ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗಾಜರಕೋಟಿ ವಲಯ | ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ
ಗುರುಮಠಕಲ್ : ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ದೂರದೃಷ್ಟಿ ಹಾಗೂ ಜನಪರ ಕಾಳಜಿ ಮೆಚ್ಚುವಂತದ್ದು ಎಂದು ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಗಾಜರಕೋಟ ರಾಚಪ್ಪಯ್ಯ ಕಡ್ಲಪ್ಪಯ್ಯ ದೇವಸ್ಥಾನದಲ್ಲಿ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಗಾಜರಕೋಟ ವಲಯ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವರ ಆಶ್ರಯದಲ್ಲಿ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.
ಎಲ್ಲಿಯ ಧರ್ಮಸ್ಥಳ ಎಲ್ಲಿಯ ಯಾದಗಿರಿ, ಸಾವಿರ ಕಿಲೋಮೀಟರ್ ದೂರ ಇದ್ದರೂ ಇಲ್ಲಿಯವರೆಗೂ ಕಾರ್ಯಕರ್ತರನ್ನು ಕಳುಹಿಸಿ ಜನಸೇವೆ ಮಾಡುತ್ತಿದ್ದಾರೆ. ಅವರು ನಾಡಿನ ನಿಜವಾದ ಸಂತರು ಎಂದು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗಾಜಾರಕೋಟ ಅಧ್ಯಕ್ಷೆ ಬಸಮ್ಮ ಅಯ್ಯನಗೌಡ ಇವರು ವಹಿಸಿದರು. ಉದ್ಘಾಟನೆಯನ್ನು ನೆರವೇರಿಸಿದ ವೇ. ಮೂ. ಶ್ರೀ ಶಾಂತವೀರಯ್ಯ ಸ್ವಾಮಿರವರು ಯೋಜನೆಯ ಕಾರ್ಯಕ್ರಮ ಹಾಗೂ ಪೂಜ್ಯರ ಕನಸು ಮುತ್ತು ಅದು ಜನರನ್ನು ತಲುಪುತ್ತಿರುವ ರೀತಿಯನ್ನು ವಿಶ್ಲೇಶಿಸಿದರು.
ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಯೋಜನಾಧಿಕಾರಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಚನ್ನಕೇಶವಲು ಗೌಡ ಉಪಸ್ಥಿತರಿದ್ದರು. ಪೂಜೆಯ ಪೌರೋಹಿತ್ಯವನ್ನು ಶ್ರೀ ಓಂಕಾರ ಸ್ವಾಮಿ ಇವರು ನೆರವೇರಿಸಿದರು.
ಆದರ್ಶ ಪ್ರೌಢ ಶಾಲೆಯ ಮುಖ್ಯಯೊಪಾಧ್ಯಾಯ ಗವಿಯಪ್ಪ ರವರು ಕಾರ್ಯಕ್ರಮ ನಿರೂಪಿಸಿದರು. ವಲಯದ ಮೇಲ್ವಿಚಾರಕಿ ರೋಷನ್ ಬಿ ಸ್ವಾಗತಿಸಿದರು. ವಲಯದ ಸೇವಾಪ್ರತಿನಿಧಿಗಳು ಹಾಗೂ ಗ್ರಾಮೀಣ ಸೇವಾದಾರರು ವಲಯದ ಎಲ್ಲ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶೌರ್ಯ ವಿಪತ್ತು ತಂಡ ದೇವರಹಳ್ಳಿ ಗಾಜರಕೋಟ ವಲಯ ಇವರು ಸಹಕಾರ ನೀಡಿದರು.
