ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ತಾಲ್ಲೂಕಿನ ಗಡಿಭಾಗದ ಕಾರಮುಂಗಿ ಹಾಗೂ ಔದತಪೂರ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ಶಿಕ್ಷಕರೊಂದಿಗೆ ಆಪ್ತ ಸಮಾಲೋಚನೆ | ಗಡಿ ಕನ್ನಡ ಶಾಲೆಗಳ ಸ್ಥಿತಿಗತಿ ಅರಿಯಲು ಒತ್ತಾಯ | ಕನ್ನಡ, ಗಡಿ ಅಭಿವೃದ್ಧಿ ಪ್ರಾಧಿಕಾರ ಭಾಷೆ ಉಳಿಸಲು ಪ್ರಯತ್ನಿಸಲು ಮನವಿ

ಹೈದರಾಬಾದ : ತೆಲಂಗಾಣ ರಾಜ್ಯದ ಗಡಿ ಭಾಗಗಳಲ್ಲಿ ಇರುವ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿ ಅಧ್ಯಯನವನ್ನು ಕರ್ನಾಟಕ ಸರ್ಕಾರದ ಅಧಿಕಾರಿಗಳ ನಿಯೋಗ ಮಾಡಿ ಕನ್ನಡಿಗರ ಆಸ್ಮೀತೆ ಉಳಿಸುವ ನಿಟ್ಟಿನಲ್ಲಿ ಕಾರ್ಯಮಾಡಬೇಕು ಎನ್ನುವ ಒತ್ತಾಯ ಗಡಿ ಕನ್ನಡಿಗರಿಂದ ಕೇಳಿಬಂದಿದೆ. ಕನ್ನಡದ ಸ್ಥಿತಿ ಚಿಂತಾಜನಕವಾಗಿದೆ. ಇನ್ನೂ ಕೆಲವೆ ದಿನಗಳಲ್ಲಿ ಕನ್ನಡ ಮಾಧ್ಯಮಗಳ ಶಾಲೆಗಳು ಅಳಿವಿನ ಅಂಚಿಗೆ ತಲುಪ್ಪಿದು ಶೀಘ್ರವೇ ಸರ್ಕಾರದ ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಎಚ್ಚೆತುಕೊಂಡು ಕನ್ನಡ ಶಾಲೆಗಳು ಉಳಿಸುವಲ್ಲಿ ಪ್ರಯತ್ನ ಮಾಡಬೇಕು ಎಂದು ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗ್ದೂರಿಯವರು ಒತ್ತಾಯಿಸಿದ್ದಾರೆ.

ತೆಲಂಗಾಣ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕ ಹಾಗೂ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಹೈದರಾಬಾದ್ ಮತ್ತು ಬೀದರನ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ತಾಲ್ಲೂಕಿನ ಗಡಿಭಾಗದ ಕಾರಮುಂಗಿ ಹಾಗೂ ಔದತಪೂರ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ಶಿಕ್ಷಕರೊಂದಿಗೆ ಆಪ್ತ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

ಸ್ಥಳೀಯ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದಿಂದ ಈ ಭಾಗಕ್ಕೆ ಏನು ಅನುಕೂಲವಾಗಬೇಕು ಅದನ್ನು ಪ್ರಮಾಣಿಕ ಪ್ರಯತ್ನ ಮಾಡುವುದ್ದಾಗಿ ಆಶ್ವಾಸನೆ ನೀಡಿದರು. ಮುಂದಿನ ದಿನಗಳಲ್ಲಿ ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ನಿಯೋಗ ಗ್ರಾಮಗಳಿಗೆ ಭೇಟಿ ನೀಡುವಂತೆ ಒತ್ತಾಯಿಸಲಾಗುವುದು ಎಂದರು.

ಸ್ವತಂತ್ರದ ನಂತರ ನಮ್ಮ ಕಾರಮುಂಗಿ ಗ್ರಾಮದಲ್ಲಿ ಪೂಜ್ಯ ಚನ್ನಬಸವ ಪಟ್ಟದೇವರು ಹಚ್ಚಿರುವ ಕನ್ನಡದ ಜ್ಯೋತಿಯನ್ನು ಆರಿಸಲು ಬಿಡುವುದಿಲ್ಲ. ನಿರಂತರವಾಗಿ ಕನ್ನಡ ಉಳಿಸಲು ನಾನು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸರ್ವ ರೀತಿಯಿಂದ ದಾಖಲೆಗಳನ್ನು ಸಲ್ಲಿಸಿ ಕನ್ನಡ ಹೋರಾಟಕ್ಕೆ ಇಳಿದು ಕನ್ನಡ ಮಾಧ್ಯಮವನ್ನು ರಕ್ಷಣೆ ಮಾಡುತ್ತೇನೆ -ಕಾಶಿನಾಥ ಗಡ್ಡೆ, ಹೋರಾಟಗಾರ, ಮಾಜಿ ಸರಪಂಚ ಕಾರಮುಂಗಿ,

