ಹೈದರಾಬಾದ ಮಿನಿ ಭಾರತವಿದ್ದಂತೆ, ವಿವಿಧ ರಾಜ್ಯದ ಜನರು ಸುರಕ್ಷೆತೆಯಿಂದಿದ್ದಾರೆ – ರಾಜ್ಯಪಾಲ ವರ್ಮಾ…
“ಕರ್ನಾಟಕ ಭವನ ನಿರ್ಮಾಣಕ್ಕೆ ಮನವಿ”
ಹೈದರಾಬಾದ : ಭಾರತ ವಿಶಿಷ್ಟವಾದ ಸಂಪ್ರದಾಯ, ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸರ್ವಶ್ರೇಷ್ಠ ರಾಷ್ಟ್ರವಾಗಿ ನಿರ್ಮಾಣ ಹೊಂದಿದೆ ಎಂದು ತೆಲಂಗಾಣ ರಾಜ್ಯಪಾಲ ಜಿಷ್ಣುದೇವ ವರ್ಮಾ ನುಡಿದರು.
ತೆಲಂಗಾಣ ರಾಜಭವನದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದು ಏಕ ಸಂಸ್ಕೃತಿ ಶ್ರೇಷ್ಠ ಭಾರತ ಎಂಬ ಸಮಾರಂಭವು ನಮ್ಮ ಸಂಸ್ಕೃತಿಯನ್ನು ತೊರಿಸುತ್ತಿದೆ ಹಾಗೂ ಹೈದರಾಬಾದ ನಗರವು ಮಿನಿ ಭಾರತವಾಗಿದೆ.
ಇಲ್ಲಿ ಎಲ್ಲಾ ರಾಜ್ಯದ ಜನರು ತಮ್ಮ ಸಂಸ್ಕೃತಿ- ಸಂಪ್ರದಾಯ ವನ್ನು ಜೀವನದಲ್ಲಿ ಅಳವಡಿಸಿ ಕೊಂಡು ಜೀವನ ನಡೆಸುತ್ತಿ ರುವುದು ಅಭಿನಂದನೀಯ ಎಂದು ಅವರು ಅಭಿಪ್ರಾಯ ಪಟ್ಟರು.
ಭಾರತವು ಜಮ್ಮು- ಕಾಶ್ಮಿರದಿಂದ ಕನ್ಯಾಕುಮಾರಿಯ ವರೆಗೆ ಪಸರಿಸಿರುವ ದೇಶದ ನಮ್ಮ ಪ್ರಜೆಗಳು ಸಹೋದರ ಭಾವನೆಯ ನ್ನು ಹೊಂದಿರುವುದು ವಿಶೇಷ.
ಹೀಗಾಗಿ ಹೈದರಾಬಾದ ನಗರದಲ್ಲಿ ಕನ್ನಡಿಗರು, ಮಹಾರಾಷ್ಟ್ರ, ಪಂಜಾಬ್, ಹರಿಯಾಣ, ಆಂಧ್ರಪ್ರದೇಶ, ಚತ್ತಿಸಗಡ, ಹೀಗೆ ಅನೇಕ ರಾಜ್ಯದಿಂದ ಹೈದರಾಬಾದಗೆ ಬಂದು ನೆಲೆಸಿ ತಮ್ಮ ಜೀವನವನ್ನು ನಡೆಸುತ್ತಿರುವುದು, ಇಲ್ಲಿ ಯಾವುದೇ ರಾಜ್ಯದ ಪ್ರಜೆಗಳಿಗೆ ತೊಂದರೆಯಾಗದಂತೆ ತೆಲಂಗಾಣ ರಾಜಭವನ ನೋಡಿಕೊಳ್ಳುವುದಕ್ಕೆ ಇಂದಿನ ಸಂಸ್ಕೃತಿಕ ಸಮಾರಂಭವೇ ಸಾಕ್ಷಿಯಾಗಿದೆ ಎಂದು ರಾಜ್ಯಪಾಲರು ಹೇಳಿದರು.
ಟಿಎಸ್ಆರ್ ಟಿಸಿ ಎಂ.ಡಿ, ಐಪಿಎಸ್ ಅಧಿಕಾರಿ ವಿ.ಸಿ.ಸಜ್ಜನರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿಶ್ವಕ್ಕೆ ಪ್ರಜಾ ಪ್ರಭುತ್ವದ ಪರಿಕಲ್ಪನೆ ನೀಡಿರುವ ವಿಶ್ವ ಗುರು ಬಸವೇಶ್ವರರ ನಾಡು, ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಬ್ರಿಟಿಷರನ್ನು ನಡುಗಿಸಿದ ಭಾರತದ ಮೊದಲ ವೀರರಾಣಿ ಕಿತ್ತೂರು ಚೆನ್ನಮ್ಮ, ಭಾರತೀಯ ಇಂಜಿನಿಯರಿಂಗ್ ಪ್ರತಿಭೆಯ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ವಿಶ್ವವಿಖ್ಯಾತ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸ ಹಾಗೂ ಜ್ಞಾನಪೀಠ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಇತರ ಪ್ರಸಿದ್ಧ ವ್ಯಕ್ತಿಗಳ ಜನ್ಮ ನೀಡಿದ ನಾಡು ಕರ್ನಾಟಕ.
