ಸಂಘದ ಜಿಲ್ಲಾ ಪ್ರಚಾರ ಪ್ರಮುಖ್ ರಿಂದ ಜಿಲ್ಲಾಡಳಿತಕ್ಕೆ ಅರ್ಜಿ | ಖಾಸಗಿ ಸ್ಥಳದಿಂದ ಆರಂಭವಾಗಿ ಸಂಪನ್ನಗೊಳ್ಳಲಿರುವ ಕಾರ್ಯಕ್ರಮ

ಯಾದಗಿರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ದೇಶಾದ್ಯಂತ ಪಥಸಂಚಲನ ನಡೆಯುತ್ತಿದೆ. ಆದರೆ ಚಿತ್ತಾಪುರದಲ್ಲಿ ಕಾನೂನು ಹೋರಾಟ ನಡೆದರೆ, ಇನ್ನೊಂದೆಡೆ ಜಿಲ್ಲೆಯ ಗುರುಮಠಕಲ್ ನಗರದಲ್ಲಿಯೂ ಪಥ ಸಂಚಲನಕ್ಕೆ ಅನುಮತಿ ಸಿಕ್ಕಿರಲಿಲ್ಲ.

ಇದೀಗ ಅಕ್ಟೋಬರ್ 31 ರಂದು ಗುರುಮಠಕಲ್ ನಗರದಲ್ಲಿ  ಪಥಸಂಚಲನಕ್ಕೆ ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಜಿಲ್ಲಾ ಪ್ರಚಾರ ಪ್ರಮುಖ್ ಬಸ್ಸಪ್ಪ ಸಂಜನೋಳ ಅರ್ಜಿ ಸಲ್ಲಿಸಿದ್ದಾರೆ. ಪಟ್ಟಣದ ಪ್ರಮುಖ ರಸ್ತೆ, ಮಾರ್ಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ ಪಥಸಂಚಲನ ಮಾಡಲು ನಿಶ್ಚಯಿಸಲಾಗಿದೆ. ಲಕ್ಷ್ಮೀಬಾಯಿ ನರೇಂದ್ರ ರಾಠೋಡ್ ಅವರ ಲೇಔಟ್ ನಲ್ಲಿ ಮದ್ಯಾಹ್ನ 3 ಗಂಟೆಗೆ ಸಂಪತ ಆಗಿ, 5 ಗಂಟೆಗೆ ಸಂಚಲನ ಪ್ರಾರಂಭ ಆಗುತ್ತದೆ.

ಸಾಮ್ರಾಟ್ ವೃತ್ತ, ಎಪಿಎಂಸಿ ವೃತ್ತ, ಹನುಮಾನ್ ದೇವಸ್ಥಾನ (ಬಸ್ ನಿಲ್ದಾಣದ ಹತ್ತಿರ), ಮಲ್ಲಯ್ಯ ಕಟ್ಟಾ, ನೀರೆಟಿ ಓಣಿ, ಬಡಿಗೇರ್ ಓಣಿ, ನಗರೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ನಾನಾಪೂರ್ ಓಣಿ, ಕುಂಬಾರವಾಡಿ, ಮರಾಠವಾಡಿ, ಪೊಲೀಸ್ ಠಾಣೆ ರಸ್ತೆ, ಮಿಲನ ಚೌಕ್, ಸಿಹಿ ನೀರಿನ ಬಾವಿ, ಮಾರ್ಕೆಟ್ ಮುಖ್ಯರಸ್ತೆಯ ಮುಖಾಂತರ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಮಾರ್ಗವಾಗಿ, ಗುರುಮಠಕಲ್ ನ ರತ್ನಮ್ಮ ದಿ.ಈರಾರೆಡ್ಡಿ ಚಪೇಟ್ಲಾ ರಾಮನಗರ ಅವರ ಲೇಔಟ್ ನಲ್ಲಿ ಸಂಪನ್ನಗೊಳ್ಳಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!