ಗುರುಮಠಕಲ್ ತಾಲೂಕಿನ ಪುಟಪಾಕ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಶಿವಾರೆಡ್ಡಿ ಅಧ್ಯಕ್ಷ ಹಾಗು ಶ್ರೀನಿವಾಸ್ ಉಪಾಧ್ಯಕ್ಷ ಅವಿರೋಧ ಆಯ್ಕೆ | ಫಲಿತಾಂಶ ನಂತರ ಜೆಡಿಎಸ್ ಬೆಂಬಲಿತ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ
ಗುರುಮಠಕಲ್ : ತಾಲೂಕಿನ ಪುಟಪಾಕ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಹಾಗು ಉಪಾಧ್ಯಕ್ಷ ಮತ್ತು ಸದಸ್ಯರು ಸೇರಿದಂತೆ 11 ಜನ ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಶಿವರಾಜ್ ಸಾಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶಿವಾರೆಡ್ಡಿ ದಂತಾಪುರ ಅಧ್ಯಕ್ಷ ರಾಗಿ ಹಾಗು ಉಪಾಧ್ಯಕ್ಷ ರಾಗಿ ಶ್ರೀನಿವಾಸ್ ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ.
11 ಜನ ಸದಸ್ಯರಲ್ಲಿ 8 ಜನ ಜೆಡಿಎಸ್ ಬೆಂಬಲಿತ ಹಾಗು 3 ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಫಲಿತಾಂಶ ಬಳಿಕ ಜೆಡಿಎಸ್ ಬೆಂಬಲಿತ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶಿವಾರೆಡ್ಡಿ ಮಾತನಾಡಿ, ನಮ್ಮ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರು ಕ್ಷೇತ್ರದ ಅಭಿವೃದ್ಧಿ ಮತ್ತು ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇದರ ಹಿನ್ನಲೆ ಜನರು ಜೆಡಿಎಸ್ ಗೆ ಬೆಂಬಲ ನೀಡಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ನೂತನ ಸದಸ್ಯರಾದ ನಾರಾಯಣ ಗಾಳ,ಚುಟುಮಿಯಾ, ನೂರ್ ಅಹಮ್ಮದ್, ಬ್ರಹ್ಮಯ್ಯ, ನರಸಪ್ಪ, ತನ್ವಿರ್, ಜಯಮ್ಮ ಎಲ್ಲಮ್ಮ, ಭೀಕ್ಯಾ ಸೇರಿದಂತೆ ಮುಖಂಡರಾದ ಜ್ಞಾನೇಶ್ವರ್ ರೆಡ್ಡಿ, ಬಸವ ರಾಜ ಅವುಂಟಿ, ಅಯೂಬ್ ಮಿಯಾ, ಮೌಲನ, ಶಿವಾರೆಡ್ಡಿ ಮಲ್ಲಾಪೂರ, ರಾಮದಾಸ್, ತುಕಾರಾಮ್, ಬಾಲು, ಶ್ರೀನಿವಾಸ್ ರೆಡ್ಡಿ ದಂತಾಪುರ, ಗೋಪಾಲ ಯಾದವ್, ಬ್ರಹ್ಮನಂದ ರೆಡ್ಡಿ, ಉಷಾಪ್ಪ ಯಾದವ್, ಸುರೇಂದ್ರ ಗೌಡ ಸೇರಿದಂತೆ ಇತರರು ಇದ್ದರು.
