ಪುಟಪಾಕ ಪ್ರೌಢ ಶಾಲೆಯಲ್ಲಿ ಗುರುವಂದನೆ | 1997ರಿಂದ 2008ರ ವಿದ್ಯಾರ್ಥಿಗಳಿಂದ ಗುರುಗಳಿಗೆ ಸನ್ಮಾನ | ಅನಿಸಿಕೆ ವ್ಯಕ್ತಪಡಿಸಿದ ಹಳೆಯ ವಿದ್ಯಾರ್ಥಿಗಳು

ಗುರುಮಠಕಲ್:  ತಾಯಿ ಮೊದಲ ಗುರುವಾದರೇ, ಪ್ರತಿಯೊಬ್ಬರ ಜೀವನ ರೂಪಿಸುವ ಮೇರು ವ್ಯಕ್ತಿ ಶಿಕ್ಷಕ, ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಜೀವನದಲ್ಲಿ ಒಂದು ಸ್ಥಾನದಲ್ಲಿ ಇರಲು ಗುರುವಿನ ಆಶೀರ್ವಾದವೇ ಕಾರಣ ಎಂದು ಪುಟಪಾಕ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿನಿ, ಸದ್ಯ ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ. ದಂಡೋತಿ ಹೇಳಿದರು. ತಾಲೂಕಿನ ಪುಟಪಾಕ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, 1994ರಲ್ಲಿ ಆರಂಭವಾದ ಶಾಲೆಯಲ್ಲಿ 1997ರಿಂದ 2008ರ ವರಗೆ ವ್ಯಾಸಾಂಗ ಮಾಡಿದ ಹಳೆಯ ವಿದ್ಯಾರ್ಥಿಗಳೆಲ್ಲ ಒಟ್ಟುಗೂಡಿ ನಾವು ಕಲಿತ ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸನ್ಮಾನಿಸಿ ಗೌರವಿಸುವುದು ತುಂಬಾ ಸಂತಸ ಮೂಡಿಸಿದೆ ಎಂದರು.

ಶಾಲೆ ಆರಂಭದ ವೇಳೆ 1994ರಲ್ಲಿ ಪ್ರಥಮವಾಗಿ ನೇಮಕವಾಗಿ ಬಂದು ನಿವೃತ್ತ ಉಪನ್ಯಾಸಕ ವಿಶ್ವನಾಥ ಕೆ.ಮಠ ಸೇರಿದಂತೆ ಶಿಕಕರು ಮಾತನಾಡಿದರು. ಈ ವೇಳೆ ಸೋಮಶೇಖರ ಗೌಡ, ರಮೇಶ, ಭೀಮರೆಡ್ಡಿ ಮಕಾಶಿ, ವೈ.ಎಂ.ಈಶಪ್ಪ, ಮಲ್ಲಿಕಾರ್ಜುನ ಮಳಖೇಡ, ಸುರೇಶ, ಭೀಮಸೇನ ಜೋಶಿ, ಪ್ರದೀಪ, ಈರಮ್ಮ, ಮಲ್ಲೇಶ್, ಬುಡಪ್ಪ ಜನಾರ್ಧನ, ವೀರುಪಾಕ್ಷಪ್ಪ, ಪೌಡಪ್ಪ, ಮಂಜುನಾಥ, ಶ್ರೀಕಾಂತ, ಅಶೋಕ ಸೇಡಂಕರ್, ಚಂದ್ರಶೇಖರ, ಶಿವರಾಜ್ ಸಾಕಾ ಇವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.

ಹಳೆಯ ವಿದ್ಯಾರ್ಥಿಗಳಾದ ಭಾರತಿ ತಂಬಾಕೆ,  ವೆಂಕಟಪ್ಪ ದಂತಾಪೂರ, ವೀರೇಶ ಅವುಂಟಿ, ವೀರೇಶ ನಾ, ಮಹಿಪಾಲ, ಮಂಜುಳಾ ಸ್ವಾಮಿ, ರಾಘವೇಂದ್ರ, ಭಾಗ್ಯ ಸೇರಿದಂತೆ ನೂರಾರು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!