ಸೇಡಂ ತಾಲೂಕಿನ ಮಲಖೇಡ ಗ್ರಾ.ಪಂ ನಲ್ಲಿ ಕೋಟ್ಯಂತರ ರೂ.ಅವ್ಯವಹಾರ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ | ಗ್ರಾಪಂ ಮಾಜಿ ಸದಸ್ಯ ಉಮೇಶ ಚವ್ಹಾಣ ಜಿಪಂ ಸಿಇಒಗೆ ಒತ್ತಾಯ
ಕಲಬುರಗಿ: ಪಂಚಾಯಿತಿಗೆ ಪಿಡಿಓ ಆಗಿ ನೇಮಕವಾದ ಕೆಲವೇ ತಿಂಗಳಲ್ಲಿ ಅಧಿಕಾರಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಗ್ರಾ.ಪಂ. ಮಾಜಿ ಸದಸ್ಯ ಉಮೇಶ ಚವ್ಹಾಣ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯಿತಿ ಯಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂ. ಅವ್ಯವಹಾರ ಮಾಡಿರುವ ಪಿಡಿಒ ದಶರಥ ಪಾತ್ರೆ ವಿರುದ್ಧ ಎಫ್ಐಆರ್ ದಾಖಲಿಸಿ ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಸ್ಥಳೀಯ ಹೋರಾಟಗಾರ ಸುನೀಲಕುಮಾರ ನಿಂಗಮಾರಿ ಒತ್ತಾಯಿಸಿದ್ದಾರೆ.
2025-26ರ 15ನೇ ಹಣಕಾಸು ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 25ರ ಅ.ನಲ್ಲಿ ಒಟ್ಟು 60 ವೋಚರ್ಗಳಿಗೆ 41.90 ಲಕ್ಷ ರೂ. ಪಾವತಿಯಾ ಗಿದೆ. ಇದರಲ್ಲಿ 15ನೇ ಹಣಕಾಸು ಮತ್ತು ಕರ ವಸೂಲಿ ಅನುದಾನದಡಿ 1,55,68,668 ರೂ. ಖರ್ಚು ಮಾಡಿದ್ದು, ನಕಲಿ ದಾಖಲಾತಿ ಸೃಷ್ಟಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ. ಕೇವಲ ನಾಲ್ಕು ತಿಂಗಳಲ್ಲೇ ಒಂದೂವರೆ ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯ ತಾಪಂ ಇಒ ಅವರಿಗೆ ದೂರು ಸಲ್ಲಿಸಿದ್ದು, ಅಧಿಕಾರಿಗಳ ತಂಡ ರಚಿಸಿ ವಿಚಾರಿಸಲಾಗಿದೆ.
ಈಗ ವಿಚಾರಣಾ ವರದಿಯಲ್ಲಿ ಅವ್ಯವಹಾರ ಮತ್ತು ಲೋಪದೋಷ ಕಂಡುಬಂದಿದ್ದು, ಸಿಇಒ ಅವರಿಗೆ ವರದಿ ಸಲ್ಲಿಸಿ 20 ದಿನಗಳು ಕಳೆದರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿಡಿಒ ಬಳಿ ಇರುವ ಪಿಸ್ತೂಲ್ ಅನುಮತಿ ರದ್ದುಪಡಿಸಬೇಕು, ಪಿಡಿಒ ಅವರ ಆಸ್ತಿ ಮೇಲೆ ತನಿಖೆ ನಡೆಸಬೇಕು, ಲೂಟಿ ಮಾಡಿದ ಹಣವನ್ನು ಮರು ಪಾವತಿಸಬೇಕು. ಪಿಡಿಒ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಸಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ರಾಜು ಕಟ್ಟಿ ಶಿವರಾಜ ವಿಶ್ವಕರ್ಮ, ಚಂದ್ರಶೇಖರ ಕಟ್ಟಿಮನಿ, ರಮೇಶ ಹಡಪದ, ವಿಜಯಕುಮಾರ ಕೆ. ಇತರರಿದ್ದರು.
