ಸಚಿವ ಪ್ರಿಯಾಂಕ ಖರ್ಗೆ ಜನ್ಮ ದಿನ | ಕಾರ್ಯಕರ್ತರಿಂದ ರಕ್ತ ದಾನ ಶಿಬಿರ | ಮಾಜಿ ಸಚಿವರು, ನಿಗಮ ಮಂಡಳಿ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಭಾಗಿ

ಗುರುಮಠಕಲ್: ತಾನು ಯುದ್ಧ ಭೂಮಿಯಲ್ಲಿ ಸೋತಿದ್ದು, ಆರಿಸಿ ಬಂದರೆ ಪ್ರಭಾವಿ ಮಂತ್ರಿಯಾಗಿ ಅಭಿವೃದ್ಧಿ ಮಾಡುತ್ತಿದ್ದೆ. ಪುನಃ ಯುದ್ಧದಲ್ಲಿ ಗೆದ್ದು ಡಿಸಿಎಂ ಆಗುವೆ ಎಂದು ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ ಇಂಗಿತ ವ್ಯಕ್ತಪಡಿಸಿದ್ದಾರೆ. ಗುರುಮಠಕಲ್ ನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.

ಅಭಿಮಾನಿಗಳಿಂದ ರಕ್ತದಾನ: ಸಚಿವ ಪ್ರಿಯಾಂಕ ಖರ್ಗೆ ಅವರು ಜನ್ಮ ದಿನದ ಹಿನ್ನೆಲೆಯಲ್ಲಿ ಗುರುಮಠಕಲ್ ಮತ್ತು ಸೈದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಮೊದಲಿಗೆ ಕಾರ್ಯಕ್ರಮಕ್ಕೆ ಮಾಜಿ ಸಚಿವರು, ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರು ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು. ಬಳಿಕ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ ಮಾತನಾಡಿ, ಹಾರ, ತುರಾಯಿ ವ್ಯರ್ಥ ಖರ್ಚು ತಡೆಯಲು ಜನರಿಗೆ ಉಪಯೋಗವಾಗಲಿ ಎಂದು ಅಭಿಮಾನಿಗಳಿಗೆ ಕರೆ ಸಚಿವರು ನೀಡಿದ್ದಾರೆ. ಹಾಗಾಗಿ ಸಾಮಾಜಿಕ ಕಾರ್ಯ ಮಾಡುವ ಕಾರ್ಯಕರ್ತರ ನಿರ್ಧಾರ ಶ್ಲಾಘನೀಯ ಎಂದರು.

ಜನರ ಜೀವ ಉಳಿಸಲು ಗುರುಮಠಕಲ್, ಸೈದಾಪುರ ಬ್ಲಾಕ್ ಅಧ್ಯಕ್ಷರು ರಕ್ತದಾನ ಶಿಬಿರ ಆಯೋಜಿಸಿದ್ದಾರೆ. ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಪ್ರಿಯಾಂಕ ಖರ್ಗೆ ಮುಂದೆ ಸಿಎಂ ಆಗೋದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.ಅಪಘಾತ ಇತರೆ ಸಂದರ್ಭಗಳಲ್ಲಿ ರಕ್ತ ಶ್ರಾವವಾಗಿ ಎಷ್ಟೋ ಜನ ಮೃತರಾಗುವರು, ಅಗತ್ಯ ಇದ್ದಾಗ ಕೊರತೆಯಿಂದ ಸಾಕಷ್ಟು ತೊಂದರೆ, ಜೀವ ಉಳಿಸಲು ಈ ಕ್ರಮ ಸಾರ್ಥಕ ಎಂದರು. ಇದೊಂದು ಸಾಮಾಜಿಕ ಕಾರ್ಯವಾಗಿದೆ. ರಕ್ತ ದಾನಿಗಳಿಗೆ ಧನ್ಯವಾದ ಹೇಳಿದರು.

ಗುರುಮಠಕಲ್ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ‌ ಮಾತನಾಡಿ, ಸಚಿವ ಪ್ರಿಯಾಂಕ ಖರ್ಗೆ ಹುಟ್ಟು ಹಬ್ಬ ಆಚರಣೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸ್ವಯಂ ಪ್ರೇರಿತರಾಗಿ ಕಾರ್ಯಕರ್ತರು ರಕ್ತದಾನ ಮಾಡಿದ್ದು, 60 ರಷ್ಟು ಜನ ಮಾಡಿದ್ದಾರೆ. ಈ ವೇಳೆ ಪುರಸಭೆ ಉಪಾಧ್ಯಕ್ಷೆ ರೇಣುಕಾ ಪಡಿಗೆ, ಸೈದಾಪುರ ಬ್ಲಾಕ್ ಅಧ್ಯಕ್ಷ ನಿರಂಜನ ರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ, ನರಸಿಂಹ ರೆಡ್ಡಿ ಚಂಡರಕಿ, ಸಂಜೀವ ಚಂದಾಪುರ, ವಿಜಯ ನೀರೆಟಿ, ಬಾಬು ತಲಾರಿ, ಅಖ್ತರ್ ಪ್ಯಾರೆ, ಖಾಜಾ ಮೈನೋದ್ದೀನ್, ವಸಂತರಾವ ಹಬೀಬ್, ಸಾಬಣ್ಣ ಹೂಗಾರ, ಚನ್ನಬಸವ, ಫಯಾಜ್ ಅಹ್ಮದ್, ಆನಂದ ಯದ್ಲಾಪುರ, ಶಾಂತಮ್ಮ ಕೇಶ್ವಾರ, ಸರೋಜಾ, ಚಾಂದಪಾಷಾ, ಯುವ ಅಧ್ಯಕ್ಷ ಸೈಯದ್ ಬಾಬಾ, ಅಶೋಕ ಶನಿವಾರಂ, ಯುನೂಸ್ ಶೇಕ್, ಮುರಳಿಧರ ಸೇರಿದಂತೆ ಹಲವು ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!