ಕಾರ್ಖಾನೆಗೆ ಗೂ ಡ್ಸ್ ರೈಲು ತೆರಳುವ ಸಮಯವನ್ನು ಬದಲಾಯಿಸಬೇಕು. ಇದರಿಂದ ಸಾರ್ವಜನಿಕರು ತೊಂದರೆ ಅನುಭ ವಿಸುತ್ತಿದ್ದಾರೆ. ಸಮಯಕ್ಕೆ ತುರ್ತು ಚಿಕಿತ್ಸೆಯ ಅಗತ್ಯ ಇರುವ ವ್ಯಕ್ತಿ ಜೀವ ಕಳೆದುಕೊಳ್ಳುವಂತಾಗಿದೆ. – ಶಿವಕುಮಾರ್ ಅಪ್ಪಾಜಿ, ಸೇಡಂ ಜನಹಿತ ರಕ್ಷಣಾ ಸಮಿತಿ.
ಸೇಡಂ: ನಿವಾಸಿ ಮುಕ್ತಾರ ಎಂಬಾತ ಹೃದಯಾಘಾತದಿಂದ ಅಸ್ಪತ್ರೆಗೆ ತೆರಳಿದ್ದಾನೆ. ಹೆಚ್ಚಿನ ಮತ್ತು ತುರ್ತು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲು ವೈದ್ಯರು ಸೂಚಿಸಿದ್ದು, ಅದರಂತೆ ಅಂಬುಲೆನ್ಸ್ ನಲ್ಲಿ ತೆರಳುವಾಗ ಮುಕ್ತಾರ ಎಂಬಾತ ಸಾವನ್ನಪ್ಪಿದ್ದಾನೆ.
ಕಲಬುರಗಿಗೆ ತೆರಳುವಾಗ ಸೇಡಂ ಪಟ್ಟಣದ ಹೃದಯ ಭಾಗದಲ್ಲಿರುವ ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ಸಂಪರ್ಕ ಕಲ್ಪಿಸುವ ರೈಲು ಹಳಿಯಲ್ಲಿ ಗೂಡ್ಸ್ ರೈಲು ಸಂಚರಿಸಿದೆ. ಇದರಿಂದ ವಿಳಂಬವಾದ ಕಾರಣ ಮುಕ್ತಾರ ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಿದ್ದು, ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸಿದ್ದಲ್ಲಿ ವ್ಯಕ್ತಿ ಬದುಕುತ್ತಿದ್ದ ಎನ್ನಲಾಗಿದ್ದು, ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ಎದುರು ಜನ ಜಮಾಯಿಸಿದ್ದಾರೆ. ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.
ಕಾರ್ಖಾನೆ ಹಾಗೂ ರೈಲ್ವೆ ಇಲಾಖೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ತಿಂಗಳುಗಳಿಂದ ವಾಸವದತ್ತಾ ರೈಲು ಹಳಿ ಸ್ಥಳಾಂತರಿಸಬೇಕು ಅಥವಾ ರೈಲು ಸಂಚಾರ ಸಮಯ ಬದಲಾಯಿಸುವಂತೆ ಒತ್ತಾಯಿಸಿ ಸೇಡಂ ಜನಹಿತ ರಕ್ಷಣಾ ಸಮಿತಿ ಹೋರಾಟ ನಡೆಸಿತ್ತು. ಕಲಬುರಗಿ ಜಿಲ್ಲಾಧಿಕಾರಿ ರೈಲು ಸಂಚಾರ ಸಮಯ ಬದಲಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ. ರೈಲು ಹಳಿ ಬದಲಿಸುವುದು ಇಲ್ಲವೇ ಸಮಯ ಬದಲಾವಣೆ ಮಾಡುವ ಕುರಿತು ಸ್ಥಳೀಯರ ಬೇಡಿಕೆಯಿದೆ.