ಕಲ್ಯಾಣ ಕರ್ನಾಟಕದ ಪ್ರಸಿದ್ಧ ಟ್ರೀ ಪಾರ್ಕ್ ಖ್ಯಾತಿ ಪಡೆಯಲಿರುವ ಸ್ಥಳ

ಕ್ಷೇತ್ರಕ್ಕೆ ಆರ್.ಎಫ್.ಓ ಕಚೇರಿ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ

ಗುರುಮಠಕಲ್ : ಕ್ಷೇತ್ರದಲ್ಲಿ ಸಾರ್ವಜನಿಕರು ನಿಸರ್ಗದ ರಮಣೀಯತೆ ಕಣ್ಣುತುಂಬಿಸಿಕೊಳ್ಳಲು ಕ್ಷೇತ್ರದಲ್ಲಿ ಟ್ರೀಪಾರ್ಕ ಅಭಿವೃದ್ಧಿಯಾಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ಹೊರವಲಯದ ಕೇಶ್ವಾರ ರಸ್ತೆಯ ನಜರಾಪುರ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ 77.50 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಟ್ರೀ ಪಾರ್ಕ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಪಟ್ಟಣಕ್ಕೆ ಹತ್ತಿರವೇ ಸುಂದರ ನಿಸರ್ಗ ತಾಣವಿದ್ದು, ಇದೊಂದು ಪಿಕ್‌ನಿಕ್ ಸ್ಪಾಟ್ ಆಗುವಂತೆ ನೋಡಿಕೊಳ್ಳಬೇಕು. ಸಚಿವರು ಪರಿಸರ ಕಾಳಜಿಯಿಂದ ಅನುಷ್ಟಾನಕ್ಕೆ ತಂದಿರುವ ಯೋಜನೆಯನ್ನು ಅಧಿಕಾರಿಗಳು ಉತ್ತಮ ಕೆಲಸ ಮಾಡಿ ಸಾರ್ವಜನಿಕರಿಗೆ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿ, ಜಿಲ್ಲೆಯಲ್ಲೆ ಗುರುಮಠಕಲ್ ಕ್ಷೇತ್ರದಲ್ಲಿ ಹೆಚ್ಚಿನ ಅರಣ್ಯ ಪ್ರದೇಶವಿದೆ. ಇಂತಹ ಸುಂದರ ವಾತಾವರಣದಲ್ಲಿ ನೆಲೆಸಿರುವ ನಾವು ಪುಣ್ಯವಂತರು, ಪ್ರತಿಯೊಬ್ಬರು ಪರಿಸರ ಕಾಳಜಿ ತೋರಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರಕ್ಕೆ ಆರ್.ಎಫ್.ಓ ಕಚೇರಿ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ನಡೆದಿದೆ. ಅರಣ್ಯ ಸಚಿವರನ್ನು ಭೇಟಿಯಾಗಿ ಈಗಾಗಲೇ ಮನವಿ ಮಾಡಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರಕಿದೆ. ಕಳೆದ ತಮ್ಮ ತಂದೆ ದಿ.ನಾಗನಗೌಡ ಕಂದಕೂರ ಅವಧಿಯಲ್ಲಿ ನಜರಾಪುರ ಫಾಲ್ಸ್ ಅಭಿವೃದ್ಧಿಗೆ 90 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ತಾಂತ್ರಿಕ ಕಾರಣದಿಂದ ಕಾಮಗಾರಿಗೆ ಅಡೆತಡೆಯಾಗಿದೆ. ದಬದಬಿ ಫಾಲ್ಸ್ ಮತ್ತು ಗವಿಸಿದ್ಧಲಿಂಗೇಶ್ವರ ಅಭಿವೃದ್ಧಿಗೆ ಕೇಂದ್ರದಿOದಲೂ ಅನುದಾನ ತಂದು ಅಭಿವೃದ್ಧಿ ಪಡಿಸುವ ಚಿಂತನೆಯಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗಿದ್ದು, ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಅಧಿಕಾರಿಗಳ ತಂಡ ಪರಿಶೀಲನೆಗೆ ಬರುವ ನಿರೀಕ್ಷೆಯಿದೆ ಎಂದರು.

ಈ ವೇಳೆ ಜಿಲ್ಲಾ ಅರಣ್ಯಾಧಿಕಾರಿ ಕಾಜೋಲ್ ಪಾಟೀಲ್, ಸಹಾಯಕ ಅರಣ್ಯಾಧಿಕಾರಿ ಸುನೀಲ್ ಚವಾಣ, ಬುರಾನುದ್ದಿನ್, ಸುನೀಲ ಕುಮಾರ ಮಣ್ಣೂರ, ಪ್ರಮುಖರಾದ ಸುಭಾಷ್ಚಂದ್ರ ಕಟಕಟಿ ಹೊನಗೇರಾ, ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ಜಿ.ತಮ್ಮಣ್ಣ, ಕೃಷ್ಣಾರೆಡ್ಡಿ ಪಾಟೀಲ್, ಶರಣು ಆವುಂಟಿ, ಬಸ್ಸಣ್ಣ ದೇವರಹಳ್ಳಿ, ಪ್ರಕಾಶ ನೀರೆಟಿ, ಶಿವರೆಡ್ಡಿ ನಜರಾಪುರ, ಮಲ್ಲಿಕಾರ್ಜುನ ಅಡಿಕಿ, ಬಾಲಪ್ಪ ದಾಸರಿ, ರಾಜೇಶ ಮಿನಾಸಪುರ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!