ಗುರುಮಠಕಲ್ ನಲ್ಲಿ ಹರ್ ಘರ್ ತಿರಂಗಾ ಯಾತ್ರೆ | ಪ್ರತಿಯೊಬ್ಬರು ದೇಶಾಭಿಮಾನ ಮೈಗೂಡಿಸಿಕೊಳ್ಳಲು ತಹಸೀಲ್ದಾರ್ ಶಾಂತಗೌಡ ಕರೆ
ಗುರುಮಠಕಲ್: ಭಾರತದಲ್ಲಿ ಹುಟ್ಟಿರುವ ನಾವೆಲ್ಲ ನಮ್ಮ ದೇಶ, ರಾಷ್ಟ್ರ ಧ್ವಜವನ್ನು ಗೌರವಿಸಬೇಕು ಎಂದು ತಹಸೀಲ್ದಾರ್ ಶಾಂತಗೌಡ ಬಿರಾದಾರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಎಲ್ಲರೂ ರಾಷ್ಟ್ರಭಿಮಾನ ಹೊಂದಿರಬೇಕು. ಅಲ್ಲದೆ ರಾಷ್ಟ್ರ ಧ್ವಜದ ಗೌರವ ಕಾಪಾಡಬೇಕು ಎಂದು ಸಲಹೆ ನೀಡಿದರು.
ಇದಕ್ಕು ಮೊದಲು ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬುಜೀ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಪ್ರಾಧ್ಯಾಪಕಿ ಡಾ.ಜ್ಯೋತಿಲತಾ ತಡಿಬಿಡಿಮಠ ಮಾತನಾಡಿ, ಹರ್ ಘರ್ ತಿರಂಗಾ ಯಾತ್ರೆ ಮೂಲಕ ದೇಶಾಭಿಮಾನ ಮೂಡಿಸುವ ಕಾರ್ಯ ಆಗುತ್ತಿದೆ. ಭಾರತ ವಿಶ್ವಗುರು ಆಗಲು ನಾವು ದೇಶವಾಸಿಗಳೆಲ್ಲ ಶ್ರಮಿಸಬೇಕು ಎಂದರು. ಪಟ್ಟಣದ ಅಂಬೇಡ್ಕರ ಸರ್ಕಲ ನಿಂದ ಪೋಲಿಸ್ ಸ್ಟೇಷನ್. ಸಿಹಿನೀರಿನ ಭಾವಿಯ ಮುಖಾಂತರ ಬಸವೇಶ್ವರ ವೃತ್ತದವರೆಗೆ ಬೈಕ್ ರ್ಯಾಲಿ ನಡೆಯಿತು.
ತಾಲೂಕಿನ ಎಲ್ಲಾ ಸರ್ಕಾರಿ/ಆರೆ ಸರ್ಕಾರಿ/ನಿಗಮ-ಮಂಡಳಿಗಳು/ಸಾರ್ವಜನಿಕ ಉದ್ಯಮಗಳು/ಸ್ವ-ಸಹಾಯ ಗುಂಪುಗಳು/ನಾಗರೀಕ ಸಂಸ್ಥೆಗಳು/ಸಾರ್ವಜನಿಕರು ಶಾಲಾ ಕಾಲೇಜು ಮಕ್ಕಳು/ಇತರೆ ಎಲ್ಲಾ ಸಿಬ್ಬಂದಿಗಳು ಹಾಗೂ ಅವರ ಕುಟುಂದ ವರ್ಗದವರು ಪಾಲ್ಗೊಂಡು ರಾಷ್ಟ್ರಪ್ರೇಮ ಮೆರೆದರು.
ಗ್ರೇಡ್ 2 ತಹಸೀಲ್ದಾರ ನರಸಿಂಹಸ್ವಾಮಿ, ತಾ.ಪಂ. ಇಒ ಅಂಬರೇಷ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಭಾರತಿ ವಂಡೋತಿ, ಪುರಸಭೆ ಉಪಾಧ್ಯಕ್ಷೆ ರೇಣಕ್ತಾ ಪಡಿಗೆ, ಶಿಕ್ಷಣ ಸಂಯೋಜಕ ರವಿಂದ್ರ ಚವ್ಹಾಣ, ಸಿಆರ್ ಪಿ ಬಾಲಪ್ಪ ಸಿರಿಗೆಂ ಸೇರಿ ಸಂಘಟನೆಗಳ ಪ್ರಮುಖರಾದ ಆಶೋಕ ಶನಿವಾರಂ, ನಾಗೇಶ ಗದಿಗಿ, ಕಾಶಪ್ಪ ಬೋಯಾ, ಗೋಪಾಲಕೃಷ್ಣ ಮೇದಾ, ಜನಪತ್ರಿನಿಧಿಗ ಳಾದ ಬಾಬು ತಲಾರಿ, ಭೀಮಶಪ್ಪ ಶನಿವಾರಂ, ಜಗದೀಶ್ಚಂದ್ರ ಮೇಂಗಜಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇತರರು ಇದ್ದರು.
