ಖಾಸಾಮಠದ 9ನೇ ಪೀಠಾಧಿಪತಿ ಸಂಗಮೇಶ್ವರ ಸ್ವಾಮಿ ಸ್ಮರಣೋತ್ಸವ | ಗುರು ಮುರುಘರಾಜೇಂದ್ರ ಶ್ರೀ ಕರ್ತೃ ಗದ್ದುಗೆಗೆ ಪೂಜೆ

ಗುರುಮಠಕಲ್: ತ್ರಿಕಾಲ ಲಿಂಗ ಪೂಜೆ, ಕೃಷಿಕರೊಟ್ಟುಗೂಡಿ ಕೃಷಿ, ಸಾಹಿತ್ಯ, ಶೈಕ್ಷಣಿಕ ಸೇವೆ ಮಾಡಿದ ಪೂಜ್ಯ ಲಿಂಗೈಕ್ಯ ಸಂಗಮೇಶ್ವರ ಶ್ರೀಗಳ ಕಾರ್ಯ ಎಂದೆಂದಿಗೂ ಸ್ಮರಣೀಯ ಎಂದು ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಖಾಸಾಮಠದ ಆವರಣದಲ್ಲಿ ಸಂಗಮೇಶ್ವರ ಶ್ರೀಗಳ 26ನೇ ಪುಣ್ಯ ಸ್ಮರಣೆ ಹಿನ್ನೆಲೆ ಗದ್ದುಗೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಕಟ್ಟುವ ಕಾರ್ಯಕ್ಕೆ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.45 ವರ್ಷ ಸೇವೆ ಸಲ್ಲಿಸಿ, ಶೈಕ್ಷಣಿಕ ಸೇವೆ ನೀಡಲು ಬಸವೇಶ್ವರ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದರು. ಬಳಿಕ ಸಂಗಮೇಶ್ವರ ಸ್ವಾಮಿ ಸ್ಮೃತಿ ಪ್ರೌಢ ಶಾಲೆ ಆರಂಭಿಸಲಾಯಿತು ಎಂದರು. ಪೂಜ್ಯರ ಆಶೀರ್ವಾದ, ಕೃಪೆ ಇರಲಿ ಎಂದು ಪ್ರಾರ್ಥಿಸಿದರು.

ಪೂಜ್ಯ ಕೇದಾರಲಿಂಗ ಶ್ರೀ ಬೆನಕನಳ್ಳಿ, ಅಖಂಡೇಶ್ವರಯ್ಯ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ನರಸರೆಡ್ಡಿ ಪಾಟೀಲ್ ಗಡ್ಡೆಸುಗೂರ, ರಘುನಾಥ ರೆಡ್ಡಿ ನಜರಾಪೂರ, ಶಿವಾನಂದ ಬೂದಿ, ಶಂಕ್ರಯ್ಯ ಸ್ವಾಮಿ, ನಾಗಭೂಷಣ ಆವುಂಟಿ, ವಿಜಯರಾಜ್ ಶಾಸ್ತ್ರಿ, ಜಗದೀಶ ಭೂಮಾ ಇತರರು ಇದ್ದರು.

ವೀರಶೈವ ಲಿಂಗಾಯತ ಸಮಾಜದ ನೂತನ ಪದಾಧಿಕಾರಿಗಳಿಗೆ ಸನ್ಮಾನ: ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾಗಿ ಶಿವಾನಂದ ಬೂದಿ ಸೇರಿದಂತೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.

ಉಪಾಧ್ಯಕ್ಷರಾಗಿ ಮಲ್ಲಯ್ಯ ಸ್ವಾಮಿ ವಸ್ತ್ರದ, ರವಿಕುಮಾರ ವಾರದ್, ಕಾರ್ಯದರ್ಶಿಯಾಗಿ ಜಗದೀಶ ಭೂಮಾ, ಸಂಘಟನಾ ಕಾರ್ಯದರ್ಶಿಯಾಗಿ ಶಿವಕುಮಾರ ಗದ್ವಾಲ, ಖಜಾಂಚಿಯಾಗಿ ವಿಜಯ ರಾಜ ಶಾಸ್ತ್ರಿ ಆಯ್ಕೆ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಮುಖಂಡರಾದ ನಾಗಭೂಷಣ ಅವಂಟಿ, ನರಸರೆಡ್ಡಿ ಪೊಲೀಸ್ ಪಾಟೀಲ್ ಗಡ್ಡೆಸೂಗೂರ, ಮಲ್ಲಿಕಾರ್ಜುನ ಹಿರೇಮಠ, ಆನಂದಶೇಖರ ಹಿರೇಮಠ, ಸೋಮನಾಥ ಶಾಸ್ತ್ರೀ, ಶಂಕ್ರಯ್ಯಸ್ವಾಮಿ ಗದ್ವಾಲ್, ಧರ್ಮವೀರ ವಾರದ್ , ಶಿವಕುಮಾರ ಕೋಟಕೊಂಡಿ, ಸಿದ್ದಣ್ಣ ಜಾಡರ್, ಪವನಕುಮಾರ ಚಂದಾಪೂರ, ಬಸವರಾಜ ಶೆಟ್ಟಿಮಠ, ಶಂಕ್ರಯ್ಯ ಸ್ವಾಮಿ ಸಾಲಿಮಠ, ನಾಗಣ್ಣ ಕಾಳಗಿ, ಮಲ್ಲಯ್ಯ ಸ್ವಾಮಿ ಯಲ್ಹೇರಿ ಸೇರಿ ಸಮಾಜದ ಮುಖಂಡರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!