ಮೊಹರಂ ಕೊನೆಯ ದಿನ | ವಿಜೃಂಭಣೆಯ ಹಜರತ್ ನಬೀಸಾಬ್ – ಬಂದೆನವಾಜ್ ಮಿಲನಕ್ಕೆ ಸಾಕ್ಷಿಯಾಗಲಿದ್ದಾರೆ ಲಕ್ಷಾಂತರ ಜನ
ಗುರುಮಠಕಲ್ : ಮೊಹರಂ ಕೊನೆಯ ದಿನವಾದ ಇಂದು ಅಲಂ ಗಳ ಸವಾರಿ ಗುರುಮಠಕಲ್ ನ ಎಲ್ಲೆಡೆ ವಿಜೃಂಭಣೆಯಿಂದ ಜರುಗಿತು.
ಮೊಹರಂ ನವಮಿಯಂದು ನಾರಾಯಣಪುರದಲ್ಲಿ ಹಜರತ್ ನಬೀಸಾಬ್ ಸವಾರಿ ಅಸಂಖ್ಯಾತ ಜನರ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಬೆಳಗಿನ ಜಾವ 5 ಗಂಟೆಗೆ ಅಲಂಗಳ ಮಿಲನಗೊಂಡವು.
ದಶಮಿಯಂದು ವೈಭವದ ಹಗಲು ಸವಾರಿ ನೆರವೇರಿತು. ಚಾಂದ್ ಸಾಬ್ – ಲಾಲಾಸಾಬ ಸೇರಿ ವಿವಿಧ ಅಲಂ ಗಳ ಮಿಲನವಾಯಿತು. ಮಹಿಳೆಯರು ಬೊಡ್ಡೆಮ್ ಮೂಲಕ ಕುಣಿದರೆ, ಪುರುಷರು ಅಲಾಯಿ ಆಡಿ ಕುಣಿದರು.
ರವಿವಾರ ರಾತ್ರಿ ಹಜರತ್ ಬಂದೆನವಾಜ್ ಮೋಮಿನಪುರ ಆಶ್ರುಖಾನದಿಂದ ಹೊರಟು ಮೆರವಣೆಗೆ ಮೂಲಕ ಪೊಲೀಸ್ ಠಾಣೆ ಮಾರ್ಗವಾಗಿ ಸಾಗಿ ಬಿಡಕಿಕಟ್ಟಾದಲ್ಲಿ ಹಜರತ್ ನಬಿಸಾಬ್ – ಬಂದೆನವಾಜ್ ಪರಸ್ಪರ ಮಿಲನಗೊಂಡು ದಫನಗೊಳ್ಳಲಿದೆ. ಈ ವೇಳೆ ಅಲ್ಲಿದ್ದ ಬೇವಿನ ಮರದ ಎಲೆಗಳು ಸಿಹಿ ಆಗುತ್ತಿದ್ದವು ಎನ್ನುವುದು ಇಲ್ಲಿನ ಇತಿಹಾಸ.
ಮೊಮಿನಪುರದಲ್ಲಿ ಮೈನಾರಿಟಿ ಅಧ್ಯಕ್ಷ ಇಸ್ಮಾಯಿಲ್ ಪ್ಯಾರೆ, ಸರ್ದಾರ್ ಚಿಂತಕುಟಿ, ಮೊಹ್ಮದ್ ಖಾಸಿಂ ಸಾಬ್, ಮೊಹ್ಮದ್ ಅಜೀಂ, ಅಹ್ಮದ್ ಅಲಿ ಚಿಂತಕುಂಟಿ, ಸಿರಾಜ್ ಚಿಂತಕುಂಟಿ, ಗುಲಾಮ ರಬ್ಬಾನಿ, ಅಹ್ಮದ್ ಪಟೇಲ್, ಮೊಹ್ಮದ್ ಯುನೂಸ್ ಶೇಖ್, ಮೊಹ್ಮದ್ ಆದೀಲ್ ಇತರರು ಇದ್ದರು.