ಸಮಸ್ಯೆಗಳ ಸುಳಿಯಲ್ಲಿ ಕನ್ನಡ ಕಲಿಯುವ ಮಕ್ಕಳು : ಕನ್ನಡ ಮಾಧ್ಯಮಗಳ ಪ್ರಶ್ನೆ ಪತ್ರಿಕೆ ದೊರೆಯುವುದಿಲ್ಲ, 371 ಕಲಂ ಪ್ರಮಾಣ ಪತ್ರ ಸಿಗುತ್ತಿಲ್ಲ, ಮಾಧ್ಯಮ ಮೀಸಲಾತಿ ಸಿಗುತಿಲ್ಲ, ಶಿಕ್ಷಕರ ಕೊರತೆ, ದೇಶ ಸ್ವತಂತ್ರವಾಗಿ 7 ದಶಕ ಗತಿಸಿದರು ರತ್ನಾಪೂರ ಗ್ರಾಮಕ್ಕೆ ಇನ್ನೂ ಬಸ್ಸ ವ್ಯವಸ್ಥೆ ಇಲ್ಲ. ರಸ್ತೆ ಇಲ್ಲ, ವಿದ್ಯಾರ್ಥಿಗಳಿಗೆ ಹಾಸ್ಟಲ್ ಇಲ್ಲ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಇಲ್ಲ, ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಶಿಕ್ಷಣ ಮೊಟಕುಗೊಳಿ ಸುವ ಅನಿವಾರ್ಯತೆಯಿಂದ ವಿದ್ಯಾರ್ಥಿಗಳ ಭವಿಷ್ಯ ನಾಶವಾಗುತ್ತಿದೆ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಶೌಚಾಲಯವಿಲ್ಲ, ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್ ಇಲ್ಲ, ಶಾಲೆಯ ಅವರಣದಲ್ಲಿ ಕನ್ನಡ ಅಕ್ಷಗಳು ಮಾಯ (ಬೋರ್ಡ ಇಲ್ಲ) ಹೀಗೇ ಈ ಗಡಿ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಇದ್ದರು ಇಲ್ಲಿ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಈ ಭಾಗದಲ್ಲಿ ಶಿಕ್ಷಣದ ಮಹತ್ವ ಅರಿಯದ ಪಾಲಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ.

ನಾರಾಯಣಖೇಡದ ಮಂಡಲ ಶಿಕ್ಷಣಾಧಿಕಾರಿ  ಮನೋಹರ ಕಿಶೋರ್ ಮಾತನಾಡಿದರು. ತೆಲಂಗಾಣ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಡಾ. ವಿಠ್ಠಲ ಜೋಶಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಉಳಿಸುವುದು ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಿದೆ. ಕನ್ನಡ ಮಾಧ್ಯಮದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡಲಾಗುತ್ತದೆ ಎಂದರು.

ಡಾ. ರಾಜಕುಮಾರ್ ಹೆಬ್ಬಾಳೆ ಮಾತನಾಡಿ, ಈ ಭಾಗದಲ್ಲಿ ಕನ್ನಡ ಉಳಿಸಲು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕನ್ನಡ ಭಾಷೆ ಉಳಿಸಲು ಪ್ರಯತ್ನ ಮಾಡೋಣ ಎಂದರು. ಗ್ರಾಮದ ಹಿರಿಯರಾದ  ಕಾಶಿನಾಥ್ ಗಡ್ಡೆ , ಹಿರಿಯ ಶಿಕ್ಷಕ ಬಸವರಾಜ ಹಳ್ಳೆ, ಶಿಕ್ಷಕರ ಸಂಘದ ಕಾರ್ಯದರ್ಶಿ ಸೂರ್ಯಕಾಂತ, ಗಡಿನಾಡು ಕನ್ನಡಿಗ  ಶಿವಶರಣಪ್ಪ ಗಣೇಶಪೂರ, ಬಸವಪ್ಪ, ರವೀಂದ್ರರಾವ, ಸುರೇಶ ರಾಮಚಂದ್ರ, ಜ್ಯೋತಿ ದತ್ತಾರಾವ, ಶಿವಕುಮಾರ, ಜೀವನರಾವ, ಬಶೆಟ್ಟಿ, ಮಹಾದೇವ, ರಾಚಮ್ಮ, ಅಂಕುಶಾ, ಸಂತೋಷ, ಮೈಸೂರಿನ ದಿಲೀಪ ಸೇರಿದಂತೆ ಇತರ ಎಲ್ಲಾ ಕನ್ನಡ ಶಿಕ್ಷಕರು  ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!