ಕರ್ನಾಟಕ ಓನ್ ಕೇಂದ್ರಗಳ ಸೇವೆ ಸದುಪಯೋಗ ಪಡಿಸಿಕೊಳ್ಳಿ
ಗುರುಮಠಕಲ್: ತಾಲೂಕು ಕೇಂದ್ರದಲ್ಲಿ ಸರ್ಕಾರ ಎಲ್ಲಾ ಯೋಜನೆಗಳ ಲಾಭ ಪಡೆಯಲು ಅರ್ಜಿ ಸಲ್ಲಿಸಲು ಕರ್ನಾಟಕ ಓನ್ ಕೇಂದ್ರಗಳು ಮುಖ್ಯವಾಗಿದೆ. ಇದರಿಂದ ವಿವಿಧ ಕಚೇರಿಗಳಿಗೆ ಅಲೆದಾಟ ತಪ್ಪಲಿದೆ. ಹಾಗಾಗಿ ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ನಾಡ ಕಚೇರಿ ಎದುರು ಹಾಗೂ ಬಿಎಸ್ಎನ್ಎಲ್ ಟವರ್ ಬಳಿಯ ಮೈಕೋ ಕಂಪ್ಯೂಟರ್ ನಲ್ಲಿ ಕರ್ನಾಟಕ ಓನ್ ಕೇಂದಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಡಿ ಭಾಗದ ಜನರಿಗೆ ಉತ್ತಮ ಸೇವೆ ನೀಡಲು ಸಲಹೆ ನೀಡಿದರು. ಈ ವೇಳೆ ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್, ಮುಖ್ಯಾಧಿಕಾರಿ ಭಾರತಿ ದಂಡೋತಿ, ಜಿ.ತಮ್ಮಣ್ಣ, ಶರಣು ಆವುಂಟಿ, ಜ್ಞಾನೇಶ್ವರರೆಡ್ಡಿ, ರವಿ ಗವಿನೋಳ, ಬಾಲಪ್ಪ, ಆಶನ್ನ ಬುದ್ಧ,ಚಂದುಲಾಲ ಚೌದರಿ , ಅಶೋಕ ಕಲಾಲ್, ಮಲ್ಲಿಕಾರ್ಜುನ ಅರುಣಿ, ಅನ್ವರಿ ಬೇಗಂ, ಶಭೀರ್ ಅಹ್ಮದ್, ಇಸ್ಮಾಯಿಲ್ ಪ್ಯಾರೆ, ಸಾಯಪ್ಪ ನತ್ತಿ, ನಾಗೇಶ್ ಚೌಧರಿ, ಆರೀಫ್, ಮಹೇಶ ಗೌಡ ಇತರರಿದ್ದರು.
