ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಲು ಟಿ. ಎನ್. ಭೀಮು ನಾಯಕ್ ಸಲಹೆ
ಯಾದಗಿರಿ : ಕನ್ನಡ ರಾಜ್ಯೋತ್ಸ ವದ ಪ್ರಯುಕ್ತ ಪ್ರತಿ ಕಾರ್ಯಕರ್ತರು ಕನ್ನಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕು, ಕನ್ನಡ ತೇರು ಎಳೆಯಲು ಸರ್ವ ಪದಾಧಿಕಾರಿಗಳು ಮುಂದಾಳತ್ವ ವಹಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ ಎನ್ ಭೀಮು ನಾಯಕ್ ಕರೆ ನೀಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣ ಮತ್ತು ಖಾಸಗಿ ಹೋಟೆಲ್ ನಲ್ಲಿ ನಡೆದ ಪ್ರತ್ಯೇಕ ಸಭೆಗಳಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರ ಮುಂಬರುವ ಚಳಿಗಾಲದ ಅಧಿವೇಷನದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ಕ್ರಮಕೈಗೊಳ್ಳಬೇಕು, ಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ನಡೆಯುವ ಕನ್ನಡ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ತಾಲೂಕು ಅಧ್ಯಕ್ಷರುಗಳು ಪ್ರತಿ ಗ್ರಾಮ ಘಟಕಗಳ ಅಧ್ಯಕ್ಷರ ಸಭೆ ನಡೆಸಿ, ಕಾರ್ಯಕ್ರಮದ ರೂಪರೇಷ ತಯಾರಿಸಲು ಸೂಚಿಸಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ನಡೆಯುವ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಕಾರ್ಯಕರ್ತರು ಪಣತೊಡಬೇಕು, ಅದೇ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ದಿನಕ್ಕಿಂತ ಮುನ್ನ ಅಂಗಡಿ ಮುಂಗಟ್ಟುಗಳು ಮಳಿಗೆಗಳು, ಹಾಗೂ ಇನ್ನಿತರ ಭಾಗಗಳಲ್ಲಿ ಕನ್ನಡ ನಾಮ ಫಲಕಗಳು ಶೇ.60 ರಷ್ಟು ಕನ್ನಡ ಅಕ್ಷರಮಾಲೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಸಿದರು.
ಕರವೇ ಕಾರ್ಯಕರ್ತರು ಶಿಸ್ತು ಸಂಯಮಕ್ಕೆ ಹೆಸರಾದವರು ಅದಕ್ಕೆ ತಕ್ಕಂತೆ ಸಮಾಜದ ಅನ್ಯಾಯಗಳನ್ನು ಸರಿಪಡಿಸಲು ನೀವು ಯಾವಾಗಲೂ ಒಂದು ಹೆಜ್ಜೆ ಮುಂದೆ ಇರಬೇಕು, ಕನ್ನಡ ನಾಡು, ನುಡಿ, ನೆಲ, ಜಲ, ಕಲೆ, ಸಾಹಿತ್ಯ, ಸಂಸ್ಕೃತಿ ಸಂರಕ್ಷಣೆಯಲ್ಲಿ ಪ್ರತಿ ಕಾರ್ಯಕರ್ತರು ಕೈ ಜೋಡಿಸುವ ಮೂಲಕ ಹೆಜ್ಜೆ ಹಾಕಬೇಕು ಎಂದರು.
ಕಾರ್ಯಕರ್ತರು ಗಟ್ಟಿಯಾಗಿ ನಿಂತಾಗ ಮಾತ್ರ ಸಂಘ ಸಂಘಟನೆಗಳು ಉಳಿಯಲು ಸಾಧ್ಯವಾಗುತ್ತದೆ ಗ್ರಾಮಮಟ್ಟ, ಹೋಬಳಿ ಮಟ್ಟ , ತಾಲ್ಲೂಕು ಮಟ್ಟ, ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ ನಾಡು ನುಡಿಯನ್ನು ಕಟ್ಟಿ ಬೆಳೆಸುವಲ್ಲಿ ಕಾರ್ಯಕರ್ತರು ಬಹು ಮುಖ್ಯ ಪಾತ್ರ ವಹಿಸುತ್ತಾರೆ.
