ಬಸ್ ನಲ್ಲಿಯೇ ಮರೆತಿದ್ದ ಲಕ್ಷಾಂತರ ಬೆಲೆಯ ವಸ್ತು ಶೇಫಾಗಿ ಕೈಸೇರಿತು | ಪಾಂಡುರಂಗಮ್ಮ ಕುಟುಂಬಕ್ಕೆ ಚಿನ್ನಾಭರಣ ನಗದು ಸಹ್ತಾಂತರ | ಚಾಲಕ, ನಿರ್ವಾಹಕರಿಗೆ ಘಟಕದಲ್ಲಿ ಸನ್ಮಾನ


ಗುರುಮಠಕಲ್: ಬೆಳಿಗ್ಗೆ ಗುರುಮಠಕಲ್ ರಿಂದ ಕಲಬುರಗಿಗೆ ಬಸ್ ಸಂಚರಿಸುವ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಲಕ್ಷಾಂತರ ಬೆಲೆಯ ಚಿನ್ನಾಭರಣ, ನಗದು ಇರುವ ಕವರ್ ನ್ನು ಬಿಟ್ಟು ಹೋಗಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಹಸ್ತಾಂತರಿಸುವ ಮೂಲಕ ಗಡಿ ತಾಲೂಕು ಗುರುಮಠಕಲ್ ಸಾರಿಗೆ ಘಟಕದ ಚಾಲಕ, ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.ತೆಲಂಗಾಣದದಿಂದ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಬಂದಿಳಿದ ಚಪೆಟ್ಲಾ ಗ್ರಾಮದ ಪಾಂಡುರಂಗಮ್ಮ ಅವರು ಕಲಬುರಗಿಗೆ ತೆರಳುವ ಕೆಎ33 ಎಫ್ 0538 ಬಸ್ ಹತ್ತಿದ್ದರು, ಗುರುಮಠಕಲ್ ದಿಂದ ಚಪೆಟ್ಲಾ ವರೆಗೆ ಟಿಕೇಟ್ ಪಡೆದು ಪ್ರಯಾಣಿಸಿದ್ದಾರೆ.

ಇಳಿಯುವಾಗ ಕವರ್ ನಲ್ಲಿದ್ದ  ಬೆಲೆ ಬಾಳುವ 20 ಗ್ರಾಂ. ಚಿನ್ನದ ಸರ, 4 ಸಾವಿರಕ್ಕು ಹೆಚ್ಚು ನಗದು, ಆಧಾರ ಕಾರ್ಡ್ ಜೊತೆಗೆ ತನ್ನ ಫೋನ್ ಕೂಡ ಮರೆತು ಇಳಿದಿದ್ದರು, ತಕ್ಷಣವೇ ಸಂಬಂಧಿಕರಾದ ರೈತಪರ ಹೋರಾಟಗಾರ ಬಸವಂತರೆಡ್ಡಿ ಅವರು ಸ್ಥಳೀಯ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.

ತಕ್ಷಣ ಸ್ಪಂದಿಸಿದ ಅಧಿಕಾರಿಗಳು, ಚಾಲಕ ಶಿವಪ್ಪ, ನಿರ್ವಾಹಕ ಎಸ್ ಎಸ್ ಕುಲಾರಿ ಅವರಿಗೆ ಮಾಹಿತಿ ನೀಡಿದ್ದಾರೆ, ಅವರು ಬಸ್ ನಲ್ಲಿ ಹುಡುಕಿದ್ದರಿಂದ ಲಕ್ಷಾಂತರ ಬೆಲೆಯ ವಸ್ತುಗಳು ಮಾಲೀಕರ ಕೈಗೆ ಸೇಫಾಗಿ ಸೇರುವಂತಾಗಿದೆ. ಚಾಲಕ, ನಿರ್ವಾಹಕರ ಪ್ರಾಮಾಣಿಕತೆ ಮತ್ತು ಸಮಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪಾಂಡುರಂಗಮ್ಮ ಕುಟುಂಬದವರು ಧನ್ಯವಾದ ತಿಳಿಸಿದ್ದಾರೆ. ಸಿಬ್ಬಂದಿಗಳ ಪ್ರಾಮಾಣಿಕತೆಗೆ ಘಟಕ ವ್ಯವಸ್ಥಾಪಕ ಪ್ರವೀಣ ಯರನಾಳ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಚಾಲಕ ಮತ್ತು ನಿರ್ವಾಹಕರಿಗೆ ಘಟಕದಲ್ಲಿ ಸಿಬ್ಬಂದಿಗಳು ಸನ್ಮಾನಿಸಿ ಅಭಿನಂದಿಸಿದರು. ಸಿ.ಎಂ. ಮೊಹತ್ತರೆ, ಶರಣಪ್ಪ, ರಾಮರೆಡ್ಡಿ, ಅಮ್ಜದ್ ಖಾನ್, ನಿರಂಜನ ರೆಡ್ಡಿ, ಮಹೇಂದ್ರ ರೆಡ್ಡಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!