ಹೈದರಾಬಾದ್ ನಲ್ಲಿ ಭಾನುವಾರ ಸಂಜೆ ಘಟಕೇಸರನ ಬಿಬಿ ನಗರದ ಕನ್ನಡ ಬಳಗವು ಆಯೋಜಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭವು ಜ್ಯೋತಿ ಬೆಳಗಿಸುವ ಮೂಲಕ ಕನ್ನಡಿಗ ರಾಜಶೇಖರ ಡಿಐಜಿ ಉದ್ಘಾಟಿಸಿದರು. ರಾಹುಲ ಹೆಗಡೆ ಐಪಿಎಸ್, ಧರ್ಮೇಂದ್ರ ಪೂಜಾರಿ, ಬಸವರಾಜ ಲಾರಾ ಇದ್ದರು.
ತೆಲಂಗಾಣದಲ್ಲಿ ಕನ್ನಡ ಬಳಗದಿಂದ ರಾಜ್ಯೋತ್ಸವ ಆಚರಣೆ | ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮ
ಹೈದರಾಬಾದ್ : ನಮ್ಮ ಕನ್ನಡ ಭಾಷೆ ಸರಳ-ಸುಲಭವಾಗಿ ಕಲಿಯುವ ಭಾಷೆಯಾಗಿದೆ. ಅಲ್ಲದೆ ಅತ್ಯಂತ ಪ್ರಾಚೀನವಾದ ಭಾಷೆಯಾಗಿದೆ. ಕನ್ನಡಿಗರು ಹೃದಯ ವೈಶಾಲ್ಯತೆ ಪ್ರಶಂಸನೀಯವಾದುದು ಎಂದು ಕನ್ನಡಿಗ ಹಿರಿಯ ಐಪಿಎಸ್ ಅಧಿಕಾರಿ ರಾಜಶೇಖರ ಅವರು ನುಡಿದರು.
ಭಾನುವಾರ ಸಂಜೆ ಘಟಕೇಸರನ ಬಿಬಿ ನಗರದಲ್ಲಿ ಕನ್ನಡ ಬಳಗವು ಆಯೋಜಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕನ್ನಡಿಗರು ಯಾವ ರಾಜ್ಯದಲ್ಲಿದರು, ಸ್ಥಳೀಯರೊಂದಿಗೆ ಸ್ಥಳೀಯ ಭಾಷೆಯನ್ನು ಕಲಿಯುವ ಸರಳ ಜೀವಿಗಳು. ಹೀಗಾಗಿ ಕನ್ನಡಿಗರು ಎಲ್ಲೆ ಇದ್ದರು ಬದುಕು ಕಟ್ಟಿಕೊಳ್ಳುವ ಸಾಮಾರ್ಥ್ಯವನ್ನು ಹೊಂದಿದ್ದಾರೆ ಎಂದರು.
ಕನ್ನಡ ಮಾಧ್ಯಮದಲ್ಲಿ ಓದಿರುವ ವಿದ್ಯಾರ್ಥಿಗಳು ತಮ್ಮ ಮನಸ್ಸಿನಿಂದ ಕೀಳರಿಮೆಯನ್ನು ತೆಗೆದು ಹಾಕಿ ಅಚ್ಚಕನ್ನಡದಲ್ಲಿಯೇ ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಉನ್ನತ ಅಧಿಕಾರಿಗಳಾಗಬಹುದು.
ಇದಕ್ಕೆ ಕಠಿಣ ಪರಿಶ್ರಮದ ಅವಶ್ಯಕತೆಯಿದೆ. ಹಾಗೂ ಶ್ರದ್ಧೆ-ನಿಷ್ಠೆಯಿಂದ ವಿದ್ಯಾರ್ಜನ ಮಾಡಿದರೆ ಸಾಕು ಪರೀಕ್ಷೆಯಲ್ಲಿ ಪಾಸಾಗುವುದು ಕಬ್ಬಿಣದ ಕಡಲ ಅಲ್ಲ ಎಂಬುದನ್ನು ಮನಗಾಣಬೇಕು. ಸದ್ಯದ ವಿದ್ಯಮಾನಗಳ ಬಗ್ಗೆ ಹಾಗೂ ಸಾಮಾನ್ಯ ಜ್ಞಾನದ ಅರಿವು ಇದ್ದರೆ ಸರಳವಾಗಿ ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಪಾಸಾಗಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಳಗನ್ನಡ, ಮಧ್ಯಗನ್ನಡ. ಹೊಸಗನ್ನಡಗಳ ಮಧ್ಯೆ ಇರುವ ವ್ಯತ್ಯಾಸ ಹಾಗೂ ಕನ್ನಡ ಭಾಷೆ ಬೆಳೆದು ಬಂದ ಹಾದಿಯನ್ನು ವಿವರವಾದ ಮಾಹಿತಿಯನ್ನು ನೀಡಿದರು.
