ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ | ಎಸ್ ಎಸ್ ಕೆ ಸಮಾಜದಿಂದ ಭವ್ಯ ಶೋಭಾಯಾತ್ರೆ | ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುನ್ನಡೆಯಲು ಸಲಹೆ | ನೀಟ್ ನಲ್ಲಿ ವೈದ್ಯಕೀಯ ಸೀಟು ಪಡೆದ ಅನೀಲ ಬಸೂದೆಗೆ ಬೆಳ್ಳಿ ಪದಕ ಪ್ರದಾನ | ಎಸ್ ಎಸ್ ಎಲ್ ಸಿ ರಾಜ್ಯಕ್ಕೆ ಟಾಪರ್ ನಮಿತಾ ಚೌಧರಿ ಇತರರಿಗೆ ಮಾದರಿ
ಗುರುಮಠಕಲ್: ಸಮಾಜದ ಮಕ್ಕಳ ಶೈಕ್ಷಣಿಕ ಕ್ರಾಂತಿಗೆ ಸಾಧನೆಯೇ ಸಾಕ್ಷಿಯಾಗಿದೆ ಎಂದು ಹಿರಿಯ ವಿಜ್ಞಾನಿ ಸಖಾರಾಮ ಶ್ರೀನಿವಾಸಲು ಹೇಳಿದರು. ಪಟ್ಟಣದ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ ಅಂಕಮ್ಮ ದೇವಸ್ಥಾನದಲ್ಲಿ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗುರುಮಠಕಲ್ ಸಮಾಜ ಸಾಕಷ್ಟು ಬಲಿಷ್ಠವಾಗಿದೆ. ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿದೆ. ಕೌಟುಂಬಿಕ ಜೀವನ ಸಹ ಉತ್ತಮ ಮಟ್ಟದಲ್ಲಿದೆ. ಸಮಾಜದ ಮಗಳು ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದು ಹೆಮ್ಮೆಯ ವಿಷಯ. ಜೀವನ ಶೈಲಿ ಸಾಕಷ್ಟು ಬದಲಾಗಿದೆ. ಜಯಂತಿ ಶುಭ ಸಂದರ್ಭದಲ್ಲಿ ಐಎಎಸ್ ಮಾಡುವ ಸಂಕಲ್ಪ ಮಾಡೋಣ ಎಂದರು. ಪ್ರಗತಿ ಪಥದಲ್ಲಿ ಸಾಗುತ್ತಿರುವ ಯುವ ಸಮೂಹ ಇನ್ನು ಉನ್ನತ ಸ್ಥಾನಕ್ಕೆ ಬೆಳೆಯಲು ಪ್ರೋತ್ಸಾಹ ನೀಡಬೇಕು, ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಬುಡ್ಡಪ್ಪ ಜನಾರ್ಧನ ಮಾತನಾಡಿ, ಪೌರಾಣಿಕ ಹಿನ್ನೆಲೆಯುಳ್ಳ ಮಹಾರಾಜರ ಜಯಂತಿಯು ಗುರುಮಠಕಲ್ ನಲ್ಲಿ ಕಳೆದ 55 ವರ್ಷಗಳಿಂದ ಆಚರಣೆ ಮಾಡುತ್ತ ಬರಲಾಗುತ್ತಿದೆ.
ಸಹಸ್ತ್ರಾರ್ಜುನ ಮಹಾರಾಜರ ವಂಶಸ್ಥರಾದ ನಮಗೆ ಅವರ ಆದರ್ಶಗಳನ್ನು ಅರಿಯಬೇಕು. ರಾಮಾಯಣ, ಮಹಾಭಾರತದಲ್ಲಿ ಕಾರ್ತವೀರಾರ್ಜುನರ ಉಲ್ಲೇಖವಿದೆ. ಸಹಸ್ರ ಬುಜಗಳ ವರ ಪಡೆದ ಹಿನ್ನೆಲೆ ಸಹಸ್ತ್ರಾರ್ಜುನ ಹೆಸರು ಬಂದಿದೆ.
ಘೋರ ತಪಸ್ಸಿನಿಂದ ದತ್ತಾತ್ರೇಯರಿಂದ ಸಹಸ್ರ ಬಾಹು ವರ ಪಡೆದ ವೀರ ಪರಾಕ್ರಮಿ ರಾಜಾರಾಗಿದ್ದಾರೆ. ರಾವಣ ಶಿವ ಪೂಜೆಯಲ್ಲಿ ತೊಡಗಿದ್ದಾಗ ನದಿಯ ಪ್ರವಾಹ ಹೆಚ್ಚಾಗಿ ಯುದ್ದವಾಯಿತು. ಮಹಾರಾಜರು ರಾವಣನನ್ನು ಬಂಧಿಯಾಗಿ ಮಾಡಿದ್ದರು.
