ಗಾಜರಕೋಟ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವನ್ಯಜೀವಿ ಸಂರಕ್ಷಣಾ ದಿನಾಚರಣೆ | ಶಾಸಕ ಶರಣಗೌಡ ಕಂದಕೂರ ಅವರಿಂದ ಉದ್ಘಾಟನೆ | ವಿದ್ಯಾರ್ಥಿಗಳ ಜೊತೆ ಭೋಜನ ಸವಿದ ನಾಯಕ

ಕ್ಷೇತ್ರ ಸೇರಿದಂತೆ ಕಲ್ಯಾಣ ಕರ್ನಾಟಕದ ಜನರು ವಿಧಾನಸಭೆಯಲ್ಲಿ ಸಮಸ್ಯೆಗಳ ಮೇಲೆ ಬೆಳಕು ಚಲ್ಲಲ್ಲು ಕೇಳಿಕೊಳ್ಳುತ್ತಾರೆ. ಅಧಿವೇಶನದಲ್ಲಿ ಮಾತನಾಡಿದಂತೆ ಸರ್ಕಾರ ತಮಗೆ ಅನುದಾನ ಕಡಿಮೆ ಮಾಡುತ್ತಿದೆ. ಬಾಲ್ಯ ವಿವಾಹ ಆಗಬಾರದು, ಓದುವ ಆಸಕ್ತಿ ಇರುವ ಮಕ್ಕಳಿಗೆ ಪಾಲಕರು ವಿದ್ಯಾವಂತರನ್ನಾಗಿಸಿ – ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್.

ಗುರುಮಠಕಲ್: ಮಕ್ಕಳು ಶಾಲೆ ಮತ್ತು ವಸತಿ ನಿಲಯಗಳಿಗೆ ಪ್ರವೇಶ ಪಡೆಯುವ ವೇಳೆ ಸಸಿ ನೀಡಿ ಅರಣ್ಯ ಅಭಿವೃದ್ಧಿಗೆ ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಶಾಸಕ ಶರಣಗೌಡ ಕಂದಕೂರ ಕರೆ ನೀಡಿದರು.

ಪ್ರಾದೇಶಿಕ ಅರಣ್ಯ ವಲಯ ಯಾದರಿಗಿ, ಗುರುಮಠಕಲ್ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ಗಾಜರಕೋಟ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಸ್ತು, ಸ್ವಾಸ್ಥ್ಯ ಮತ್ತು ಮಸ್ತ್ ಆಗಿರಲು ಅರಣ್ಯ ಬೆಳಿಸಬೇಕು. ಕ್ಷೇತ್ರದಲ್ಲಿ ಟ್ರೀ ಪಾರ್ಕ್ 2 ಕೋಟಿ ಅನುದಾನ ನೀಡಿದ್ದಾರೆ, ಅರಣ್ಯ ವಲಯ ಕಚೇರಿ ಮಂಜೂರು ಮಾಡಿದ್ದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಧನ್ಯವಾದ ಸಲ್ಲಿಸಿದರು. ಟ್ರೀ ಪಾರ್ಕ್ ಗೆ ಶಾಲಾ ಮಕ್ಕಳಿಗೆ ಪಿಕ್ನಿಕ್ ಕರೆದುಕೊಂಡು ಹೋಗುವೆ ಎಂದು ಭರವಸೆ ನೀಡಿದರು.

ಕಾಡು ಪ್ರಾಣಿಗಳ ಸಂರಕ್ಷಣೆ ಜಾಗೃತಿ ನಿಟ್ಟಿನಲ್ಲಿ ಕಾರ್ಯಕ್ರಮ ಅಗತ್ಯ. ಸರ್ಕಾರಿ ಸೌಲಭ್ಯ ಸಿಗಲು ರೈತರು 10 ಗಿಡ ಬೆಳಿಸಬೇಕು ಎನ್ನುವ ನಿಯಮ ಕುರಿತು ಗಮನ ಸೆಳೆಯುವುದಾಗಿ ಹೇಳಿದರು.ಪ್ರಾಣಿಗಳು ಗ್ರಾಮಗಳಿಗೆ ಬರುತ್ತಿವೆ. ಜನರಲ್ಲಿ ಜಾಗೃತಿ ಮೂಡಿಸಲು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಗಾಳಿಗಾಗಿ ಪರದಾಡುವಂತಾಯಿತು.  ಸಸಿಯನ್ನ ನೆಟ್ಟು ಸಂರಕ್ಷಿಸಿ ಎಂದು ಸಲಹೆ ನೀಡಿದರು. ಈಶ್ವರ ಖಂಡ್ರೆ ಅವರು ಪರಿಸರ ಸಂರಕ್ಷಣೆ ಮತ್ತು ಅರಣ್ಯ ಅಭಿವೃದ್ಧಿಯ ಕುರಿತು ಪುಸ್ತಕ ಬರೆದಿದ್ದಾರೆ. ಬೇಸಿಗೆಯಲ್ಲಿ ಪರದಾಡು ಸ್ಥಿತಿ ನಿರ್ಮಾಣವಾಗುತ್ತೆ. ಹಾಗಾಗಿ ಗಿಡಮರಗಳು ಬೆಳೆಸಬೇಕು ಎಂದರು.ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಣ್ಣಾರಾಯ ಬಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಶಾಸಕರು ಗುರುಮಠಕಲ್ ಉಪ ವಲಯಕ್ಕೆ ಶ್ರಮಿಸಿದ್ದಾರೆ. ಕಚೇರಿ ನಿರ್ಮಾಣಕ್ಕೆ ಸೂಕ್ತ ಕ್ರಮವಹಿಸಿದ್ದಾರೆ ಎಂದು ಅವರು ಪರಿಸರ ಕಾಳಜಿಯ ಬಗ್ಗೆ ಹೋಗಳಿದರು.

