ಪೂಜ್ಯ ಡಾ. ಬಾಲಯೋಗಿನಿ ಜಯಶ್ರೀ ಮಾತೆ 59ನೇ ಜನ್ಮ ದಿನ ಆಚರಣೆ : ಭಕ್ತರಿಂದ ಭಜನ
ಕಲಬುರಗಿ: ಸಕಲ ಜೀವ ರಾಶಿಗಳಲ್ಲಿ ಮಾನವ ಬುದ್ಧಿವಂತ ಜೀವಿ. ಹಾಗಾಗಿ ಅಹಿಂಸಾ ತತ್ವ ಪಾಲನೆಯಿಂದ ಸಕಲ ಕಲ್ಯಾಣ ಸಾಧ್ಯ ಎಂದು ದಂಡೋತಿಯ ಪೂಜ್ಯ ಜಯಶ್ರೀ ಮಾತೆ ನುಡಿದರು.
ಚಿತ್ತಾಪುರ ತಾಲೂಕಿನ ದಂಡೋತಿಯ ಬಲಭೀಮೇಶ್ವರ ದೇವಸ್ಥಾನದಲ್ಲಿ ಮಹಾ ತಪಸ್ವಿ ಪೂಜ್ಯ ಜಯಶ್ರೀ ಮಾತಾಜೀಯವರ 59 ನೇ ಹುಟ್ಟು ಹಬ್ಬವನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದ ಭಕ್ತರಿಗೆ ಆಶೀರ್ವಚನ ನೀಡಿದರು.
ಗುರುಮಾತೆ ಯಾನಾಗುಂದಿಯ ಶಿವೈಕ್ಯ ಮಾಣಿಕೇಶ್ವರಿ ಅಮ್ಮ ನವರ ಕನಸು ಸಾಕಾರವಾಗಿಸಲು ಸರ್ವರು ಪಣ ತೊಡಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಆಚರಣೆಗಳ ಭರಾಟೆ ಜೋರಾಗಿ ಸಾಗಿದೆ. ಇದರಿಂದ ನಮ್ಮ ಸಂಸ್ಕೃತಿ, ಸಂಸ್ಕಾರಕ್ಕೆ ಕುತ್ತು ಬರುವ ಮುನ್ನ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು.
ಪ್ರತಿಯೊಬ್ಬ ಪಾಲಕರು ಭವ್ಯ ಸನಾತನ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದು ಕರೆ ನೀಡಿದರು.
ಇಂದು ಸಂಜೆ 5 ಗಂಟೆಗೆ ಹೋಮ ಪೂಜಾ (ವಿಶೇಷ ಸಂತಾನ ಫಲ ಭಾಗ್ಯಗೋಸ್ಕರ ಮಹಾಪೂಜಾ) ನೆರವೇರಿತು.
ಬಳಿಕ ಭಕ್ತರು, ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಮಹಾಪ್ರಸಾದ, ನಿರಂತರ ಭಜನೆ ಕಾರ್ಯಕ್ರಮ ನೆರವೇರಿತು. ಈ ವೇಳೆ ಚಿತ್ತಾಪುರ, ಕಲಬುರಗಿ, ಸೇಡಂ ಹಾಗೂ ಗುರುಮಠಕಲ್ ನಿಂದ ಅಸಂಖ್ಯಾತ ಭಕ್ತರ ದಂಡೇ ಸೇರಿತ್ತು.
ನಂದಕಿಶೋರ್ ಚೌದರಿ ಹೋಮ ವಿಧಿ ವಿಧಾನಗಳನ್ನು ನೆರವೇರಿಸಿದರು. ದಂಡೋತಿ ಗ್ರಾಮದ ಪ್ರಮುಖರು ಸೇರಿದಂತೆ ಡಾ. ನರಸಿಂಗರಾವ್ ಕಾಶಿಗಾವ್, ಎಸ್ ಎಸ್ ಕೆ ಸಮಾಜದ ಯುವ ಅಧ್ಯಕ್ಷ ವಿನಾಯಕ ಜನಾರ್ಧನ, ನರೇಶ ಗೋಂಗ್ಲೆ, ಅಶೋಕ ಠಾಕೂರ್, ವಿಠ್ಠಲ್ ಮಿಸ್ಕಿನ್, ನಂದಿ ಕಿಶೋರ್ ಕಮಲಾಪುರ ಸೇರಿದಂತೆ ಹಲವರು ಪಾಲ್ಗೊಂಡು ಮಾತೆಯ ಆಶೀರ್ವಾದ ಪಡೆದರು.