ಅಖಿಲ ಭಾರತ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಆಯ್ಕೆ
ಯಾದಗಿರಿ : ಮಂಡ್ಯದಲ್ಲಿ ಆಯೋಜಿಸುತ್ತಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಾಕ್ಷರಾಗಿ ನಾಡಿನ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ ಅವರ ಆಯ್ಕೆಯಾಗಿರುವುದಕ್ಕೆ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಪ್ಪ ಎಸ್ ಹೊಟ್ಟಿ ಅವರು ಹರ್ಷ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಬುಧವಾರ ನಡೆದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೋದಲನೇಯದಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಷಿ ಮಾತನಾಡಿ ಈ ಸಭೆಯ ಮುಖ್ಯ ಉದ್ದೇಶ ಮಂಡ್ಯದಲ್ಲಿ ಆಯೋಜಿಸುತ್ತಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ಕುರಿತು ಪ್ರಸ್ತಾಪಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಮಲೇಶಬಾಬು ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷರನ್ನೂ ಹಿರಿಯ ಸಾಹಿತಿಗಳನ್ನು, ಸಾಹಿತ್ಯ ಕ್ಷೇತ್ರದಲ್ಲಿಯೇ ದುಡಿದವರನ್ನು ಪರಿಗಣಿಸಬೇಕು ಎಂದು ಪ್ರಸ್ತಾಪಿಸಿದರು.
ತದನಂತರ ಯಾದಗಿರಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ ಸಭೆಯಲ್ಲಿ ಮಾತನಾಡಿ, ಮಂಡ್ಯದಲ್ಲಿ ಆಯೋಜಿಸಿದ ೮೭ ನೇ ಅಖಲಿ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಜನಪದ ವಿದ್ವಾಂಸರು ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿ ಬೆಳಿಸಿದವರಾದ ಗೊ ರು ಚನ್ನಬಸಪ್ಪ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದರೆ ಈ ಸಮ್ಮೇಳನಕ್ಕೆ ಒಂದು ಶೋಭೆ ಬರಲಿದೆ ಎಂದು ಅವರು ಪ್ರಸ್ತಾಪಿಸಿದಾಗ ಎಲ್ಲಾ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಒಪ್ಪಿಗೆ ಸೂಚಿಸಿ, ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಅಯ್ಯಣ್ಣ ಹುಂಡೇಕಾರ. ಡಾ. ಸುಭಾಷಚಂದ್ರ ಕೌಲಗಿ. ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ. ಭೀಮರಾಯ ಲಿಂಗೇರಿ. ಡಾ. ಸಿದ್ದರಾಜರೆಡ್ಡಿ. ಗೌರವ ಕೋಶ್ಯಾಧ್ಯಕ್ಷ ಬಸವರಾಜ ಅರಳಿ ಮೊಟ್ನಳಿ. ಬಸವಂತ್ರಾಯ ಗೌಡ ಮಾಲಿ ಪಾಟೀಲ. ಆರ್ ಮಹಾದೇವಪ್ಪಗೌಡ ಅಬ್ಬೆತುಮಕೂರ. ಸಿ ಎಮ್ ಪಟ್ಟೆದಾರ. ನಾಗೆಂದ್ರ ಜಾಜಿ. ಸೋಮಶೇಖರ್ ಮಣ್ಣೂರ. ನೂರಂದಪ್ಪ ಲೇವಡಿ. ಚೆನ್ನಪ್ಪ ಸಾಹು ಠಾಣಗುಂದಿ. ಡಾ. ಎಸ್ ಎಸ್ ನಾಯಕ. ಸ್ವಾಮಿದೇವ ದಾಸನಕೇರಿ. ಡಾ. ಗಾಳೆಪ್ಪ ಪೂಜಾರಿ ಜಿಲ್ಲೆಯ ಎಲ್ಲಾ ಕನ್ನಡ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.