ಗುರುಮಠಕಲ್ ನಲ್ಲಿ ಶಾಸಕ ಶರಣಗೌಡ ಕಂದಕೂರ ರಿಂದ ವಿತರಣೆ | ಡಿಜಿಟಲೀಕರಣದಿಂದ ಕಾರ್ಯ ಸುಲಭ | 2 ತಿಂಗಳಲ್ಲಿ ಜಿಲ್ಲೆ ಸಂಪೂರ್ಣ ಡಿಜಿಟಲ್
ಗುರುಮಠಕಲ್: ಜನರ ಅಲೆದಾಟ ತಪ್ಪಬೇಕು, ಅಧಿಕಾರಿಗಳ ವರ್ತನೆ ಜನಸ್ನೇಹಿಯಾಗಬೇಕು. ಡಿಜಿಟಲೀಕರಣದಿಂದ ಓನರ್ ಕೆಲಸ ಕಾರ್ಯಗಳಿಗೆ ಅಡೆತಡೆಯಾಗದೇ ತ್ವರಿತಗತಿಯಲ್ಲಿ ಸಾಗಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನರಿಗೆ ತೊಂದರೆ ನೀಡದೇ ಉತ್ತಮ ಕಾರ್ಯ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ ಎಂದು ಸಲಹೆ ನೀಡಿದರು.
ಈ ವೇಳೆ ತಹಸೀಲ್ದಾರ್ ಶಾಂತಗೌಡ ಬಿರಾದಾರ, ಗ್ರೇಡ್ 2 ತಹಸೀಲ್ದಾರ್ ನರಸಿಂಹ ಸ್ವಾಮಿ, ಬಸವರಾಜ ಸಜ್ಜನ್, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್ ಕಟಕಟಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶರಣು ಆವಂಟಿ, ಮಂಡಲ ಅಧ್ಯಕ್ಷ ಪ್ರಕಾಶ ನೀರೆಟಿ, ಗೋವಿಂದ ಮೇಂಗಜಿ, ಪುರಸಭೆ ಸದಸ್ಯರಾದ ಸಿರಾಜುದ್ದೀನ್ ಚಿಂತಕುಂಟಿ, ಆಶನ್ನ ಬುದ್ಧ, ಬಾಲಪ್ಪ ದಾಸರಿ, ಅಂಬಾದಾಸ ಜೀತ್ರಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು, ಕಂದಾಯ ಇಲಾಖೆ ಸಿಬ್ಬಂದಿಗಳು ಇದ್ದರು.
