ಮಾದಿಗ ಸಮಾಜದ ಒಕ್ಕೂಟದದಿಂದ ಪ್ರತಿಭಟನೆ | ಬಸವೇಶ್ವರ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ | ಮೀಸಲಾತಿ ಜಾರಿಗೆ ವಿಳಂಬಕ್ಕೆ ಅಸಮಾಧಾನ

ಗುರುಮಠಕಲ್: ಒಳ ಮೀಸಲಾತಿ ಜಾರಿಗೆ ತೀವ್ರ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಮಾದಿಗ ಸಮಾಜ ಒಕ್ಕೂಟದಿಂದ ರಸ್ತೆ ತಡೆದು ಪ್ರತಿಭಟಿಸಿದರು. ಗುರುಮಠಕಲ್ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರ ಮೀಸಲಾತಿ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಮಾರ್ಚ್ 12ರಂದು ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಸುವುದಾಗಿ, ಒಳಮೀಸಲಾತಿ ಜಾರಿವಿಳಂಬವಾದರೆ ಇಡೀ ರಾಜ್ಯದಲ್ಲಿ  ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ನಾಯಕ ಕೆ.ಬಿ.ವಾಸು ಮಾತನಾಡಿ, ಕಳೆದ ಸುಮಾರು 35 ವರ್ಷಗಳಿಂದ ಮಾದಿಗ ಸಮಾಜ ಒಳಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳು ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬಹುದು ಎಂದು ಸೂಚನೆ ನೀಡಿದ್ದರೂ ಸಹ ರಾಜ್ಯ ಸರ್ಕಾರ ಸಮಗ್ರ ವರದಿ ತರಿಸಿಕೊಂಡು ಜಾರಿಗೆ ತರಲು ವಿಳಂಬ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರ ಸರ್ಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕ್ರಮ ಕೈಗೊಂಡಿತ್ತು. ಆದರೆ ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಕುರಿತಾದ ಆಕ್ಷೇಪಣೆ ನ್ಯಾಯಾಲಯದಲ್ಲಿ ಇರುವುದರಿಂದ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದರು.

ಇತ್ತೀಚೆಗೆ ಸರ್ಕಾರ ಸುಮಾರು 56,437 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅನುಮೋದನೆ ಪ್ರಮಾಣದ ಆಧಾರದ ಮೇಲೆ ಮಾದಿಗ ಸಮಾಜದ ಒಳಗಿನ 101 ಜಾತಿಗಳಿಗೆ ಕನಿಷ್ಠ 8,465  ಹುದ್ದೆಗಳು ಸಿಗಬೇಕು ಎಂದು ಅವರು ಒತ್ತಾಯಿಸಿದರು. ಆದರೆ ಸಚಿವ ಎಚ್‌.ಸಿ.ಮಹಾದೇವಪ್ಪ ಅವರ ನಡೆಗಳಿಂದ ಮಾದಿಗ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ತಕ್ಷಣ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕು. ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದರೆ  ರಕ್ತ ಕ್ರಾಂತಿಯಾಗುತ್ತದೆ ಎಚ್ಚರಿಕೆ ನೀಡಿ, ರಾಜ್ಯ ಸರಕಾರಕ್ಕೆ  ಗುರುಮಠಕಲ್ ತಹಸೀಲ್ದಾ‌ರ್ ಚನ್ನ ಮಲ್ಲಪ್ಪಘಂಟಿಯವರ ಮೂಲಕ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕ.ದೇವದಾಸ್, ಪುರಸಭೆ ಮಾಜಿ ಉಪಾಧ್ಯಕ್ಷ ಭೀಮಶೆಪ್ಪ ಗುಡಸೆ, ಪುರಸಭೆ ಮಾಜಿ ಸದಸ್ಯ ಆಶನ್ನು ಬುದ್ಧ, ಡಾ.ಬಿ.ಆ‌ರ್. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಹನುಮಂತು ಶನಿವಾರಂ, ಡಾ. ಬಾಬು ಜಗಜೀವನರಾವ್ ಯುವಕ ಸಂಘದ ಅಧ್ಯಕ್ಷ ಭೀಮಶೆಪ್ಪ ಶನಿವಾರಂ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಅಶೋಕ್ ಶನಿವಾರಂ, ತಾಲೂಕು ಅಧ್ಯಕ್ಷ ರವಿ ಬುರನೊಳ, ಸಮಾಜದ ಮುಖಂಡ ಕಾಶಪ್ಪ ಚಿನ್ನಕಾರ, ಯುವ ಮುಖಂಡ ಮಾಣಿಕ್ ಮುಕಿಡಿ, ಶರಣಪ್ಪ ಅಮ್ಮಪಲ್ಲಿ, ಡಾ. ಕೃಷ್ಣ ಚಪೆಟ್ಲಾ, ಭೀಮಶಪ್ಪ, ಕಿಷ್ಟಪ್ಪ , ಹುಸೇನಪ್ಪ ನಜರಾಪೂರ ಸೇರಿದಂತೆ ಹಲವರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!