ಗುರುಮಠಕಲ್: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಪಟ್ಟಣದ ಪಂಚಾಯತ್ ಮೊಹಲ್ಲಾ ಹನುಮಾನ ಮಂದಿರದಿಂದ ಪಲ್ಲಕಿ ಸೇವೆ ಜರುಗಿತು.

ಪ್ರತಿ ವರ್ಷ ಹಿಂದು ಹೊಸ ವರ್ಷ ಯುಗಾದಿ ಅಂಗವಾಗಿ ಪಲ್ಲಕಿ ಮೆರವಣಿಗೆ ನಡೆಸುವುದು ಇಲ್ಲಿನ ವಾಡಿಕೆಯಾಗಿದೆ. ಪಟ್ಟಣದ ಪ್ರಮುಖ ಬೀದಿಗಳ ಮೂಲಕ ನಾರಾಯಣಪುರ, ಪೊಲೀಸ್ ಠಾಣೆ ಮಾರ್ಗವಾಗಿ ಮರಳಿ ದೇವಸ್ಥಾನ ತಲುಪಲಿದೆ.

ಈ ವೇಳೆ ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ಚಂದುಲಾಲ ಚೌದರಿ, ಡಾ. ವೈದ್ಯ ನರಸಿಂಗರಾವ್, ರಾಮಕಿಶನರಾವ ಗೊಂಗಲೆ, ಗೋವಿಂದರಾವ ಮೇಂಗಜಿ, ಹಣಮಂತರಾವ ಶ್ರೀ ಗಿರಿ, ಅಶೋಕ ಶ್ರೀಗಿರಿ, ಮಾಣಿಕಪ್ರಭು ಚೌಧರಿ, ಚಂದುಲಾಲ ಬಸೂದೆ, ಭೀಮರಾವ, ಜಗದೀಶ ಶ್ರೀ ಗಿರಿ, ತುಕಾರಾಮ, ಬಾಲಾಜಿ, ಮಾಣಿಕ ಹೌಜಿ, ನರೇಶ ಹೌಜಿ, ವಿಜಯ ಬಸೂದೆ, ನಿತೀನ್ ತಗಡಘರ, ರಾಹುಲ್ ಚೌದರಿ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!