ರೈತ ಸೇನೆ ಸೇಡಂ ತಾಲೂಕಿನ ಪದಾಧಿಕಾರಿಗಳ ಆಯ್ಕೆ
ಸೇಡಂ/ ಗುರುಮಠಕಲ್: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸೇಡಂ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗುರುಮಠಕಲ್ ಅತಿಥಿ ಗೃಹದಲ್ಲಿ ನೆರವೇರಿತು.
ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎಂ.ಪಾಟೀಲ ಮದ್ದರಕಿ ಆದೇಶದನ್ವಯ ಆದೇಶ ಪ್ರತಿ ವಿತರಣೆ ಮಾಡಿ, ಗುರುಮಠಕಲ್ ತಾಲೂಕು ಅಧ್ಯಕ್ಷ ರವಿ ರಾಠೋಡ ಮಾತನಾಡಿದರು.
ಗಡಿ ತಾಲೂಕಿನಲ್ಲಿರು ರೈತರ ಪರವಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು. ಸೇಡಂ ತಾಲೂಕಿನ ರೈತರ ಸಮಸ್ಯೆ ಗಳಿಗೆ ತಕ್ಷಣವೇ ಸ್ಪಂದಿಸಬೇಕು. ರೈತರಿಗೆ ಅನ್ಯಾಯವಾದರೆ ಸಹಿಸದೇ ಸರಿಪಡಿಸುವ ಕಾರ್ಯ ಮಾಡಲು ಹೇಳಿದರು.
ನೂತನ ಪದಾಧಿಕಾರಿಗಳ ಜೊತೆಗೆ ಸದಾ ಇರುವುದಾಗಿ ಹೇಳಿದರು. ರೈತರಿಗೆ ನ್ಯಾಯ ದೊರಕಿಸಲು ನಾವು ಸದಾ ಸಿದ್ಧ ಇರಬೇಕು. ರೈತರ ಸಮಸ್ಯೆಗೆ ಯಾರು ಸ್ಪಂದನೆ ನೀಡುವವರಿಲ್ಲ ಹಾಗಾಗಿ ನಮ್ಮನ್ನು ನಾವೇ ಬಲಪಡಿಸಿಕೊಳ್ಳುವ ಅನಿವಾರ್ಯ ತೆಯಿದೆ. ಹಾಗಾಗಿ ಸಂಘಟನೆ ಶಕ್ತಿಬೇಕು ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಬಸಂತರೆಡ್ಡಿ, ಉಪಾಧ್ಯಕ್ಷ ಭೀಮು, ಕೊಂಕಲ್ ಹೋಬಳಿ ಅಧ್ಯಕ್ಷ ವೆಂಕಟೇಶ್ ಇದ್ದರು.
ನೂತನ ಪದಾಧಿಕಾರಿಗಳು: ಸೇಡಂ ತಾಲೂಕು ಅಧ್ಯಕ್ಷ ಕೆ.ಮೊಗುಲಪ್ಪ ಇಟಕಾಲ್, ಪ್ರಧಾನ ಕಾರ್ಯದರ್ಶಿ ಭೀಮಶಪ್ಪ, ಉಪಾಧ್ಯಕ್ಷರಾಗಿ ಅನೀಲ ಪಟೇಲ್, ಗುರುನಾಥ ಹೆಚ್, ಕಾರ್ಯದರ್ಶಿ ಮಾರುತಿ, ಖಜಾಂಚಿ ನರಹರಿ, ಸಹ ಕಾರ್ಯದರ್ಶಿಗಳಾಗಿ ಲಾಲಪ್ಪ, ಇಮ್ರಾನ್ ಆಯ್ಕೆ ಮಾಡಲಾಯಿತು.