ಯಾದಗಿರಿ: ಕನ್ನಡಾಂಬೆಯ ಕೀರ್ತಿ ಹೆಚ್ಚಿಸುವ ಕಾರ್ಯ ಕನ್ನಡಿಗರು ದೇಶ ಅಷ್ಟೇ ಅಲ್ಲ, ವಿದೇಶಗಳಲ್ಲಿಯೂ ಮಾಡುತ್ತಿರುವುದು ಕನ್ನಡಿಗರಾದ ನಾವೆಲ್ಲರೂ ಹೆಮ್ಮೆ ಪಡುವಂತದ್ದು.
ದೂರದ ಜಪಾನ್ ನಲ್ಲಿ ನೆಲೆಸಿರುವ ಕನ್ನಡಿಗರು ಟೋಕಿಯೊ ಕನ್ನಡಿಗರ ಬಳಗದಿಂದ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ.
ಆ ಸಂಭ್ರಮದ ಕ್ಷಣಗಳ ಹಬ್ಬದ ದೃಶ್ಯಗಳನ್ನು ಚಿಕ್ಕಮಗಳೂರು ಮೂಲದ ಕನ್ನಡತಿಯೊಬ್ಬರು ಹಂಚಿಕೊಂಡಿದ್ದಾರೆ.
ರಾಜ್ಯೋತ್ಸವ ಹಿನ್ನೆಲೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು, ಮಕ್ಕಳು ಶ್ರೀರಾಮ, ಸೀತೆ ಮಾತೆ, ಹನುಮ ವೇಷದಲ್ಲಿ ಮಿಂಚುವ ಮೂಲಕ ರಾಮಾಯಣದ ಸನ್ನವೇಶವನ್ನೇ ಸೃಷ್ಟಿಸಿದ್ದರು.
ಅಲ್ಲದೆ ಬಗೆಬಗೆಯ ಸಾಂಪ್ರದಾಯಿಕ ತಿನಿಸುಗಳ ರುಚಿ ಸವಿದರು. ಕನ್ನಡಿಗರು ನಮ್ಮ ದೇಶದ ಸಂಸ್ಕೃತಿ – ಸಂಸ್ಕಾರವನ್ನು ವಿದೇಶಗಳಲ್ಲಿಯೂ ಮೊಳಗಿಸುತ್ತಿರುವುದು ನಾವೆಲ್ಲ ಹೆಮ್ಮೆ ಪಡುವ ವಿಷಯ..
ಇನ್ನು ಕನ್ನಡಿಗರೊಬ್ಬರು ಬೈಕ್ ಮೇಲೆ ಪ್ಯಾರಿಸ್ ಗೆ ತೆರಳಿ ರಾಜ್ಯೋತ್ಸವ ವೇಳೆ ಏಫೀಲ್ ಟವರ್ ಎದುರು ಕನ್ನಡ ಧ್ವಜ ಪ್ರದರ್ಶಿಸಿ ಸಂಭ್ರಮಿಸಿದ್ದಾರೆ.