ಯಾದಗಿರಿ : ಗುರುಮಠಕಲ್ನ 110ಕೆವಿ ಸಬ್ಸ್ಟೇಷನ್ನಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸು ತ್ತಿರುವ ಹಿನ್ನೆಲೆ 2024ರ ಡಿಸೆಂಬರ್ 28 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗ ಲಿದೆ ಎಂದ ಯಾದಗಿರಿ ಕಾರ್ಯ ಮತ್ತು ಪಾಲನಾ ವಿಭಾಗ ಗುಲಬ ರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಕಾರ್ಯನಿರ್ವಾಹಕ ಅಭಿಯಂತರರು (ವಿ) ರಾಘವೇಂದ್ರ ತಿಳಿಸಿದ್ದಾರೆ.
110ಕೆವಿ ವಿದ್ಯುತ್ ಉಪಕೇಂದ್ರ ಗುರುಮಠಕಲ್, 33ಕೆವಿ ವಿದ್ಯುತ್ ಉಪಕೇಂದ್ರ ಗಾಜರಕೋಟ, 33ಕೆವಿ ವಿದ್ಯುತ್ ಉಪಕೇಂದ್ರ ತೊಲಮಾಮಿಡಿಗೆ ವಿದ್ಯುತ್ ಸರಬರಾಜು ನಿಲುಗಡೆ ಮಾಡಲಾಗುವುದು. ಸದರಿ 110/33ಕೆವಿ ವಿದ್ಯುತ್ ಉಪಕೇಂದ್ರ ಗಳಿಂದ ವಿದ್ಯುತ್ ಸರಬರಾಜು ಮಾಡುವ ಎಲ್ಲಾ 11ಕೆವಿ ಮಾರ್ಗಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಗುರುಮಠಕಲ್ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ, ತಾಂಡಗಳಿಗೆ ಮತ್ತು ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಜೆಸ್ಕಾಂಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೈದಾಪುರ: ಸೈದಾಪೂರ 110ಕೆವಿ ಸಬ್ ಸ್ಟೇಷನ್ನಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಹಿನ್ನೆಲೆ 2024ರ ಡಿಸೆಂಬರ್ 29 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
110ಕೆವಿ ವಿದ್ಯುತ್ ಉಪ ಕೇಂದ್ರ ಸೈದಾಪೂರ, 33ಕೆವಿ ವಿದ್ಯುತ್ ಉಪ ಕೇಂದ್ರ ಕಡೇಚೂರು, 33ಕೆವಿ ವಿದ್ಯುತ್ ಉಪ ಕೇಂದ್ರ ಬದ್ದೇಪಲ್ಲಿ, ಮೇ.ರಿನೆವ್ ವಿಂಡ್ ಎನರ್ಜಿ ಪ್ರೈ.ಲಿ ಸೈದಾಪೂರಕ್ಕೆ ವಿದ್ಯುತ್ ಸರಬರಾಜು ನಿಲುಗಡೆ ಯಾಗಲಿದೆ.
110ಕೆವಿ ಮತ್ತು 33ಕೆವಿ ವಿದ್ಯುತ್ ಉಪ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಮಾಡುವ ಎಲ್ಲಾ 11ಕೆವಿ ಮಾರ್ಗಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಸೈದಾಪೂರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ, ತಾಂಡಗಳಿಗೆ ಮತ್ತು ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.