ಆಶುಭಾಷಣ ಸ್ಪರ್ಧೆಯಲ್ಲಿ | ಚಿಂತನಹಳ್ಳಿ ಶಾಲಾ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ | ಜಯ ಕರ್ನಾಟಕ ಸಂಘಟನೆ ವತಿಯಿಂದ ಗೌರವದ ಸನ್ಮಾನ
ಗುರುಮಠಕಲ್ : ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಚಿಂತನಹಳ್ಳಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಜೈಸಿಕಾ ತಂದೆ ವಿಜಯ ಕುಮಾರ ಆಶು-ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಳು.
ಚಿಂತನಹಳ್ಳಿ ಶಾಲೆಗೆ ಕೀರ್ತಿ ಪತಾಕೆ ಹಾರಿಸಿದ ಹಿನ್ನಲೆಯಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷ ನಾಗೇಶ್ ಗದ್ದಿಗಿ ಮತ್ತು ಪದಾಧಿಕಾರಿಗಳು ಇಂದು ಗಣರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿನಿಯ ಸಾಧನೆಯನ್ನು ಮೆಚ್ಚಿ ವಿದ್ಯಾರ್ಥಿಗಳಿಗೆ ಪ್ರೇರಣೆ ಆದ ಜೈಸಿಕಾಗೆ ಗೌರವ ಸನ್ಮಾನ ಮಾಡಿದರು.
ನಂತರ ಮಾತನಾಡಿದ ನಾಗೇಶ್ ಗದ್ದಿಗಿ, ಸರಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದ ಅಧಿಕಾರಿಗಳಾಗಿ ಹೊರ ಹೊಮ್ಮಿದ್ದಾರೆ. ಇಂದು ಸಾಧನೆ ಮಾಡಿದ ಜೈಸಿಕಾ ಕೀರ್ತಿ ಶಾಲೆಯ ಗುರುಗಳಿಗೆ ಮತ್ತು ಊರಿಗೆ ಸಲ್ಲುತ್ತದೆ. ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುವ ಮೂಲಕ ಹೆತ್ತ ತಂದೆ ತಾಯಿಗೆ ವಿದ್ಯೆ ಕೊಟ್ಟ ಗುರುಗಳಿಗೆ ಗೌರವ ತರುವ ಕೆಲಸ ಮಾಡಬೇಕು.
ಪ್ರತಿಯೊಂದು ಕ್ಷೇತ್ರದಲ್ಲಿ ನಮ್ಮ ಜಿಲ್ಲೆ ಹಿಂದುಳಿದ ಹಣೆಪಟ್ಟಿ ಪಡೆದಿದ್ದು ಇದನ್ನು ಹೋಗಲಾಡಿಸಲು ನೀವು ಉನ್ನತ ಮಟ್ಟದಲ್ಲಿ ವ್ಯಾಸಂಗ ಮಾಡಬೇಕು. ಸದಾ ನಮ್ಮ ಸಂಘಟನೆ ನಿಮ್ಮ ಬೆಂಬಲ ವಾಗಿ ಇರುತ್ತದೆ ಶೈಕ್ಷಣಿಕ ರಂಗದಲ್ಲಿ ಯಾವುದೇ ಸಮಸ್ಯೆ ಇದ್ದರೂ ನಮಗೆ ತಿಳಿಸಿ ಸದ ನಿಮ್ಮ ಪರವಾಗಿ ನಿಂತು ನಿಮಗೆ ಬೆಂಬಲ ನೀಡುವೆವು ಎಂದು ಹೇಳಿದರು.
ಊರಿನ ಮುಖಂಡರಾದ ಪಂಪನಗೌಡ ಮಾಲಿ ಪಾಟೀಲ್, ನಾಗರೆಡ್ಡಿ ಮನಿಕೊಂಡಿ, ಜಲ್ಲಪ್ಪ ಮೆರಿಗಿ, ಚಿಂತನಹಳ್ಳಿ ಗ್ರಾಮ ಶಾಖೆಯ ಅಧ್ಯಕ್ಷ ಹನುಮೇಶ ಬೋಯಿನ್ ಉಪಾಧ್ಯಕ್ಷ ಬನ್ನಪ್ಪ ಮಡುಗು, ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಬುರ್ರಮೋಲ್, ಗ್ರಾಮ ಪಂಚಾ ಯಿತಿ ಸದಸ್ಯ ಶರಣಪ್ಪ ಹೊರಪೇಟ್, ಜಗಪ್ಪ ಕಿಸ್ಟಾಪೂರ್, ಮಹದೇವಪ್ಪ ನಾಯಿಕೊಡಿ, ನಾಗಪ್ಪ ಭೋವಿ, ಸಾಬಣ್ಣ ಅಲೆಮನಿ, ಸಿದ್ದು, ಹರಸುರ, ಜಗದೀಶ್, ಖತಲಪ್ಪ, ಮೌನೇಶ್ ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು.