ಗುರುಮಠಕಲ್ ನಿವೃತ್ತ ಸರ್ಕಾರಿ ನೌಕರರ ಸಮ್ಮೇಳನ  | ಹಿರಿಯ ನಾಗರಿಕರು, ವಿಶೇಷ ಸೇವೆಗೈದವರು, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ

ಗುರುಮಠಕಲ್ : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ 2025ನೇ ಸಾಲಿನ ಗುರುಮಠಕಲ್ ತಾಲೂಕು ಮಟ್ಟದ ವಾರ್ಷಿಕ ಸಮ್ಮೇಳನ, 80 ವರ್ಷ ಪೂರ್ಣಗೊಂಡ ನೌಕರಿಗೆ ಸನ್ಮಾನ ಹಾಗೂ ವಿಶ್ವ ಹಿರಿಯ ನಾಗರಿಕರ ದಿನ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕಿಷ್ಟಿಪ್ಪ ಪುರುಷೋತ್ತಮ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರನ್ನು ಮಾತನಾಡಿ ಅವರು, ನ.16ರಂದು ಹೀರಾ ಗಾರ್ಡನ್ ನಲ್ಲಿ ಬೆಳಿಗ್ಗೆ ಕಾರ್ಯಕ್ರಮ ನಡೆಯಲಿದೆ. ದಿವ್ಯ ಸಾನಿಧ್ಯವನ್ನು ಖಾಸಾಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ರಾಜ್ಯ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ ಕದಂ ಉದ್ಘಾಟಿಸಲಿದ್ದಾರೆ ಎಂದರು.

ಮಕ್ಕಳಿದ್ದರು ನಿವೃತ್ತ ಜೀವನದಲ್ಲಿ ಯಾರು ನೋಡದ ಮಾನವೀಯತೆಯನ್ನೇ ಪ್ರಶ್ನಿಸುವ ಘಟನೆಗಳು ಸಮಾಜಕ್ಕೆ ಮಾರಕವಾಗಿವೆ. ಈ ಬಗ್ಗೆ ಜಾಗೃತಿಯಾಗಬೇಕು. ಪಾಲಕರನ್ನು ನೋಡಿಕೊಂಡು ಹೋಗಬೇಕು. ಜ್ಯೋತಿ ಸಂಜೀವಿನಿ ಯೋಜನೆ ನಿವೃತ್ತ ನೌಕರರಿಗೆ ಕೂಡ ಜಾರಿ ಮಾಡಬೇಕು – ಕಿಷ್ಟಪ್ಪ ಪುರುಷೋತ್ತಮ, ನಿವೃತ್ತ ನೌಕರರ ಸಂಘದ ಅಧ್ಯಕ್ಷ, ಗುರುಮಠಕಲ್.

ಡಾ.ವಿ.ಸಿ.ಮೈತ್ರಿ, ವೈದ್ಯ ನರಸಿಂಗರಾವ್ ಕಾಶಿಗಾವ್, ಶರಣಯ್ಯ ಸ್ವಾಮಿ ಚಂಡರಕಿ, ಎಂ.ವೀರಣ್ಣ, ಆರ್ ವೀರಣ್ಣ, ವೆಂಕಟೇಶ ಕುಲ್ಕರ್ಣಿ, ನಾರಾಯಣರಾವ್ ಕಂಬದ್, ಹನುಮಂತರೆಡ್ಡಿ ಮತ್ತು ವಿಶೇಷ ಆಹ್ವಾನಿತರಾದ ಡಾ. ಶಿವಪ್ರಸಾದ್ ಮೈತ್ರಿ, ಸಿದ್ಧಲಿಂಗಪ್ಪ ಆವುಂಟಿ, ಬಸ್ಸಪ್ಪ ಅರಬಿಂಜರ್ ಅವರನ್ನು ಸನ್ಮಾನಿಸಲಾಗುವುದು ಅಲ್ಲದೇ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು. ಈ ವೇಳೆ ಬುಡ್ಡಪ್ಪ ಜನಾರ್ಧನ, ತಿಮ್ಮಪ್ಪ ನಿಂಗವೋಳ, ನಾರಾಯಣ ಸಾಕಾ, ಮಲ್ಲಿಕಾರ್ಜುನ ಸೇಡಂಕರ್, ಭೀಮರೆಡ್ಡಿ ಉಡಮಲಗಿದ್ದ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!