ಪ್ರಮುಖವಾಗಿ ಗಡಿನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕಾರ್ಯಕರ್ತರ ಶ್ರಮ ಅಪಾರವಾಗಿದೆ ಎಂದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸಂತೋಷ್ ನಿರ್ಮಲ್ ಕರ್, ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ಮಲ್ಲು ಮಾಳಿಕೇರಿ, ಹಣಮಂತ ನಾಯಕ ಖಾನಳ್ಳಿ, ಶರಣಪ್ಪ ದಳಪತಿ, ಶರಣು ಸಾಹುಕಾರ ವಡ್ನಳ್ಳಿ, ಹಣಮಂತ ಅಚ್ಚೋಲಾ, ಚೌಡಯ್ಯ ಬಾವೂರ, ವಿಶ್ವರಾಜ ಹೊನಗೇರಾ, ಯಮನಯ್ಯ ಗುತ್ತೇದಾರ, ಭೀಮು ಮಲ್ಲಿಬಾವಿ, ಸಾಹೇಬಗೌಡ ನಾಯಕ, ಸಿದ್ದಪ್ಪ ಕೂಯಿಲೂರು, ಭೀಮರಾಯ ರಾಮಸಮುದ್ರ, ಹಣಮಂತ ತೇಕರಾಳ, ಸಲೀಂ ಪಾಷಾ ಯರಗೋಳ, ಸಿದ್ದಪ್ಪ ಕ್ಯಾಸಪನಳ್ಳಿ, ಶರಣು ಅಂಗಡಿ, ಅಬ್ದುಲ್ ಚಿಗಾನೂರ, ಶರಣಬಸಪ್ಪ ಯಲ್ಹೇರಿ, ಬಸವರಾಜ ಚನ್ನೂರ, ಮಂಜು ರಾಂಪೂರಳ್ಳಿ, ಹಣಮಗೌಡ ಶಖಾಪೂರ, ಗೋಪಾಲ ಗುರುಮಠಕಲ್ ಸೇರಿದಂತೆ ಸಿದ್ಧಲಿಂಗರೆಡ್ಡಿ ಮುನಗಲ್, ಸುರೇಶ ಬೆಳಗುಂದಿ, ಮಲ್ಲಿಕಾರ್ಜುನ ಕನ್ನಡಿ, ಲಕ್ಷö್ಮಣ ಕೂಡ್ಲೂರು, ಯಲ್ಲು ಚಾಮನಳ್ಳಿ, ಬಸ್ಸು ನಾಯಕ ಸೈದಾಪೂರ, ಚನ್ನಬಸವ ಯರಗೋಳ, ನಾಗೂ ತಾಂಡೂರಕರ್, ವಿಜಯ ವರ್ಕನಳ್ಳಿ ತಾಂಡಾ, ಸಾಬೂ ನೀಲಳ್ಳಿ, ನಾಗೇಂದ್ರ ಕೂಲೂರು, ನಾಗಪ್ಪ ಗೋಪಾಳಪುರ, ಸೈದಪ್ಪ ಗೌಡಗೇರಾ, ಮಹೇಶ ಠಾಣಗುಂದಿ, ಲಕ್ಷö್ಮಣ ಜಿನಿಕೇರಿ, ಶಂಕರ ಜಿನಿಕೇರಿ ತಾಂಡಾ, ಶರಣು ಮಡಿವಾಳ ಸೇರಿದಂತೆ ಇತರರಿದ್ದರು.
ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿ ಕರ್ತವ್ಯ ನಿರ್ವಹಿಸಿ: ರಾಜ್ಯ ಸರ್ಕಾರದ ಆದೇಶದಂತೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರು ಕಡ್ಡಾಯವಾಗಿ ಗುರುತಿನ ಚೀಟಿ ಹಾಕಿಕೊಂಡು ಕಾರ್ಯನಿರ್ವಹಿಸಬೇಕು, ಒಂದು ವೇಳೆ ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳನ್ನು ನಮ್ಮ ಕಾರ್ಯಕರ್ತರು ಪ್ರಶ್ನಿಸಲಿದ್ದಾರೆ, ಈ ಸಂದರ್ಭವನ್ನು ಯಾವುದೇ ಸರ್ಕಾರಿ ಇಲಾಖೆ ನೌಕರರು ತಂದುಕೊಳ್ಳಬಾರದು ಎಂದು ಎಚ್ಚರಿಸಿದರು.
ಯಾದಗಿರಿ ಜಿಲ್ಲೆಯಾದ್ಯಂತ ಖಾಸಗಿ ಶಾಲೆ, ಕಾಲೇಜು, ವ್ಯಾಪಾರ ವಾಣಿಜ್ಯೋದ್ಯಮ ಸಂಸ್ಥೆಗಳು ನ.1ರೊಳಗೆ ಸರ್ಕಾರದ ಆದೇಶದಂತೆ ಶೇ.60ರಷ್ಟು ಕಡ್ಡಾಯ ಕನ್ನಡ ನಾಮಫಲಕ ಅಳವಡಿಸಿಕೊಳ್ಳಬೇಕು, ಒಂದು ವೇಳೆ ಅಳವಡಿಸಿಕೊಳ್ಳದಿದ್ದಲ್ಲಿ ಕರವೇ ಕಾರ್ಯಕರ್ತರು ಸ್ವತಹಃ ಮುಂದಾಗಿ, ನಾಮಫಲಕ ತೆರವುಗೊಳಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ನಡೆಯುವ ಅನಾಹುತಗಳಿಗೆ ಶಾಲೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆಗಳೇ ಕಾರಣರಾಗಬೇಕಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ ಎಚ್ಚರಿಸಿದರು.