ಹ್ಯೇಯ ಕೃತ್ಯ ಎಸಗಿರುವ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು – ಚಂದುಲಾಲ ಚೌಧರಿ ಅಭಿಪ್ರಾಯ
ಗುರುಮಠಕಲ್: ಪಟ್ಟಣದ ಮಹಾತ್ಮ ಬಸವೇಶ್ವರ ವೃತ್ತದಲ್ಲಿ ಗುರುಮಠಕಲ್ ನಲ್ಲಿ ಪಕ್ಷಾತೀತವಾಗಿ ಹಾಗೂ ವಿವಿಧ ಹಿಂದೂ ಸಂಘಟನೆ, ಸಾರ್ವಜನಿಕರಿಂದ ಜಮ್ಮು ಕಾಶ್ಮೀರ ಉಗ್ರರ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಚಂದುಲಾಲ ಚೌಧರಿ, ಇಂತಹ ಘಟನೆಗಳು ಮರು ಕಳಿಸದಂತೆ ಕೇಂದ್ರ ಸರಕಾರ ಹೆಚ್ಚು ಉಗ್ರ ನಿಗ್ರಹಕ್ಕೆ ಪಡೆಗಳನ್ನು ನೇಮಿಸಿ ಪುಲ್ವಾಮ ರೀತಿಯಲ್ಲಿ ಉತ್ತರ ನೀಡಬೇಕು, ಇಂತಹ ಹೇಯ ಕೃತ್ಯ ಎಸಗಿರುವ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು.
ದಾಳಿಯಲ್ಲಿ ದೇಹ ಬಿಟ್ಟ ಅಯಾಕರ ಜೀವಗಳಿಗೆ ಬೆಲೆ ಸಿಗಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕಣ್ಣಾರೆ ಕಂಡು ಭಯಭೀತವಾದ ಆ ಜೀವಗಳು ಸುಧಾರಿಸಿಕೊಳ್ಳಲಿ ಸರ್ಕಾರ ಸಾವಿಗೆ ನ್ಯಾಯ ಕೊಡಲಿ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ನರಸಿಂಹಲು ನೀರೆಟಿ, ರಾಜರಮೇಶ ಗೌಡ, ಯಲ್ಲಪ್ಪ, ಜಗದೀಶ ಮೇಂಗಜಿ, ವೆಂಕಟಪ್ಪ ಅವಂಗಾಪುರ, ಜಗದೀಶ ಭೂಮಾ ಸೇರಿದಂತೆ ಹಲವರು ಇದ್ದರು.
