ಗುರುಮಠಕಲ್ : ಸಮೀಪದ ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದ ಹೊರವಲಯದಲ್ಲಿ ಮಾತಾ ಮಾಣಿಕೇಶ್ವರಿ ಸ್ಪೋನ್ ಕ್ರಷರ್ನ್ನು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಶುಭಾಷ ಕಟಕಟೆ, ಶರಣು ಆವುಂಟಿ, ಅಜಯರೆಡ್ಡಿ ಎಲ್ಲೇರಿ, ಪ್ರಕಾಶ ನೀರೆಟಿ, ಬಸಣ್ಣ ದೇವರಹಳ್ಳಿ, ಈಶ್ವರ ರಾಠೋಡ, ಮಲ್ಲಿಕಾರ್ಜುನ ಅರುಣಿ, ರವಿಂದರೆಡ್ಡಿ ಗವಿನೋಳ, ಬಾಲಪ್ಪ ದಾಸರಿ, ಜ್ಞಾನೇಶ್ವರರೆಡ್ಡಿ, ಸತೀಶ ತಿವಾರಿ,ಆಪ್ತ ಸಹಾಯಕ ಗುರುರಾಜ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.