ಮಹರ್ಷಿ ಜಮದಾಗ್ನಿ ಆಶ್ರಮದಿಂದ ಕಾಮಧೇನು ಗೋವು ತಂದಿದ್ದರು ಈ ಹಿನ್ನೆಲೆಯಲ್ಲಿ 21 ಬಾರಿ ಯುದ್ಧವಾಗಿತ್ತು ಎಂದರು. ನ್ಯಾಯಯುತ, ಪರಾಕ್ರಮಿ, ಶೌರ್ಯ ಮಹಾನ್ ರಾಜರ ವಂಶದಲ್ಲಿ ಜನಿಸಿದ ನಾವು ಪುಣ್ಯವಂತರು ಎಂದರು.
ಅತಿಥಿಗಳಾಗಿ ಹಣಮಂತರಾವ ಗೊಂಗಲೆ ಮಾತನಾಡಿ, ಭವ್ಯವಾಗಿ ಮಹಾರಾಜರ ಜಯಂತಿ ಸಂತಸ. ವ್ಯಾಪಾರವೇ ಪ್ರಮುಖ ಉದ್ಯೋಗ ಮಾಡಿಸಿಕೊಂಡಿದ್ದ ನಾವು, ನಮ್ಮ ಸಮಾಜದದಲ್ಲಿ ಶೈಕ್ಷಣಿಕ ಕ್ರಾಂತಿ ಯಾಗುತ್ತದೆ. ಐಎಎಸ್, ಐಪಿಎಸ್ ತರಬೇತಿಗೆ ನೆರವು, ಮಾರ್ಗದರ್ಶನ ಸಹಕಾರ ನೀಡಲು ಚಿಂತನೆಯಾಗಬೇಕು ಎಂದು ಮನವಿ ಮಾಡಿದರು. ಎಂತಹ ಕಷ್ಟವೇ ಇರಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಪ್ರೊ. ಡಾ. ಯಶವಂತರಾವ ಮೇಂಗಜಿ ಮಾತನಾಡಿದರು. ಚಂದುಲಾಲ ಚೌಧರಿ ಅಧ್ಯಕ್ಷೀಯ ಮಾತನಾಡಿದರು. ಪ್ರಮುಖರಾದ ರಾಮಕಿಶನರಾವ ಗೊಂಗಲೆ, ಡಾ. ನರಸಿಂಗರಾವ್ ಕಾಶಿಗಾವ್, ಅಂಬಾದಾಸ ಜೀತ್ರಿ, ಜವಾಹರಲಾಲ್ ಮೇಂಗಜಿ, ಯಶವಂತರಾವ ಚೌಧರಿ, ವಿನಾಯಕ ಜನಾರ್ಧನ, ಭರತ ಜೀತ್ರಿ, ಶೋಭಾಬಾಯಿ ರಂಗಾಪುರ, ಸುಷ್ಮಾ ಚೌಧರಿ ವೇದಿಕೆಯಲ್ಲಿದ್ದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ: ಎಸ್ ಎಸ್ ಎಲ್ ಸಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದು ನಮಿತಾ ಬಸವರಾಜ ಚೌಧರಿ ಅವರನ್ನು ಸನ್ಮಾನಿಸಲಾಯಿತು. ಆಂಗ್ಲ ಮಾಧ್ಯಮ ಅಜಯ ಜಗದೀಶ್ ಶ್ರೀಗಿರಿ, ಯುಕ್ತಿ ಜಯವಂತರಾವ ಕಾಶಿಗಾವ. ಕನ್ನಡ ಮಾಧ್ಯಮ ಸುಜೀತ್ ಅಂಬಾದಾಸ ಹೌಜಿ, ಸಾಗರ ಭೀಮರಾವ ಸುಲ್ತಾಪುರ, ಪಿಯು ಕಲಾ ವಿಭಾಗದಲ್ಲಿ ಪೂಜಾ ವೆಂಕಟೇಶ ತಗಡಘರ, ವಿಜ್ಞಾನ ವಿಭಾಗ ಅನೀಲ ವೆಂಕಟರಾವ್ ಬಸೂದೆ, ಕಲ್ಪೇಶ ಅಂಬಾದಾಸ ಮೇಂಗಜಿ.
