ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ | 1 ರಿಂದ 10ನೇ ತರಗತಿಯ ಒಟ್ಟು 150ಕ್ಕೂ ಹೆಚ್ಚು ಮಕ್ಕಳಿಗೆ ಲಾಭ

ಗುರುಮಠಕಲ್: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಉತ್ತಮ ವ್ಯಾಸಾಂಗ ಮಾಡಿ ಉನ್ನತ ಗುರಿಯೊಂದಿಗೆ ಶ್ರಮಿಸಬೇಕು ಎಂದು ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ಚಂದುಲಾಲ ಚೌಧರಿ ಸಲಹೆ ನೀಡಿದರು.

ಪಟ್ಟಣದ ಅಂಕಮ್ಮ ದೇವಸ್ಥಾನದ ಆವರಣದಲ್ಲಿ ಎಸ್ ಎಸ್ ಕೆ ಸಮಾಜದ ನವಯುವಕ ಸಂಘದಿಂದ 1 ರಿಂದ 10 ನೇ ತರಗತಿಯ ವ್ಯಾಸಾಂಗ ಮಾಡುತ್ತಿರುವ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದ ಯುವ ಪೀಳಿಗೆ ಶೈಕ್ಷಣಿಕವಾಗಿ ಸಾಕಷ್ಟು ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ನವಯುವಕ ಸಂಘದ ಅಧ್ಯಕ್ಷ ವಿನಾಯಕ ಜನಾರ್ಧನ ಮಾತನಾಡಿ, ಸಮಾಜ ಸಂಘಟನೆ ಬಲ ಪಡಿಸುವ ನಿಟ್ಟಿನಲ್ಲಿ ಯುವಕ ಸಂಘದಿಂದ ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಆಯೋಜಿಸಲಾಗುತ್ತಿದೆ.

ಸಮಾಜದಿಂದ ನೀಡುವ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ನಮ್ಮ ವಿದ್ಯಾರ್ಥಿಗಳು ಇನ್ನೂ ಎತ್ತರಕ್ಕೆ ಬೆಳೆದು ಪಾಲಕರು ಮತ್ತು ಸಮಾಜಕ್ಕೆ ಕೀರ್ತಿ ತರಬೇಕು ಎಂದು ಕಿವಿ ಮಾತು ಹೇಳಿದರು.

ಈ ವೇಳೆ ರಾಮಕಿಶನರಾವ ಗೊಂಗಲೆ, ಡಾ. ನರಸಿಂಗರಾವ್ ವೈದ್ಯ, ಅಂಬಾದಾಸ ಜೀತ್ರಿ, ಯಶವಂತರಾವ ಚೌಧರಿ, ಲಕ್ಷ್ಮಣರಾವ್ ಕಮಲಾಪುರ, ಲಕ್ಷ್ಮಣರಾವ್ ರಾವ್ ಚೌಧರಿ, ಶೋಭಾಬಾಯಿ ರಂಗಾಪುರ, ಸುಶ್ಮ ಚೌಧರಿ, ರೇಣುಕಾ ಗೊಂಗಲೆ, ಅಂಬಿಕಾ ಹೌಜಿ, ತೇಜಸ್ವಿನಿ ಗೊಂಗಲೆ, ಅನೀಲ ಜೀತ್ರಿ, ಮೋಹನ್ ಬುರಬುರೆ, ಮೋಹನ್ ಚಮಕೂರ, ಪವನ್ ಮೇಂಗಜಿ, ನಿತೀನ್ ತಗಡಘರ, ಭರತ ಜೀತ್ರಿ, ವಿಜಯ ಬಸೂದೆ, ಬಸವರಾಜ ಸುಬ್ದಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!