ಕಲ್ಯಾಣ ಕರ್ನಾಟಕದ ಯುವ ಜನರ ಕಣ್ಮನಿ ಶಾಸಕ ಶರಣಗೌಡ ಕಂದಕೂರ ಅವರ ಜನ್ಮದಿನ, ಎಲ್ಲೆಡೆ ಸಾಮಾಜಿಕ ಕಾರ್ಯ
ಅಭಿಮಾನಿಗಳಿಂದ ಮೋತಕಪಲ್ಲಿ ಬಲಭೀಮ ದೇವಸ್ಥಾನದ ವರೆಗೆ ಪಾದಯಾತ್ರೆ ವಿಶೇಷ ಪೂಜೆ
ಗುರುಮಠಕಲ್: ಕಲ್ಯಾಣ ಕರ್ನಾಟಕದ ಯುವ ಜನರ ಕಣ್ಮನಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ಜನ್ಮದಿನ ಹಿನ್ನೆಲೆ ಎಲ್ಲೆಡೆ ಅಭಿಮಾನಿಗಳ ಸಂತಸ ವ್ಯಕ್ತವಾಗಿದೆ.
ಗುರುಮಠಕಲ್, ಯಾದಗಿರಿ ಸೇರಿದಂತೆ ಹಲವೆಡೆ ಅಭಿಮಾನಿಗಳು ವ್ಯರ್ಥ ಖರ್ಚು ಮಾಡದೇ ತಮ್ಮ ಪ್ರೀತಿಯ ನಾಯಕನಿಗೆ ಗೌರವವಾಗಿ ಸಾಮಾಜಿಕ ಕಾರ್ಯ ಮಾಡುವ ಮೂಲಕ ಇನ್ನಷ್ಟು ಕೀರ್ತಿ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ.
ಇನ್ನೊಂದೆಡೆ ಗುರುಮಠಕಲ್ ನಲ್ಲಿ ಶಾಸಕರ ಅಭಿಮಾನಿಗಳು ಮೋತಕಪಲ್ಲಿ ಬಲಭೀಮಸೇನ ದೇವಸ್ಥಾನದ ವರೆಗೆ ಪಾದಯಾತ್ರೆ ಮಾಡುವ ಮೂಲಕ ನಾಯಕನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಶಾಸಕರಾದ ಶರಣಗೌಡ ಕಂದಕೂರ್ ಅಣ್ಣನವರ ಮುಂದಿನ ರಾಜಕೀಯ ಜೀವನ ಇನ್ನಿಷ್ಟು ಉತ್ತುಂಗಕ್ಕೇರಲಿ, ಭಗವಂತ ಸುಖ, ಸಮೃದ್ಧಿ, ಆಯುರಾರೋಗ್ಯ ಕರುಣಿಸಲಿ, ಜನಪರ ಕಾರ್ಯಗಳು ಹೀಗೆಯೇ ಮುಂದುವರಲು ಶಕ್ತಿ ನೀಡಲು ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ರಮೇಶ್ ಹೂಗಾರ್, ಭಾನು ಮೇಧಾ, ಸದಾಶಿವರೆಡ್ಡಿ, ನರಸಪ್ಪ ವಕೀಲ್, ಶಿವಾರೆಡ್ಡಿ, ರವಿ ಹೂಗಾರ, ಚಿರು, ಹರ್ಷವರ್ಧನ್ ರೆಡ್ಡಿ, ಭೀಮ ಯಾದವ್, ಬಸವರಾಜ ಮಜ್ಜಿಗೆ, ಶಿವಕುಮಾರ್ ಯಂಪಾಡ್, ಗೋಪಾಲ ರಾಠೋಡ ಇದ್ದರು.