ಕೋಲಿ ಸಮಾಜದ ಯುವ ಮುಖಂಡ ಮಹೇಶ್ ಭಂಗಿ ಚಪೆಟ್ಲಾ ಹೇಳಿಕೆ | ಸಮಾಜದ ಸ್ವಾಸ್ಥ್ಯ ಕದಡುವ ಕೃತ್ಯ ಮಾಡಿದವರನ್ನು ಬಂಧಿಸಿ ಶಿಕ್ಷೆ ನೀಡಿ
ಗುರುಮಠಕಲ್: ಶಹಾಬಾದ್ ತಾಲೂಕಿನ ಮುತ್ತಗಾದಲ್ಲಿ ಸ್ಥಾಪಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದನ್ನು ಕೋಲಿ ಸಮಾಜದ ಯುವ ಮುಖಂಡ ಮಹೇಶ್ ಭಂಗಿ ಚಪೆಟ್ಲಾ ಖಂಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಾಜದ ಸ್ವಾಸ್ಥ್ಯ ಕದಡಲು ದುಷ್ಕರ್ಮಿಗಳು, ಸಮಾಜದ ಶರಣರನ್ನು ವಿರೂಪಗೊಳಿಸಲು ಮುಂದಾಗಿದ್ದು, ಸಮಾಜ ಸಹಿಸಲ್ಲ ಎಂದು ಗುಡುಗಿದ್ದಾರೆ.
ಇಂತಹ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸ್ಥಳೀಯವಾಗಿ ಈಗಾಗಲೇ ಪ್ರತಿಭಟನೆ ನಡೆಸಲಾಗಿದೆ. ಮುಂದೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