ಇಂಥಹ ನಾಡಿನಿಂದ ನಾನು ಸಾಹಿತ್ಯ ಪರಂಪರೆಯಲ್ಲಿ ಮುಳುಗಿರುವ ನಾಡು ಕರ್ನಾಟಕದವನು ಎಂಬುದಕ್ಕೆ ಹೆಮ್ಮೆಪಡುತ್ತೇನೆ, ನಮ್ಮ ನಾಡು, ನುಡಿ, ನೆಲ, ಜಲ ಉಳಿಸಿ ಬೆಳೆಸಲು ಬದ್ಧ ರಾಗೋಣ ಎಂದು ಕರೆ ನೀಡಿದರು.
ಹೈದರಾಬಾದನಲ್ಲಿ ಇರುವ ಕನ್ನಡಿಗರಿಗಾಗಿ ಒಂದು ಕನ್ನಡ ಭವನ ನಿರ್ಮಾಣ ಮಾಡಲು ರಾಜ್ಯಪಾಲರಿಗೆ ಮನವಿ ಮಾಡಿದರು.
ಕರ್ನಾಟಕದಿಂದ ಸುಮಾರು ವರ್ಷಗಳಿಂದ ಇಲ್ಲಿ ಜೀವನ ಸಾಗಿಸುತ್ತಿರುವ ಕನ್ನಡಿಗರ ಆಸ್ಥಿತತ್ವ ಉಳಿಸಲು ಸರ್ವ ಪ್ರಯತ್ನ ಮಾಡಬೇಕು ಎಂದರು.
ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಹೈದರಾಬಾದ್ ರಾಜಭವನದಲ್ಲಿ ಐತಿಹಾಸಿಕ ಸಮಾರಂಭ ಕರ್ನಾಟಕ ರಾಜ್ಯೋತ್ಸವ ನಡೆಸಿಕೊಟ್ಟ ತೆಲಂಗಾಣ ರಾಜ್ಯಪಾಲರಾದ ಜಿಷ್ಣುದೇವ್ ವರ್ಮಾ ಅವರಿಗೆ ವಿಶೇಷ ಅಭಿನಂದನೆಗಳು ಸಲ್ಲಿಸಿ ಸನ್ಮಾನಿಸಿದರು.
ಕನ್ನಡ ಸಂಸ್ಕೃತಿ ಮೆಚ್ಚು ವಂತಹದು. ಜನರು ಒಳ್ಳೆಯ ಮಾದರಿ ಜೀವನ ನಡೆಸುತ್ತಾರೆ ಎಂಬುದಕ್ಕೆ ಇಂದು ಕರ್ನಾಟಕವೇ ಸಾಕ್ಷಿಯಾಗಿದೆ ಎಂದು ತೆಲಂಗಾಣ ಫೀಲ್ಮ ನಿರ್ದೇಶಕರ ಸಂಘದ ಅಧ್ಯಕ್ಷ ವೀರಶಂಕರ ಕನ್ನಡದಲ್ಲಿಯೇ ಮಾತನಾಡಿ ಎಲ್ಲರನ್ನು ಬೆರಗುಗೊಳಿಸಿದರು.
ಸಮಾರಂಭದಲ್ಲಿ ಗದಗನ ರಾಜಶೇಖರ ಅವರ ಕಲಾ ತಂಡವು ಆಕರ್ಷಕವಾದ ದೀಪನೃತ್ಯ ಪ್ರದರ್ಶನ ನೀಡಿ ನೋಡುಗರ ಗಮನ ಸೆಳೆಯಿತು. ಕೇರಳ, ತಮಿಳ, ಪಂಜಾಬಿ ನೃತ್ಯಗಳನ್ನು ಪ್ರದರ್ಶನ ಗೊಂಡವು.
ರಾಜಪಾಲರ ಕಾರ್ಯದರ್ಶಿ ಬುರಾ ವೇಂಕಟೇಶ ಪ್ರಸ್ತಾವಿಕ ವಾಗಿ ಮಾತನಾಡಿದರು. ಪ್ರಧಾನಿಯವರ ಏಕ ಭಾರತ ಶ್ರೇಷ್ಠ ಭಾರತ ಸಂಸ್ಕೃತಿಯನ್ನು ನಾವು ಇಂದು ಕಾರ್ಯರೂಪಕ್ಕೆ ತಂದಿರುವುದು ಹೆಮ್ಮೆಯ ವಿಷಯವಾಗಿದೆ. ಇಲ್ಲಿ ಎಲ್ಲಾ ಜಾತಿ, ಜನಾಂಗದ ಪ್ರಜೆಗಳು ಜೀವಿಸುವ ರಾಜ್ಯ ನಮ್ಮ ತೆಲಂಗಾಣ ಎಂದು ಬಣ್ಣಿಸಿದರು.
ಸಮಾರಂಭದಲ್ಲಿ ಪಲ್ಲವಿ, ಕನ್ನಡಿಗ ರಾಜಶೇಖರ ಐಪಿಎಸ್ ಹಾಗೂ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗ್ದೂರಿ, ಬಸವರಾಜ ಲಾರಾ, ರಮೇಶ ಜಿರಗೆ, ನಾಗರಾಜ, ಚಿಕ್ಕಮಂಗಳೂರಿನ ಡಾ. ಶ್ರೀನಿವಾಸ ದೇಶಪಾಂಡೆ, ಅಜೀತ ದೇಶಪಾಂಡೆ, ನಾಗರಾಜ, ಬೆಂಜಮಿನ, ನಟರಾಜ, ಪ್ರಾಣೇಶ ಕುಲಕರ್ಣಿ, ಹರೀಶ ಪಸಪೂಲ್, ಭಾಗಿಯಾಗಿದರು. ವಿಠಲ ಜೋಶಿ ವಂದಿಸಿದರು.