದರಿ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮಳೆಗಾಲ ಸಮಯದಲ್ಲಿ ಸಿಬ್ಬಂದಿ ಮತ್ತು ಕುಟುಂಬಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಹಗಲು – ರಾತ್ರಿ ಸಾರ್ವಜನಿಕರ ರಕ್ಷಣೆಯನ್ನು ನೀಡುವ ಪೋಲಿಸ್ ಸಿಬ್ಬಂದಿಯವರಿಗೆ ಯಾವುದೇ ಭಯವಿಲ್ಲದೆ ಕರ್ತವ್ಯ ನಿರ್ವಹಿಸಲು ಹಳೆಯ ಕಟ್ಟಡಗಳಿಂದ ಮುಕ್ತಿಗೊಳಿಸಿ ಹೊಸದಾ ಗಿ ಗುರುಮಠಕಲ್ ಪೋಲಿಸ್ ಠಾಣೆ ಮತ್ತು ಪೋಲಿಸ್ ಕ್ವಾಟರ್ಸ್ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಂಡರು.