ಪ್ರತಿಷ್ಠಿತ ಶ್ರೀಲಕ್ಷ್ಮಿ ಟ್ರೇಡಿಂಗ್ ಕಂ.(ನರ್ವಿ) ಕಿರಾಣಿ ಅಂಗಡಿಗೆ ಬೆಂಕಿ | ಬೆಂಕಿ ನಂದಿಸಲು ಸ್ಥಳೀಯರ ಹರ ಸಾಹಸ | ಎಚ್ಚೆತ್ತುಕೊಳ್ಳದ ತುರ್ತು ಸೇವೆಗಳ ಇಲಾಖೆ |ಅಂದಾಜು ₹38 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿ

ಯಾದಗಿರಿ (ಗುರುಮಠಕಲ್): ಜಿಲ್ಲೆಯ ಗುರುಮಠಕಲ್ ಪಟ್ಟಣದ ಪ್ರತಿಷ್ಠಿತ ಕಿರಾಣಿ ಹೋಲಸೆಲ್ ಅಂಗಡಿ ಲಕ್ಷ್ಮೀ ಟ್ರೇಡಿಂಗ್ ಕಂ. ಗೆ ಬೆಂಕಿ ಹತ್ತಿ ಉರಿದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

ಬೆಳಗಿನ ಜಾವ ಮಳಿಗೆಯ ಶೆಟರ್ ನಿಂದು ಹೊಗೆ, ವಾಸನೆ ಬರುತ್ತಿರುವುದರಿಂದ ಅನುಮಾನಗೊಂಡ ಬೆಳಿಗ್ಗೆ ಮಲವಿಸರ್ಜನೆಗೆ ಬಂದ ಕೆಲವರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿ, ಶೆಟರ್ ತೆರೆಯುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕಿರಾಣಿ ವಸ್ತುಗಳು ಭಸ್ಮವಾಗಿದೆ. ಘಟನೆಯ ಬಗ್ಗೆ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದರೆ ಯಾದಗಿರಿ ಯಿಂದ ಬರುವುದಕ್ಕೆ ಬೆಳಿಗ್ಗೆ 5:48 ಗಂಟೆಯಾಗಿತ್ತು.ಸ್ಥಳೀಯರು ಬೆಂಕಿ ನಂದಿಸಲು ವಾಟರ್ ಟ್ಯಾಂಕರ್ ತರಿಸಿ, ಬಕೇಟ್ ಮೂಲಕ ನೀರು ಹಾಕಿ ನಂದಿಸಲು ಸುಮಾರು ಗಂಟೆಗಳಿಂದ ಹರಸಾಹಸ ಪಟ್ಟರು. ಸದ್ಯ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ‌. ತನಿಖೆ ಬಳಿಕವಷ್ಟೇ ಏನು ಕಾರಣ ಎನ್ನುವುದು ಬಯಲಿಗೆ ಬರಲಿದೆ.

ಎಚ್ಚೆತ್ತುಕೊಳ್ಳದ ಆಡಳಿತ : ಗುರುಮಠಕಲ್ ಗಡಿ ಭಾಗದವಾಗಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿ ಅವಘಡ ತಡೆಯಲು ಸುಮಾರು 40 ಕಿ.ಮೀ ದೂರದ ಯಾದಗಿರಿ ಯಿಂದ ಅಗ್ನಿ ಶಾಮಕ ದಳ ಬರುವ ಅನಿವಾರ್ಯಯಿದೆ. ಈ ಬಗ್ಗೆ ಈ ಹಿಂದೆಯೇ ಮಾಧ್ಯಮಗಳು ವರದಿ ಪ್ರಕಟಿಸಿದರೂ ಸರ್ಕಾರ ಅಗ್ನಿ ಶಾಮಕ ಠಾಣೆ ಸ್ಥಾಪನೆ ಮಾಡುತ್ತಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕರಲ್ಲಿ ತೀವ್ರ ಗೊಂಡಿದೆ.

ಗುರುಮಠಕಲ್ ನಲ್ಲಿ ಅಗ್ನಿ ಅವಘಡದ 4-5 ಘಟನೆಗಳಾಯಿತು. ಆದರೂ ಆಡಳಿತ ಎಚ್ಚೆತ್ತುಕೊಳ್ಳುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಶೀಘ್ರವೇ ಗುರುಮಠಕಲ್ ನಲ್ಲಿ ತುರ್ತು ಸೇವೆ ವಾಹನವನ್ನು ಕಾಯ್ದಿರಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಘಟನೆ?: ಬೆಂಕಿ ಅವಘಡಕ್ಕೆ ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಗುರುಮಠಕಲ್ ಪೊಲೀಸ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಅಂದಾಜು ₹38 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದೆ ಎನ್ನಲಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!