ಗುರುಮಠಕಲ್:  ಕುರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 3 ಜನ ಆರೋಪಿಗಳು ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಗುರುಮಠಕಲ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅ.26ರಂದು ಸಂಜೆ ಸಣ್ಣ ಮಹಾದೇವಪ್ಪ ಪಸಪೂಲ್ ಹಾಗು ಇನ್ನಿಬ್ಬರು ಕೂಡಿ ಸುಮಾರು 500 ಕುರಿಗಳನ್ನು ಮೇಯಿಸುತ್ತಾ’ ಪಸಪೂಲ್ ಸೀಮಾಂತರದಲ್ಲಿ ರಾಮಣ್ಣ ಇವರ ಹೊಲದ ಹತ್ತಿರ ಕುರಿ ಕಹುವಾಗಿತ್ತು.

ಯಾದಗಿರ-ಹೈದಾಬಾದ ರಾಜ್ಯ ಹೆದ್ದಾರಿಯ ಮೇಲೆ ನಿಂತಿದ್ದನ್ನು ನೋಡಿ ಕುರಿಯನ್ನು ಎತ್ತಿಕೊಂಡು ದ್ವಿಚಕ್ರ ವಾಹನ ಮೇಲೆ ಹಾಕಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ದಿನೇಶ ಎಂ.ಟಿ, ಎಎಸ್ಐ ಶ್ರೀಶೈಲ್ , ಸಿಬ್ಬಂದಿ ಶರಣಪ್ಪ, ನರಸಿಂಗರಾವ, ಅಶೋಕ, ಗೋವಿಂದ, ಸಾಹೇಬರೆಡ್ಡಿ ತಂಡವನ್ನು ರಚಿಸಿಸಲಾಗಿತ್ತು.

ಕಳುವಾದ ಕುರಿ ಹಾಗೂ ಚಾಮನಳ್ಳಿ ತಾಂಡದ ವಿಠಲ್ ಚವ್ಹಾಣ, ನಿತೀನ್ ಚವ್ಹಾಣ, ಸುನೀಲ್ ಚವ್ಹಾಣ ಚಾಮನಳ್ಳಿ ಎಂಬ ಆರೋಪಿತರನ್ನು ಪತ್ತೆ ಹಚ್ಚಿದ ತಂಡ ಕಳುವು ಮಾಡಿದ ಕುರಿ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹೋಂಡಾ ಶೈನ ವಾಹನ ಜಪ್ತಿ ಪಡಿಸಿಕೊಂಡಿದ್ದಾರೆ. ಸಿಬ್ಬಂದಿಗಳ ಕಾರ್ಯಕ್ಕೆ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!