ಶ್ರೀ ಭಾಗ್ಯವಂತಿ ದೇವಿ ಜಾತ್ರೆ, ನಾಟಕ ಉದ್ಘಾಟನೆ

ಯಾದಗಿರಿ:  ಜಿಲ್ಲೆಯ ಕೊನೆ ಭಾಗಕ್ಕೆ ಅಂಟಿಕೊಂಡಿರುವ ಜೇವರ್ಗಿ ತಾಲ್ಲೂಕಿನ ಹೊನ್ನಾಳ ಗ್ರಾಮದಲ್ಲಿ ದೀಪಾವಳಿ ಅಮವಾಸ್ಯೆ ದಿವಸ ಪ್ರತಿ ವರ್ಷ ಭಾಗ್ಯವಂತಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಾಟಕವನ್ನು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಉದ್ಘಾಟಿಸಿದರು.

ದೇವಿಯೂ ಪಲ್ಲಕ್ಕಿ ಉತ್ಸವದೊಂದಿ ಇಡೀ ಗ್ರಾಮದ ತುಂಬ ಬಂಡಾರ, ಡೊಳ್ಳುಗಳೊಂದಿಗೆ ಮೆರವಣಿಗೆಯಾಯ್ತು. ಬಳಿಕ ಅದೇ ದಿವಸ ರಾತ್ರಿ ಗ್ರಾಮಸ್ಥರು ಮತ್ತು ಯುವಕರು ಸೇರಿಕೊಂಡು ಬಂಜೆಯ ತೊಟ್ಟಿಲು ತೂಗಿತು ಎಂಬ ಸಾಮಾಜಿಕ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿರುವ ಉಮೇಶ್ ಮುದ್ನಾಳ್, ಜಾತ್ರೆಯಲ್ಲಿ ಸಾಮಾಜಿಕ ನಾಟಕ ನಡೆಯುತ್ತಿದ್ದವು. ಆದರೆ ಬದಲಾದ ದಿನಮಾನಗಳಲ್ಲಿ ಗ್ರಾಮೀಣ ಭಾಗದಲ್ಲಿ ನಾಟಕಗಳು ನಡೆಯೋದು ಅತೀ ವಿರಳ. ಆದರೇ ಹೊನ್ನಾಳ ಗ್ರಾಮದ ಯುವಕರು ನಾಟಕ ಮಾಡ್ತಿರೋದು ಒಳ್ಳೆಯ ಬೆಳವಣಿಗೆ ನಮ್ಮ ಸಾಂಸ್ಕೃತಿಕ ಕಲೆ ನಶಿಸಿ ಹೋಗಬಾರದೆಂದು ಕಿವಿಮಾತು ಹೇಳಿದರು.

ಈ ವೇಳೆ ಅಂಬಾರಾಯಗೌಡ ಜಿರಾಳ, ಬಾಪುಗೌಡ ಪಾಟೀಲ್, ಮಲ್ಲಿಕಾರ್ಜುನ, ಸಾಹು, ಸಾಯಬಣ್ಣ  ಬಿರಾಳ (ಕೆ ) ಯಂಕನಗೌಡ, ಪೀರಪ್ಪ, ಖಾಸೀಂ, ಸಿದ್ದನಗೌಡ, ಗುರುಲಿಂಗಪ್ಪ ಗೌಡ, ಭೀಮರಾಯ್, ಮಾನಪ್ಪ, ದೇವರಾಜ್, ಗೌಸ್, ಪರಮೇಶ್, ಮಹಾನಿಂಗಪ್ಪ, ಮಲ್ಲರೆಡ್ಡಿಗೌಡ ಮಲ್ಲಿಕಾರ್ಜುನ ಗೌಡ ಆಂದೋಲಾ. ಮಲ್ಲಿಕಾರ್ಜುನ ವಿಶ್ವಕರ್ಮ, ಸಿದ್ದಪ್ಪ ಕರಣಿಗಿ, ಆಂಜನೇಯ ಬೆಳಗೇರಿ, ಬಾಬುಖಾನ್ ಎಸ್ ಹೊಸಳ್ಳಿ ಸೇರಿ ಹಲವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!