ಶುದ್ದ ಕುಡಿಯುವ ನೀರಿನ ಅರವಟಿಗೆ ಆರಂಭ | ಸಾಮಾಜಿಕ ಕಾಳಜಿಯ ಯುವಕ ನರಸಿಮುಲು ಗಂಗನೋಳ್ ಕಾರ್ಯ
ಗುರುಮಠಕಲ್: ಇಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಶುದ್ಧ ಕುಡಿಯುವ ನೀರಿನ ಅರವಟಿಗೆಗೆ ಆರಂಭಿಸಲಾಯಿತು.
ಕುಡಿಯುವ ನೀರಿನ ಅರವಟಿಗೆಯನ್ನು ಹಿರಿಯ ನಿವೃತ್ತ ವೈದ್ಯಧಿಕಾರಿ ಡಾ.ವಿ.ಸಿ.ಮೈತ್ರಿ ಚಾಲನೆ ನೀಡಿ ಮಾತನಾಡಿದರು.
ಸಮಾಜ ಸೇವಕ ನರಸಿಮುಲು ಗಂಗನೊಳ ಅವರು ಸತತವಾಗಿ ಕಳೆದ ಐದು ವರ್ಷಗಳಿಂದ ಶುದ್ಧ ನೀರಿನ ಘಟಕ ಮುನ್ನಡೆಸಿಕೊಂಡು ಬರುತ್ತಿದ್ದು, ಬೇಸಿಗೆ ದಾಹ ತಣಿಸುವ ನೀರು ಸೇವಕರಾಗಿದ್ದಾರೆ ಎಂದು ವರ್ಣಿಸಿದ್ದಾರೆ.
ಇದೇ ಸಂಧರ್ಭದಲ್ಲಿ ನರಸಿಮುಲು ಗಂಗನೋಳ್ ಮಾತನಾಡಿ, ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋದರೆ ಬಾಯಾರಿಕೆ ಆಗುತ್ತದೆ. ಬೇಸಿಗೆಯಲ್ಲಿ ಜನರ ನೀರಿನ ಬವಣೆ ನೀಗಿಸಲು ಅರವಟಿಗೆ ಆರಂಭಿಸಲಾಗಿದೆ. ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಪಡೆದುಕೊಳ್ಳಲು ತಿಳಿಸಿದರು.
ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ. ದಂಡೋತಿ, ಮುಖಂಡರಾದ ನರಸಿಮುಲು ನಿರೇಟಿ, ವಿಜಯಕುಮಾರ್ ನಿರೇಟಿ, ವೆಂಕಟಪ್ಪ ಅವಂಗಪುರ, ನರಸರೆಡ್ಡಿ ಗಡ್ಡೆಸೂಗುರ್, ನಾಗಭೂಷಣ ಅವಂಟಿ, ರಾಮುಲು ಕೋಡಿಗಂಟಿ, ಚನ್ನಪ್ಪ ಕಾಕಲವಾರ್, ಶೋಕ್ ಶನಿವಾರಂ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.
