2026-27 ನೇ ಸಾಲಿನ ಬಜೆಟ್ ಪೂರ್ವ ಸಭೆ | ತಿಮ್ಮಣ್ಣ ಬಾವಿಗೆ ಮೀಸಲಿರುವ ಅನುದಾನದಲ್ಲಿ ಶೀಘ್ರ ಕಾಮಗಾರಿ ಆರಂಭಕ್ಕೆ ಪಿ.ಕಿಷ್ಟಪ್ಪ ಸಲಹೆ | ಕಳೆದ ಬಾರಿ ಬೇಡಿಕೆ ಸಲ್ಲಿಸಿದ ಕಾಮಗಾರಿ ಆಗಿದೆಯೇ? ಎಂದು ಜನರ ಪ್ರಶ್ನೆ
ಗುರುಮಠಕಲ್: ಪಟ್ಟಣದ ಅಭಿವೃದ್ಧಿಗೆ ಬಜೆಟ್ ನಲ್ಲಿ ಮೀಸಲಿಡಬೇಕಾದ ಕಾರ್ಯ ಯೋಜನೆಗಳನ್ನು ರೂಪಿಸುವ ಕುರಿತು ಸಲಹೆ ಸೂಚನೆಗಳನ್ನು ಸ್ವೀಕರಿಸಲು ಪುರಸಭೆ ಕಚೇರಿ ಆವರಣದಲ್ಲಿ ಮುಖ್ಯಾಧಿಕಾರಿ ಶರಣಪ್ಪ ಎಂ ನೇತೃತ್ವದಲ್ಲಿ ಸಭೆ ಜರುಗಿತು.
ಹಿರಿಯರು, ಸಂಘ ಸಂಸ್ಥೆಗಳ ಪ್ರಮುಖರ ಸಲಹೆಗಳು ಅಗತ್ಯವಾಗಿದ್ದು, ಪಟ್ಟಣದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಸಲಹೆಗಳನ್ನು ಸ್ವೀಕರಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪಿ.ಕಿಷ್ಣಪ್ಪ ಮಾತನಾಡಿ, ಹೃದಯ ಭಾಗದಲ್ಲಿರುವ ತಿಮ್ಮಣ್ಣ ಬಾವಿ ಅಭಿವೃದ್ಧಿಗೆ 14 ಲಕ್ಷ ಅನುದಾನ ಮಂಜೂರು ಆಗಿದೆ. ಆದರೇ ಯಾವುದೇ ಕೆಲಸ ಆಗಿಲ್ಲ. ಮಳೆ ನೀರು ಮಳೆ ನೀರು ದೇವಸ್ಥಾನ ಎದುರು ಹರಿಯುತ್ತಿದೆ ಕರೆ ಮಾಡಿ ತಿಳಿಸಿದರೆ ಯಾವುದೇ ಪ್ರಯೋಜನ ಇಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಕಾಳಜಿ ವಹಿಸಿ ಜನರ ಕೆಲಸ ಆತ್ಮಸಾಕ್ಷಿಯಾಗಿ ಕಾರ್ಯ ಮಾಡಿ. ಇಲ್ಲದಿದರೆ ಪುರಸಭೆ ಎದುರು ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಳೆದ ಬಾರಿ ಹೇಳಿದ್ದು, ಯಾವುದು ಆಗಿಲ್ಲ ಎಂದು ಪುರಸಭೆ ನಾಮನಿದೇಶಿತ ಸದಸ್ಯ ಭೀಮಶಪ್ಪ, ಶ್ರೀಕಾಂತ ತಲಾರಿ ಇತರರು ಅಸಮಾಧಾನ ವ್ಯಕ್ತಪಡಿಸಿದರು.
ಲಾಲಪ್ಪ ತಲಾರಿ, ಕುಡಿಯುವ ನೀರು ಶುದ್ದೀಕರಣ ಆಗುತ್ತಿಲ್ಲ. ವೈಜ್ಞಾನಿಕವಾಗಿ ಶುದ್ದೀಕರಣವಾಗಲಿ. ಕೆರೆಯಲ್ಲಿ ಕೊಳವೆಬಾವಿ ಆರಂಭಿಸಿ, ನೀರು ನೀಡಿ ಎಂದು ಬೇಡಿಕೆಗಳ ಮನವಿ ಸಲ್ಲಿಸಿದರು. ಸಲಹೆಗಳನ್ನು ಸ್ವೀಕರಿಸಲು ಸಭೆ ಕರೆದಿದ್ದೇವೆ. ಸಲಹೆ ಸೂಚನೆಗಳನ್ನು ನೀಡಿ ಎಂದು ಸಮಾಧಾನ ಪಡಿಸಿದರು.
ರಸ್ತೆ ಬದಿಯಲ್ಲಿ ತರಕಾರಿ ಮಾರಾಟದಿಂದ ಸಂಚಾರಕ್ಕೆ ತೊಂದರೆ, ಪಟ್ಟಣದಲ್ಲಿ ಸಾರ್ವಜನಿಕ ಸ್ಮಶಾನ, ನಮಾಜ್ ಗಡ್ಡದ ಚಿತಾಗಾರ ಅಭಿವೃದ್ಧಿ ಅಥವಾ ವಿದ್ಯುತ್ತೀಕರ ಚಿತಾಗಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಯುವ ಹೋರಾಟಗಾರ ಸಂಜು ಅಳೆಗಾರ ಮಾತನಾಡಿ, ಸಾರ್ವಜನಿಕರ ದುಡ್ಡು ಪೋಲಾಗದಂತೆ ಅಭಿವೃದ್ಧಿ ಕಾರ್ಯಗಳು ಮಾಡಿ, ಕೊಳವೆಬಾವಿ ಹಾಕಿ ನೀರಿಲ್ಲದೆ ಇದ್ದರೆ ಟ್ಯಾಂಕ್ ಕಟ್ಟಿದ್ದಾರೆ. ವಾರ್ಡ 3ರಲ್ಲಿ ತೊಂದರೆ ಕುರಿತು ವಿವರಿಸಿದರು. 2019ರಲ್ಲಿ 3ರಲ್ಲಿ ಅಂಗನವಾಡಿ ನಿವೇಶನ ಮಂಜೂರು ಆಗಿದೆ. ನಂಬರ್ ನೀಡಿಲ್ಲ. ಸರ್ಕಾರಿ ಆಸ್ತಿ ರಕ್ಷಿಸಲು ಸಾರ್ವಜನಿಕರೇ ಹೋರಾಟ ಮಾಡುವ ದೌರ್ಭಾಗ್ಯ ಬಂದಿದೆ ಎಂದರು.
ಸಾರ್ವಜನಿಕರ ಸಮಸ್ಯೆಗಳು ಆಲಿಸಲು 24*7 ಸಂಖ್ಯೆಯನ್ನು ಆರಂಭಿಸುವಂತೆ ಫಯಾಜ್ ಅಹ್ಮದ್ ಮನವಿ ಮಾಡಿದರು. ಈ ವೇಳೆ ನಾರಾಯಣ ಸಾಕಾ, ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ಲೆಕ್ಕಿಗರಾದ ಮಾಳಮ್ಮ, ವೀರಭದ್ರಪ್ಪ, ಪ್ರಶಾಂತ ಸೇರಿದಂತೆ ಸಂಘಟನೆಗಳ ಪ್ರಮುಖರು, ಸಾರ್ವಜನಿಕರು ಇದ್ದರು.
