30 ರಂದು ಹೊನ್ನಾಳ ಭಾಗ್ಯವಂತಿ ದೇವಿ ಜಾತ್ರಾ ಮಹೋತ್ಸವ
ಯಾದಗಿರಿ : ಅಕ್ಟೋಬರ್ 30 ರಂದು ನಡೆಯುವ ಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವದ ಕರಪತ್ರವನ್ನು ನಗರದ ಟೋಕರಿ ಕೋಲಿ ಸಮಾಜದ ಜಿಲ್ಲಾ ಕಛೇರಿಯಲ್ಲಿ ಕರಪತ್ರ ಬಿಡುಗಡೆ ಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ್, ಜೇವರ್ಗಿ ತಾಲೂಕಿನ ಸುಕ್ಷೇತ್ರ ಹೊನ್ನಳಾ ಗ್ರಾಮದಲ್ಲಿ ಎರಡನೇ ವರ್ಷದ ಭಾಗ್ಯವಂತಿ ದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್ 30 ರಂದು ನಡೆಯಲಿದೆ. ಇದರ ಅಂಗವಾಗಿ ಬೆಳಿಗ್ಗೆ ಬಾಜ- ಭಜಂತ್ರಿ ಮೂಲಕ ಗಂಗಾಸ್ಥಾನ, ದೇವಿಯ ಪಲ್ಲಕ್ಕಿ ಮೆರವಣಿಗೆ ನಂತರ ಸಂಜೆ ಭಾಗ್ಯವಂತಿದೇವಿ ವಿಶೇಷ ಪೂಜೆ ನೆರವೆರಲಿವೆ ಎಂದರು.
ದೇವಸ್ಥಾನ ಸಮಿತಿ, ಗ್ರಾಮಸ್ಥರು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಅಂದು ರಾತ್ರಿ ೯.೦೦ ಗಂಟೆಗೆ ಜಾತ್ರಾ ಮಹೋತ್ಸವ ಅಂಗವಾಗಿ “ಶ್ರೀ ಭಾಗ್ಯವಂತಿ ದೇವಿ ನಾಟಕ ಅಥಾರ್ತ ಬಂಜೆಯ ತೊಟ್ಟಿಲು ತೂಗಿತು ಎಂಬ ಸುಂದರ ಸಾಮಾಜಿಕ ನಾಟಕ ನಡೆಯಲಿದೆ ಎಂದು ತಿಳಿಸಿದರು.
ಈ ವೇಳೆ ಶಂಕರಗೌಡ, ಸಿದ್ದಣ್ಣ ಕರಣಿಗಿ, ನಾಗಪ್ಪ, ಈಶಪ್ಪ, ಶೇಖಪ್ಪ, ಸಿದ್ದಪ್ಪ, ವಿಶ್ವರಾಧ್ಯಾ, ಶ್ರೀಶೈಲ್, ರಮೇಶ, ವಿಶ್ವರಾಧ್ಯಾ, ಮಾಣಿಕೆಪ್ಪ, ಹಣಮಂತ ದರ್ಶನ ಭಗವಾನ ಸಕ್ರೇಪ್ಪ ಮಲ್ಲಪ್ಪ, ಆಂಜನೇಯ, ಬಾಬಾಖಾನ, ಮುದ್ದಮ್ಮ, ಕಾಶಮ್ಮ, ಶಿವಬಸಮ್ಮ, ನಾಗಮ್ಮ, ಮಲ್ಲಮ್ಮ, ದೊಡ್ಡ ಯಲ್ಲಮ್ಮ, ಸಣ್ಣ ಯಲ್ಲಮ್ಮ, ಅವ್ವಮ್ಮ, ತಿಪ್ಪಮ್ಮ, ಕಾಶಮ್ಮ, ಮೌಲಾಬಿ, ಸೇರಿ ಅನೇಕರಿದ್ದರು.