ಯಾದವ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಗುರುಮಠಕಲ್ : ಖಾಸಮಠದ ಆವರಣದಲ್ಲಿ ಯಾದವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು.
ಗುರುಮಠಕಲ್ ಪಟ್ಟಣ ಸೇರಿದಂತೆ ವಿವಿದ ಗ್ರಾಮದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ಮಕ್ಕಳಿಗೆ ಯಾದವ ಸಮಾಜದ ಶ್ರೀಗಳಾದ ಯಾದವನಾಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಖಾಸಮಠದ ಪೀಠಾಧಿಪತಿ ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು, ಯಾದವ ಸಮಾಜದ ತಾಲೂಕು ಅಧ್ಯಕ್ಷರಾದ ಯಲ್ಲಪ್ಪ ಯಾದವ, ಪ್ರಮುಖರಾದ ರಾಮಕೃಷ್ಣ ಯಾದವ, ಶರಣಪ್ಪ ಯಾದವ, ತಿಮ್ಮಪ್ಪ, ಶ್ರೀಮಠದ ಭಕ್ತಾಧಿಗಳಾದ ನರಸರೆಡ್ಡಿ ಗಡ್ಡೆಸೂಗೂರು,ಆನಂತ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಾಲೂಕು ಅಧ್ಯಕ್ಷರು ಎಲ್ಲಪ್ಪ ಯಾದವ್ ರಾಮಕೃಷ್ಣ ಶರಣಪ್ಪ ತಿಮ್ಮಪ್ಪ ಇತರರು ಇದ್ದರು.
