ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಶಾಂತಿ ಸಭೆ | ಪಿಐ ದೇವೀಂದ್ರಪ್ಪ ಧೂಳಖೇಡ ನೇತೃತ್ವ | ವಿವಿಧ ಸಮಾಜ ಮುಖಂಡರು ಭಾಗಿ
ಗುರುಮಠಕಲ್: ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸಿ ಹಬ್ಬಗಳು ಆಚರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಪಿಐ ದೇವೀಂದ್ರಪ್ಪ ಧೂಳಖೇಡ ಮಾತನಾಡಿದರು.
ಇಲ್ಲಿನ ಪೊಲೀಸ ಠಾಣೆಯಲ್ಲಿ ಹೋಳಿ ಹಬ್ಬದ ಶಾಂತಿ ಸಭೆ ನೇತೃತ್ವ ವಹಿಸಿ ಮಾತನಾಡಿದರು. ರಾಸಾಯನಿಕ ಬಣ್ಣಗಳಿಂದ ದೂರವಿರಿ, ನೈಸರ್ಗಿಕವಾಗಿ ದೊರೆಯುವ ಬಣ್ಣಗಳ ಬಳಕೆಗೆ ಸಲಹೆ ನೀಡಿದರು.
ಇದೇ ವೇಳೆ ಗಾಂಜಾ ಸೇವನೆ ಯುವಕರನ್ನು ಹಾಳು ಮಾಡುತ್ತಿದೆ. ನಿಯಂತ್ರಣಕ್ಕೆ ತರಲು ಎಲ್ಲರ ಸಹಕಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಾಹಿತಿ ನೀಡಿ ಎಂದರು.
ಸೈಬರ್ ಕ್ರೈಂ ಬಗ್ಗೆ ಹೆಚ್ಚು ಜಾಗೃತಿವಹಿಸಬೇಕು. ಯಾವುದೇ ಲಿಂಕ್ ಒತ್ತುವ ಮುನ್ನ ಆಲೋಚನೆ ಮಾಡಬೇಕು ಎಂದು ಜಾಗೃತಿ ಮೂಡಿಸಿದರು.
ಸೈಯದ್ ಅಕ್ಬರ್, ಜಿ.ತಮ್ಮಣ್ಣ, ಜಗದೀಶ ಮೇಂಗಜಿ ಮಾತನಾಡಿ, ಇದು ಕೇವಲ ಬಣ್ಣದ ಹಬ್ಬ ಅಲ್ಲ. ಇದರ ಹಿನ್ನೆಲೆಯೂ ತಿಳಿಯಬೇಕು. ಕೆಟ್ಟದ್ದನ್ನು ತ್ಯಜಿಸುವ ಆನಂದದ ಹಬ್ಬವಾಗಿದೆ.
ಹೋಳಿ ಪ್ರೇಮದ ಪ್ರತೀಕವಾಗಿದೆ. ಅನ್ಯಾಯದ ವಿರುದ್ಧ ನ್ಯಾಯದ ಹಬ್ಬವಾಗಿದೆ. ಶಾಂತಿ ಸುವ್ಯವಸ್ಥೆಗೆ ಗುರುಮಠಕಲ್ ಹೆಸರುವಾಸಿಯಾಗಿದೆ. ಬಣ್ಣಗಳು ಹಲವು ಸ್ನೇಹಿದ ಸಂಕೇತ ತೋರುತ್ತದೆ ಎಂದರು.
ರಂಗಸ್ವಾಮಿ ಮಾತನಾಡಿ, ಜಾತಿ ಭೇದ ಮರೆತು ಪರಸ್ಪರ ಪ್ರೀತಿಯಿಂದ ಹಬ್ಬ ಆಚರಣೆ ಮಾಡುತ್ತೇವೆ. ಎಲ್ಲರೂ ಕಾನೂನಿಗೆ ಗೌರವ ನೀಡಬೇಕು ಎಂದು ಹೇಳಿದರು.
ಪಿಎಸ್ಐ ದಿನೇಶ ಮಾತನಾಡಿ, ಸಮಾಜದಲ್ಲಿ ನಾವು ಶಾಂತವಾಗಿದ್ದು, ಎಲ್ಲರನ್ನೂ ಶಾಂತವಾಗಿ ನಡೆಸಿಕೊಳ್ಳಬೇಕು ಎಂದರು. ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.
ಯಾವುದೇ ಘಟನೆ ಜರುಗುವ ಮೊದಲು ಭವಿಷ್ಯದ ಬಗ್ಗೆ ಯೋಚಿಸಬೇಕು. 112 ಸಮರ್ಪಕ ಬಳಕೆ ಮಾಡಿಕೊಳ್ಳಬೇಕು ಎಂದರು. ರಂಜಾನ್ ಮತ್ತು ಹೋಳಿ ಜನರ ಸಹಕಾರ ಅಗತ್ಯ ಎಂದರು.
ಈ ವೇಳೆ ರವಿ ಗೋವಿನೋಳ, ಶ್ರೀನಿವಾಸ ಗಾಳಾ, ಬನ್ನಪ್ಪ, ಮಲ್ಲಿಕಾರ್ಜುನ, ರವೀಂದ್ರ ರೆಡ್ಡಿ ಪೋತುಲ್, ಕಾಶಪ್ಪ, ಮಾರುತಿ, ಮೋಹನ್ ಇತರರು ಇದ್ದರು.
