ಯಾದಗಿರಿ : ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ವಕ್ಫ ರಾಜ್ಯ ಪತ್ರ ಅಧಿಸೂಚನೆ (ಗೆಜೆಟ್) ಪ್ರಕಾರ ಒಟ್ಟು 1426 ಆಸ್ತಿಗಳಿದ್ದು ಈ ಪೈಕಿ ಕಂದಾಯ ಇಲಾಖೆಯ 549 ಪಂಚಾಯತ ರಾಜ್ ಇಲಾಖೆಯ 713 ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದೆ 164 ಆಸ್ತಿಗಳಿರುತ್ತವೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 1426 ಒಟ್ಟು ಆಸ್ತಿಗಳಲ್ಲಿ ಕಂದಾಯ ಇಲಾಖೆಯ 549 ವಕ್ಪ ಆಸ್ತಿಗಳ ಪೈಕಿ 324 ಆಸ್ತಿಗಳನ್ನು ಮಾತ್ರ ಪಹಣಿ ಪತ್ರಿಕೆಯ ಕಾಲಂ ನಂ.11ರಲ್ಲಿ ವಕ್ಫ ಆಸ್ತಿ ಎಂದು ಷರಾ ನಮೂದಾಗಿರುತ್ತದೆ. ಇವುಗಳ ಹೊರತಾಗಿ ಯಾವುದೇ ಖಾತಾ ಬದಲಾವಣಿಗಳು ಕೈಗೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಂಚಾಯತ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಗೆಜೆಟ್ ಪ್ರಕಾರ 713 ಆಸ್ತಿಗಳಿದ್ದು, ಈ ಪೈಕಿ 335 ಪಂಚಾಯತ್ ರಾಜ್ ಇಲಾಖೆಯಿಂದ ವಕ್ಫ ಸಂಸ್ಥೆಗಳ ಹೆಸರಿಗೆ ಖಾತಾ ಆಗಿರುತ್ತವೆ.
ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಗೆಜೆಟ್ ಪ್ರಕಾರ 164 ಆಸ್ತಿಗಳಿದ್ದು, ಈ ಪೈಕಿ 114 ಆಸ್ತಿಗಳಲ್ಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ವಕ್ಫ ಸಂಸ್ಥೆಗಳ ಹೆಸರಿಗೆ ಖಾತಾ ಆಗಿರುತ್ತದೆ.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಗೆಜೆಟ್ ಅನುಸಾರ ಸದರಿ ಜಮೀನುಗಳ ಪಹಣಿ ಪತ್ರಿಕೆ ಕಾಲಂ.11 ರಲ್ಲಿ ಮಾತ್ರ ವಕ್ಫ ಸಂಸ್ಥೆ ಹೆಸರು ನಮೂದಾಗಿದ್ದು, ಇದು ಕೇವಲ ಹಕ್ಕು ಮತ್ತು ಋಣಗಳನ್ನು ತಿಳಿಸುವಂತಹದಾಗಿದ್ದು, ಈ ಜಮೀನುಗಳ ಮಾಲೀಕತ್ವದ ಮೇಲೆ ಪರಿಣಾಮ ಬೀರುವಂತಹದಾಗಿರು ವುದಿಲ್ಲ. ಅದಲ್ಲದೇಯ ಗೆಜೆಟ್ ಪ್ರಕಾರ ಕಲಂ.11ರಲ್ಲಿ ವಕ್ಫ ಸಂಸ್ಥೆಯ ಷರಾ ನಮೂದಿಸಲು ನಿಯಮಾನುಸಾರ ಕ್ರಮಕೈಗೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಏಕಾಏಕಿ ಜಮೀನಿಗಳ ಕಲಂ.11ರಲ್ಲಿ ವಕ್ಫ ಸಂಸ್ಥೆಯ ಷರಾ ನಮೂದಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಏIಂಆಃ ಹಾಗೂ ಗದಗ-ವಾಡಿ ರೈಲ್ವೆ ಯೋಜನೆಯಡಿ ಭೂಸ್ವಾಧಿನಗೊಂಡು ವಕ್ಫ ಸಂಸ್ಥೆಯ ಹೆಸರು ಷರಾ ನಮೂದಾಗಿರುವ ಕಾರಣ ಪರಿಹಾರ ಕುರಿತಂತೆ ಎರಡು ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿರುತ್ತದೆ.
ಇನ್ನೂಳಿದಂತೆ ಈ ವಿಷಯವಾಗಿ ರೈತರು ತೊಂದರೆ ಅನುಭವಿಸುತ್ತಿರುವ ಕುರಿತು ಯಾವುದೇ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಜಿಲ್ಲಾ ವಕ್ಫ ಬೋರ್ಡನಿಂದ ರೈತರಿಗೆ ವಕ್ಫ ಆಸ್ತಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿರುವುದಿಲ್ಲ ಹಾಗಾಗಿ ಜಿಲ್ಲೆಯಲ್ಲಿ ಈ ವಿಷಯದಲ್ಲಿ ರೈತರಿಗೆ ತೊಂದರೆ ಉಂಟಾಗುವ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.