ಪುರಸಭೆಯ ಘನ ತ್ಯಾಜ್ಯ ನಿರ್ವಹಣೆಯ 4 ನೂತನ ವಾಹನಗಳಿಗೆ ಶಾಸಕ ಕಂದುಕೂರ ಚಾಲನೆ…
ಗುರುಮಠಕಲ್: ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಶಾಸಕರಾದ ಶ್ರೀ ಶರಣಗೌಡ ಕಂದಕೂರ ಸೂಚಿಸಿದರು.
ಪಟ್ಟಣದಲ್ಲಿ ಪುರಸಭೆಯಿಂದ 2023 – 24ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ 11.70 ಲಕ್ಷಕ್ಕೆ ಒಂದರಂತೆ ಖರೀದಿಸಿದ 4 ಹೊಸ ಆಟೋ ಟಿಪ್ಪರ್ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ವಚ್ಛತೆ ನಿರ್ವಹಣೆಗೆ ತೊಡಕಾಗಬಾರದು ಸಿಬ್ಬಂದಿಗಳ ಕೊರತೆ ಇದ್ದರೆ ನೇಮಿಸಿಕೊಂಡು ನಿರ್ವಹಿಸಿ ಪುರಸಭೆ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ, ಇದಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯವಿದೆ. ಸರ್ಕಾರದಿಂದ ಬೇಕಿರುವ ಅನುದಾನ ಅಗತ್ಯವಿದ್ದರೆ ಗಮನಕ್ಕೆ ತಂದರೆ ಅನುದಾನಕ್ಕೆ ಪ್ರಯತ್ನಿಸುವದಾಗಿ ಹೇಳಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕಳೆದ ಬಾರಿ ಅಂಬುಲೆನ್ಸ್ ಗೆ ಅನುದಾನ ನೀಡಲಾಗಿದೆ. ಪುರಸಭೆಗೆ ಸ್ವಚ್ಛತೆಗೆ ಅನುದಾನ ಬೇಕಿದ್ದರೂ ನೀಡಲು ಪರಿಶೀಲಿಸಿ ನೀಡುವುದಾಗಿ ಹೇಳಿದರು.
ಪಟ್ಟಣದ ಸರ್ವೇ ನಂಬರ್ 19/1 ,20 ರಲ್ಲಿ ನಿವೇಶನ ಸಮಸ್ಯೆಯ ಕುರಿತು ಜನರು ಅಲೆಯಬಾರದು ನಿಮ್ಮ ವ್ಯಾಪ್ತಿಯ ಕಾರ್ಯವನ್ನು ನಿಭಾಯಿಸಲು ತಿಳಿಸಿದರು.
ಸಾರ್ವಜನಿಕರ ಕೆಲಸಗಳಿಗೆ ನಿಮ್ಮ ವ್ಯಾಪ್ತಿಯಲ್ಲಿ ಕೆಲಸಗಳನ್ನು ತಕ್ಷಣವೇ ಮಾಡಬೇಕು. ಈವರಿಗೆ ಪುರಸಭೆ ಮೇಲೆ ವಕ್ರದೃಷ್ಟಿ ಬೇರಿಲ್ಲ, ಅದಕ್ಕೆ ಅವಕಾಶ ನೀಡದೆ ಜನರ ಕೆಲಸ ಮಾಡಬೇಕು ಎಂದರು.
ಈ ವೇಳೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಮರಲಿಂಗಪ್ಪ, ಮಲ್ಲಿಕಾರ್ಜುನ ಸುಂಗಲಕರ್, ರಾಮುಲು ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ಕೃಷ್ಣಾರೆಡ್ಡಿ ಪಾಟೀಲ್, ಜಿ.ತಮ್ಮಣ್ಣ, ಬಸ್ಸಣ್ಣ ದೇವರಹಳ್ಳಿ, ಶರಣು ಆವಂಟಿ, ಪ್ರಕಾಶ್ ನೀರೆಟಿ, ಪುರಸಭೆ ಸದಸ್ಯ ಖಾಜಾ ಮೈನೋದ್ದಿನ್, ಆಶನ್ನ ಬುದ್ಧ, ನವಾಜರೆಡ್ಡಿ ಪಾಟೀಲ್, ಬಾಬು ತಲಾರಿ, ಅಶೋಕ ಕಲಾಲ್, ಬಾಲಪ್ಪ ದಾಸರಿ, ಪಾಪಿ ರೆಡ್ಡಿ, ಚಂದುಲಾಲ್ ಚೌದರಿ, ರವಿ ಗೋವಿನೋಳ, ಜಗದೀಶ್ಚಂದ್ರ ಮೇಂಗಜಿ, ಸತೀಶ್ ತಿವಾರಿ, ಮಹೇಶ್ ಗೌಡ, ಫಯಾಜ್ ಅಹ್ಮದ್ ಸೇರಿದಂತೆ ಹಲವರು ಇದ್ದರು.