ಬದುಕಲು ಗಾಳಿ ಮುಖ್ಯ, ಹಾಗಾಗಿ ಗಿಡಮರ ಬೇಕು, ಅವುಗಳ  ರಕ್ಷಣೆ ಅಗತ್ಯವಾಗಿದೆ. ವನ್ಯಜೀವಿ ಸಂರಕ್ಷಣೆಯೂ ಪ್ರಮುಖವಾಗಿದೆ. ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದರು. ಮಾ ಕೆ ನಾಮ್ ಏಕ್ ಪೇಡ್ ಕಾರ್ಯಕ್ರಮದಂತೆ ಪ್ರತಿಯೊಬ್ಬರೂ ಗಿಡ ಹಚ್ಚಿ ಬೆಳೆಸಬೇಕು, 3 ವರ್ಷ ನೋಡಿದರೆ ಅದು ನಮಗೆ ನೂರು ವರ್ಷ ನೋಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಇದೇ ವೇಳೆ ಪ್ರಾಣಿ ಭೇಟಿ ಆದರೆ ಗಮನಕ್ಕೆ ತಂದರೆ ಕ್ರಮವಹಿಸಲಾಗುವುದು ಎಂದರು.

ಉಪನ್ಯಾಸಕ ಶೈಲೇಂದ್ರ ಕವಾಡೆ ಮಾತನಾಡಿ, ಹಸಿರು, ಸ್ವಚ್ಛ ಕ್ಷೇತ್ರ ಗುರುಮಠಕಲ್ ಆಗಲಿ. ಕಲ್ಯಾಣ ಕರ್ನಾಟಕದಲ್ಲಿ 4% ಅರಣ್ಯ ಪ್ರದೇಶವಿದೆ. ಪರಿಸರ ಸಮತೋಲನ ಕಾಪಾಡುವುದು ವನ್ಯಜೀವಿ ಸಂರಕ್ಷಣೆಯಿಂದ ಮಾತ್ರ ಸಾಧ್ಯ. ವನ್ಯಜೀವಿಗಹ ಬಗೆಗಿನ ಮೂಡನಂಬಿಕೆ ಹೋಗಲಾಡಿಸಬೇಕು, ವನ್ಯಜೀವಿ ಸಂರಕ್ಷಣೆ ನಿಟ್ಟಿನಲ್ಲಿ ಜಾಗೃತರಾಗಲು ಸಲಹೆ ನೀಡಿದರು.

ಮನೆ ಎದುರು ತುಳಸಿಗಿಡ ಹಗಲಿರುಳು ಉತ್ತಮ ಗಾಳಿ ನೀಡುತ್ತದೆ. ದೇವರು ಸಹ ವನ್ಯಜೀವಿಗಳು ವಾಹನ ಇದೆ. ಜೀವಿಗಳ ಬಗ್ಗೆ ಪೂಜ್ಯ ಭಾವನೆ ಮೂಡುತ್ತದೆ. ಜಿಲ್ಲೆಯ ಬೋನಾಳ ಪಕ್ಷಿಧಾಮ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಕಾರ್ಯಯೋಜನೆ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ದಾಸರಿ, ಮುಖ್ಯಗುರು ವೆಂಕಟರಾಮ್ ರೆಡ್ಡಿ ವೇದಿಕೆಯಲ್ಲಿದ್ದರು. ಪ್ರಮುಖರು, ಗಣ್ಯರು, ಗ್ರಾಮಸ್ಥರು ಇದ್ದರು. ವಲಯ ಅರಣ್ಯ ಅಧಿಕಾರಿ ರಾಹುಲ್ ಸ್ವಾಗತಿಸಿದರು. ಭೀಮಾಶಂಕರ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!