ಪಟ್ಟಣದ ನಗರೇಶ್ವರ ದೇವಸ್ಥಾನ ಆವರಣದಲ್ಲಿ 5 ನೇ ಜಾತ್ರೆ | ಮಳೆಯಲ್ಲಿಯೇ ಕೈ ಕುಸ್ತಿಗಿಳಿದ ಪಟುಗಳು

ಗುರುಮಠಕಲ್: ಪಟ್ಟಣದ ನಗರೇಶ್ವರ ದೇವಸ್ಥಾನ ಆವರಣದಲ್ಲಿ ಪೋಲೇಲ ಯಲ್ಲಮ್ಮ ದೇವಿ 5ನೇ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.ಬೆಳಿಗ್ಗೆಯಿಂದಲೇ ವಿಶೇಷ ಅಲಂಕಾರ, ಪೂಜೆ ನಿರವೇರಿತು. ಪ್ರಮುಖ ಬೀದಿಗಳಲ್ಲಿ ಬೋನಾಲ ಮೆರವಣಿಗೆ ನಡೆಯಿತು. ಶ್ರದ್ಧಾ ಭಕ್ತಿಯಿಂದ ಭಕ್ತರು ದೇವಿಗೆ ನೈವೇದ್ಯ ಅರ್ಪಿಸಿದರು. ಮಹೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಆಯೋಜನೆಗೊಂಡ ಕೈ ಕುಸ್ತಿ ಪಂದ್ಯಾಟದಲ್ಲಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಪಟುಗಳು ಭಾಗವಹಿಸಿ ಸಾಮರ್ಥ್ಯ ಪ್ರದರ್ಶಿಸಿದರು.

ಗುರುಮಠಕಲ್ ಸೇರಿದಂತೆ ಸುತ್ತಲಿನ ಜನರು ಜಾತ್ರೆ ಯಲ್ಲಿ ಪಾಲ್ಗೊಂಡು ದರ್ಶನ ಪಡೆದು ಪುನಿತರಾದರು.

Spread the love

Leave a Reply

Your email address will not be published. Required fields are marked *

error: Content is protected !!