ಇನ್ನೊರ್ವ ಮುಖ್ಯ ಅತಿಥಿ ಹೈದರಾಬಾದ ಸಿಟಿ ಟ್ರಾಫೀಕ್ ಉಪ ಆಯುಕ್ತ ರಾಹುಲ ಹೆಗಡೆ ಐಪಿಎಸ್ ಮಾತನಾಡಿ, ಕನ್ನಡ ಸಮಾರಂಭವನ್ನು ಆಯೋಜನೆ ಮಾಡಿ ಕನ್ನಡತನ್ನವನ್ನು ಮೆರೆದ ನೀವುಗಳು ನಿಜವಾದ ಕನ್ನಡಿಗರು ಎಂದು ಹೆಮ್ಮೆಯ ವಿಷಯವಾಗಿದೆ. ಈ ಭಾಗದಲ್ಲಿ ಇಷ್ಟೊಂದು ಕನ್ನಡಿಗರು ಇರುವುದು ಆಶ್ಚರ್ಯವಾದ ಸಂಗತಿ ಎಂದು ಸಂತೋಷ ಪಟ್ಟರು. ಎಲ್ಲರಿಗೂ ಧನ್ಯವಾದ ತಿಳಿಸಿದರು.
ವಿಶೇಷ ಅತಿಥಿಯಾಗಿ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗೂರಿ ಮಾತನಾಡುತ್ತ, ಹೈದರಾಬಾದ ನಗರಲ್ಲಿ ಸುಮಾರು 12 ಲಕ್ಷ ಜನ ಕನ್ನಡಿಗರು ವಾಸವಾಗಿದ್ದಾರೆ. ಎಲ್ಲರನ್ನು ಒಗ್ಗೂಡಿಸುವ ಕಾರ್ಯ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘ ಮಾಡುತ್ತಿದೆ. ಏನಾದರೂ ಸಮಸ್ಯೆ ಬಂದರೆ ನೇರವಾಗಿ ನಮ್ಮನ್ನು ಸಂಪರ್ಕ ಮಾಡಿ ಸದಾ ಸೇವೆಯಲ್ಲಿ ಇರುವುದಾಗಿ ಭರವಸೆ ನೀಡಿದರು.
ವೇದಿಕೆಯ ಮೇಲೆ ಕನ್ನಡ ಸಂಘದ ಕಾರ್ಯದರ್ಶಿ ಬಸವರಾಜ ಲಾರಾ ಉಪಸ್ಥಿತರಿದ್ದರು. ಡಾ. ಎಡುಕುಲ, ಡಾ.ಸುನೀಲ, ಡಾ.ಸಿದ್ರಾಮ, ಡಾ. ವಾಮನ, ಅಕ್ಷಯ ಕಾಂಬಳೆ, ಸಂತೋಷ ನಾಡಿಗ, ಧನಂಜಯ, ಮನೋಜ, ಕಡಪ್ಪ, ಭೀಮ, ಶ್ರೀಮತಿ ಸುವರ್ಣ, ವಿನಯ, ನಾಗರಾಜ, ಹಾಗೂ ಉತ್ತರ ಕನ್ನಡಿಗರ ಬಳಗ ಬಿಬಿ ನಗರ ಎಲ್ಲಾ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದರು.
ಇದೇ ವೇಳೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬಿಬಿ ನಗರದ ಕನ್ನಡಿಗರು ಹಾಜರಿದರು. ಜಯಂತಿ ನಿರೂಪಣೆ ಮಾಡಿದರು.