ಸರಿಯಾಗಿ ಪ್ರಾಯೋಗಿಕ ತರಬೇತಿ ನಡೆಯುತ್ತಿಲ್ಲ | ನಮ್ಮ ಗೋಳು ಯಾರು ಕೇಳುತ್ತಿಲ್ಲ | ಶಾಸಕರೆದುರು ಅಳಲು ತೋಡಿಕೊಂಡ ತರಬೇತುದಾರರು

ಗುರುಮಠಕಲ್: ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ, ಸರಿಯಾಗಿ ತರಗತಿ ನಡೆಯುತ್ತಿಲ್ಲ. ಪ್ರಾಯೋಗಿಕ ತರಬೇತಿಯ ಉಪಕರಣಗಳು ಕೆಟ್ಟು ಹೋಗಿವೆ.. ನಾವು ಯಾರ ಬಳಿ ಹೇಳಿಕೊಳ್ಳಬೇಕು… ನೀವೆ ನಮ್ಮ ಸಮಸ್ಯೆ ಬಗೆಹರಿಸಿ ಸಾರ್ ಎಂದು ವಿದ್ಯಾರ್ಥಿಗಳು ಶಾಸಕ ಶರಣಗೌಡ ಕಂದಕೂರ ಎದುರು ನೋವು ತೋಡಿಕೊಂಡರು.

ಶಾಸಕರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳುವಾಗ ಮಾರ್ಗ ಮಧ್ಯೆ ವಿದ್ಯಾರ್ಥಿಗಳ ಗುಂಪು ಕಂಡು ವಾಹನ ನಿಲ್ಲಿಸಿದ ಶಾಸಕರು ಐಟಿಐ ಕಾಲೇಜು ವಿದ್ಯಾರ್ಥಿಗಳ ಗೋಳು ಆಲಿಸಿ, ತಕ್ಷಣವೇ ಅಧಿಕಾರಿಗಳಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.

ಐಟಿಐ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಮುಖ್ಯವಾಗಿದ್ದು, ಸಲಕರಣೆಗಳು ಸರಿಯಾಗಿಲ್ಲ ಹಾಗಾಗಿ ನಾವು ಹೇಗೆ ಕಲಿಯಬೇಕು ಎಂದು ಶಾಸಕರ ಗಮನಕ್ಕೆ ತಂದರು. ಅಧಿಕಾರಿಗಳಿಗೆ ಮಕ್ಕಳ ಸಮಸ್ಯೆ ವಿವರಿಸಿ, ಸೂಕ್ತ ಕ್ರಮ ಕೈಗೊಂಡು ಸಕಲ ವ್ಯವಸ್ಥೆ ಕಲ್ಪಿಸಲು ಶಾಸಕರು ತಿಳಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!