ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ ಹೇಳಿಕೆ | ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಸಿಹಿ ಹಂಚಿ ಸಂಭ್ರಮ
ಗುರುಮಠಕಲ್: ಜನ ಸಾಮಾನ್ಯರ ಬಾಳಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಂತಸ ಮೂಡಿಸಿದ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ ಅಭಿಪ್ರಾಯಪಟ್ಟರು.

ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿ 500 ಕೋಟಿ ಪ್ರಯಾಣವಾಗದ ಹಿನ್ನೆಲೆ ಆಯೋಜಿಸಿದ್ದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಮಾತು ಕೊಟ್ಟಂತೆ ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿದೆ. ಸರ್ಕಾರ ಜನಪರ ಯೋಜನೆಯಿಂದ ಲಾಭವಾಗಿದ್ದಾರೆ. ರಾಜ್ಯದ ಜನ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಚಪೆಟ್ಲಾ ಮಾತನಾಡಿ, ಪ್ರಣಾಳಿಕೆಯಂತೆ ಶಕ್ತಿ ಯೋಜನೆ ರಾಜ್ಯದಾದ್ಯಂತ 500ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದು ಜನಪರ ಯೋಜನೆ ಯಶಸ್ವಿಗೊಳಿಸಿದ ಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಜನಪರ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾಕಷ್ಟು ಕಾಳಜಿವಹಿಸಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದ್ದಾರೆ ಎಂದರು.
ಪುರಸಭೆ ಉಪಾಧ್ಯಕ್ಷೆ ರೇಣುಕಾ ಪಡಿಗೆ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸಂಜೀವ ಕುಮಾರ ಚಂದಾಪುರ, ಚಾಂದ ಪಾಷಾ, ಆನಂದ ಪೂಜಾರಿ ಯಂಪಾಡ, ತಾ.ಪಂ. ಇಓ ಅಂಬ್ರೇಷ ಪಾಟೀಲ್, ಘಟಕ ವ್ಯವಸ್ಥಾಪಕ ಪ್ರವೀಣ ಯರನಾಳ, ಬಸವರಾಜ ದಳಪತಿ, ಪುರಸಭೆ ಸದಸ್ಯರಾದ ಬಾಬು ತಲಾರಿ, ಖಾಜಾ ಮೈನೋದ್ದೀನ್ , ಕೃಷ್ಣಾ ಮೇದಾ, ಮಾಣಿಕ ಮುಕಡಿ, ಲಿಂಗಪ್ಪ ತಾಂಡೂರಕರ್, ಕಿಷ್ಟಪ್ಪ ಸೈದಪ್ಪೊಳ್, ಭೀಮಶಪ್ಪ ಶನಿವಾರಂ, ಸರೋಜಾ, ಶ್ರೀನಿವಾಸ ಕೇಶ್ವಾರ ಸೇರಿದಂತೆ ಸಾರಿಗೆ ಇಲಾಖೆ ಸಿಬ್ಬಂದಿ, ಇತರರು ಇದ್ದರು.
