ಯಾದಗಿರಿ : ನವೆಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಯಾದಗಿರಿ ಜಿಲ್ಲೆಯ ಕಲೆ ಮತ್ತು ಸಂಸ್ಕೃತಿ, ಸಾಹಿತ್ಯ, ಆರೋಗ್ಯ, ಶಿಕ್ಷಣ, ಶಾಂತಿ ಸೌಹಾರ್ದತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಕ್ರೀಡೆ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸನ್ಮಾನಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಅ.29ರ ವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ಅರ್ಜಿಗಳನ್ನು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಿಗದಿತ ದಿನಾಂಕದ ಒಳಗೆ ಭೌತಿಕ ಪ್ರತಿ ಮೂಲಕ ಸಲ್ಲಿಸಬೇಕಿದೆ.
ಯಾವುದೇ ನಿಗದಿತ ಅರ್ಜಿ ನಮೂನೆಯೂ ಇರುವುದಿಲ್ಲ. ಅರ್ಜಿದಾರರು ಅರ್ಜಿಯೊಂದಿಗೆ ಸ್ವ-ವಿವರದ ಪ್ರತಿ ಹಾಗೂ ಮಾಡಿರುವ ಸಾಧನೆ ಮತ್ತು ವಿಶೇಷ ಕೆಲಸಗಳ ಬಗೆಗಿನ ಮಾಹಿತಿ ಪ್ರತಿ ಸಹ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಭವನದಲ್ಲಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಮಾಹಿತಿ ಪಡೆದುಕೊಳ್ಳ ಬ ಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.