ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತು ಅವಹೇಳನ | ರಾಜಿನಾಮೆ ನೀಡಿ, ಕ್ಷಮೆಯಾಚನೆಗೆ ಆಗ್ರಹ
ಗುರುಮಠಕಲ್: ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತನಾಡಿರುವುದು ವಿರೋಧಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಕಚೇರಿ ಎದುರು ಘೋಷಣೆ ಕೂಗಿದ ಕಾರ್ಯಕರ್ತ ರು, ತಕ್ಷಣ ರಾಜಿನಾಮೆ ನೀಡಿ, ದೇಶದ ಸಾರ್ವಜನಿಕರ ಕ್ಷಮೆ ಯಾಚನೆ ಮಾಡಬೇಕು ಎಂದು ಸಮಿತಿ ಆಗ್ರಹಿಸಿದೆ.
ಸಂಸತ್ತಿನಲ್ಲಿ ಶ್ರೀ ಅಮಿತ್ ಷಾ, ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ಕುರಿತು ಮಾತನಾಡುವಾಗ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅನ್ನುವುದು ಈಗ ಒಂದು ಪ್ಯಾಷನ್ ಆಗಿಬಿಟ್ಟಿದೆ, ನೀವು ಇಷ್ಟು ಸಲ ದೇವರ ಹೆಸರು ತೆಗೆದುಕೊಂಡರೆ ಏಳು ಏಳು ಜನ್ಮಗಳಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳಿದ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಬಾಬಾಸಾಹೇಬ ಅಂಬೇಡ್ಕರ್ ರವರನ್ನು ತುಂಬಾ ದ್ವೇಷಿಸುತ್ತವೆ ಎನ್ನುವುದನ್ನು ಇದು ತೋರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಶಿವಪುತ್ರ ಜವಳಿ, ಚಂದಪ್ಪ ಮೂನಿಯಪ್ಪನೋರ್, ಗುರುಮಠಕಲ್ ತಾಲೂಕು ಸಂಚಾಲಕ ರಂಗಸ್ವಾಮಿ ದಾಸರಿ ಕೊಂಕಲ್, ತಾಯಪ್ಪ ಭಂಡಾರಿ , ಮರಿಯಪ್ಪ ಕ್ರಾಂತಿ, ನಾಗರಾಜ್ ಶಹಪುರ್, ಶ್ರೀಮಂತ ಸಿಂಗ ನಲ್ಲಿ, ದೊಡ್ಡಪ್ಪ ಕಾಡಂಗೇರ, ನಾಗರಾಜ್ ಕಂದೂಕುರ್, ಅನಿಲ್ ಕಂದೂಕುರ್, ಆನಂದ್ ಯಲಸತ್ತಿ, ಶ್ರೀನಿವಾಸ್ ಅನುಪುರ್ , ರಾಜು ಕೊಂಕಲ್ , ಮೊಗುಲಪ್ಪ ಕೊಂಕಲ್, ಲಕ್ಷ್ಮಣ ಕೊಂಕಲ್, ನರೇಶ್ ಕೊಂಕಲ್ ಇತರರು ಇದ್ದರು.