ಡಿಗ್ರಿ ವಿಭಾಗ : ವೈಷ್ಣವಿ ನಾಗುರಾವ ರಂಗಾಪುರ, ನೇಹಾ ಸುನೀಲ್ ಹೌಜಿ, ಗಾಯತ್ರಿ ಕೃಷ್ಣಕುಮಾರ್ ಚೌಧರಿ, ವನೀತಾ ಚಿನ್ನುಲಾಲ ಧಡಂಗೆ,
ಗಣಿತ ವಿಷಯ ಹೆಚ್ಚು ಅಂಕ: ಪ್ರೃಥ್ವಿರಾಜ ಹಣಮಂತರಾವ ರಂಗಾಪುರ, ಅಭಿಷೇಕ ವಸಂತರಾವ ಹಬೀಬ್, ರಿಷಿಕಾ ಶ್ರೀನಿವಾಸ ಅರಿಸಿದ, ಯುಕ್ತಿ ಕಾಶಿಗಾವ , ಚೇತನ್ ಹಬೀಬ್,
ಪಿಯುಸಿ : ಅನೀಲ ವೆಂಕಟರಾವ್ ಬಸೂದೆ, ಮೋನಿಕಾ ಅಂಬಾದಾಸ ಜೀತ್ರಿ ಹಾಗೂ ಸಿಬಿಎಸ್ಇ: ರೋಹನ್ ವಿನಾಯಕರಾವ ಹಬೀಬ್, ರಷ್ಮೀತಾ ವಸಂತರಾವ ಹಬೀಬ್
ನೀಟ್ ಸಾಧಕ : ಅನೀಲ ವೆಂಕಟರಾವ್ ಬಸೂದೆ ಸರ್ಕಾರಿ ವೈದ್ಯಕೀಯ ಸೀಟು ಪಡೆದ ಹಿನ್ನೆಲೆ ದಿ.ನಾರಾಯಣರಾವ ಕೌಶಲ್ಯಬಾಯಿ ಸ್ವಾತಂತ್ರ್ಯ ಹೋರಾಟಗಾರ ಸ್ಮರಣಾರ್ಥ ಬೆಳ್ಳಿ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ವೇಳೆ ಪೂಜಾ ಭೀಮರಾವ ಗೊಂಗಲೆ ಅವರನ್ನು ಸನ್ಮಾನಿಸಲಾಯಿತು.
ಎಂ.ಬಿ.ಬಿ.ಎಸ್ ತೇರ್ಗಡೆಯಾದ ದಿವ್ಯಾ ಕುಷಾಲಚಂದ ಗೊಂಗಲೆ, ಬಿಎಎಮ್ ಎಸ್ ಕಿರಣ ವಿಠ್ಠಲ ರಾವ್ ಮಿಸ್ಕಿನ್, ಬಿಎಎಂಎಸ್ ಅಂಬ್ರೇಷ ನರಸಿಂಗರಾವ್ ಜೀತ್ರಿ, ಡಾ.ಶೀತಲ ಅಂಬಾದಾಸ ಜೀತ್ರಿ, ಧನ್ವಂತ ವೆಂಕಟರಾವ್ ಬಸೂದೆ, ನಂದಿನಿ ಬುಡ್ಡಪ್ಪ ಸುಬ್ದಿ, ವರ್ಷಾ ಹಣಮಂತರಾವ ಗೊಂಗಲೆ, ಅವೀಷ ಮಾಣಿಕರಾದ ರಂಗಾಪುರ ಅವರಿಗೆ ಸನ್ಮಾನ ಮಾಡಲಾಯಿತು.
ಧಾರ್ಮಿಕ ಕ್ಷೇತ್ರ ಸೇವೆ : ಅನೀಲ ಜೋಶಿ, ವಿಠ್ಠಲ ರಾವ್ ಮಿಸ್ಕಿನ್, ಅಶೋಕ ಶ್ರೀಗಿರಿ, ವಿಠ್ಠಲ ರಾವ್ ತಗಡಘರ ಅವರಿಗೆ ಸನ್ಮಾನ ಮಾಡಲಾಯಿತು.
ಇದಕ್ಕೂ ಮೊದಲು ಅಂಕಮ್ಮ ದೇವಸ್ಥಾನದಲ್ಲಿ ಜಯಂತಿ ಹಿನ್ನೆಲೆ ದೇವಿಯ ಅಭಿಷೇಕ, ಸಹಸ್ತ್ರಾರ್ಜುನ ಮಹಾರಾಜರ ಪೂಜೆ ನೆರವೇರಿತು. ಬಳಿಕ ಮುಖ್ಯ ಬೀದಿಗಳ ಮೂಲಕ ಭವ್ಯ ಶೋಭಾಯಾತ್ರೆ ನಡೆಯಿತು. ಪ್ರಮುಖರು, ಯುವಕರು, ಮಾತಾಭಗಿನಿಯರು, ವಿದ್ಯಾರ್ಥಿಗಳು ಇದ್ದರು. ಶಶಿಕಾಂತ ಜನಾರ್ಧನ ನಿರೂಪಿಸಿದರು. ಮಾಣಿಕಪ್ರಭು ಚೌಧರಿ ವಂದಿಸಿದರು.
